Asianet Suvarna News Asianet Suvarna News

ಪುರೋಹಿತರಿಂದ ಜಾತಿ ಸೃಷ್ಟಿ ಎಂದ ಮೋಹನ್‌ ಭಾಗವತ್‌ ವಿರುದ್ಧ ಕೇಸ್‌ ದಾಖಲು

ಭಾಗವತ್‌ ಯಾವುದೇ ಜಾತಿ, ಸಮುದಾಯವನ್ನು ಉಲ್ಲೇಖಿಸಿ ಈ ಮಾತುಗಳನ್ನು ಹೇಳಿಲ್ಲ. ಅವರು ಹೇಳಿದ್ದು, ಜಾತಿ ಪದ್ಧತಿಯನ್ನು ಪ್ರೋತ್ಸಾಹಿಸಿದ ಹಳೆಯ ವಿಧ್ವಾಂಸರ ಬಗ್ಗೆ ಎಂದು ಆರ್‌ಎಸ್‌ಎಸ್‌ ಸ್ಪಷ್ಟಪಡಿಸಿದೆ.

case filed against mohan bhagwat in bihar over anti pandit remark ash
Author
First Published Feb 8, 2023, 12:06 PM IST

ಮುಜಫರ್‌ಪುರ: ದೇವರ ಮುಂದೆ ಎಲ್ಲರೂ ಸಮಾನರು. ಜಾತಿ ಸೃಷ್ಟಿ ಮಾಡಿದ್ದು ಪಂಡಿತರು, ಪುರೋಹಿತರು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ವಿರುದ್ಧ ಸ್ಥಳೀಯ ವಕೀಲ ಸುಧೀರ್‌ ಕುಮಾರ್‌ ಓಜಾ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಮೋಹನ್‌ ಭಾಗವತ್‌ ತಮ್ಮ ಹೇಳಿಕೆ ಮೂಲಕ ಬ್ರಾಹ್ಮಣರನ್ನು ಅವಹೇಳನ ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ಭಂಗವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಧೀರ್‌ ಕುಮಾರ್‌ ಓಜಾ ಮನವಿ ಮಾಡಿದ್ದಾರೆ. ಆದರೆ ಭಾಗವತ್‌ ಯಾವುದೇ ಜಾತಿ, ಸಮುದಾಯವನ್ನು ಉಲ್ಲೇಖಿಸಿ ಈ ಮಾತುಗಳನ್ನು ಹೇಳಿಲ್ಲ. ಅವರು ಹೇಳಿದ್ದು, ಜಾತಿ ಪದ್ಧತಿಯನ್ನು ಪ್ರೋತ್ಸಾಹಿಸಿದ ಹಳೆಯ ವಿಧ್ವಾಂಸರ ಬಗ್ಗೆ ಎಂದು ಆರ್‌ಎಸ್‌ಎಸ್‌ ಸ್ಪಷ್ಟಪಡಿಸಿದೆ.

ಬಿಹಾರದ (Bihar) ಮುಜಫರ್‌ಪುರ (Muzaffarpur) ಮೂಲದ ವಕೀಲ ಸುಧೀರ್ ಕುಮಾರ್ ಓಜಾ (Sudhir Kumar Ojha) ಅವರು ಐಪಿಸಿಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರ್‌ಎಸ್‌ಎಸ್ (RSS) ಮುಖ್ಯಸ್ಥರ ಹೇಳಿಕೆಯು ಪಂಡಿತರ (Pandit) ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಓಜಾ ಆರೋಪಿಸಿದ್ದಾರೆ. ಪ್ರಕರಣವನ್ನು ಫೆಬ್ರವರಿ 20 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದೂ ಸುಧೀರ್‌ ಕುಮಾರ್ ಓಜಾ ಹೇಳಿದರು. 

ಇದನ್ನು ಓದಿ: ದೇವರ ಪಾಲಿಗೆ ಎಲ್ಲರೂ ಒಂದೇ; ಜಾತಿ ಸೃಷ್ಟಿ ಮಾಡಿದ್ದು ಧರ್ಮ ಗುರುಗಳು: ಮೋಹನ್‌ ಭಾಗವತ್‌

ಈ ವಕೀಲ ಬಾಲಿವುಡ್‌ ನಟರು, ರಾಜಕಾರಣಿಗಳು ಸೇರಿ ಸರಣಿ ದೂರುಗಳನ್ನು ಸಲ್ಲಿಸಲು ಹೆಸರುವಾಸಿಯಾಗಿದ್ದಾರೆ. ಸುಧೀರ್‌ ಕುಮಾರ್ ಓಜಾ ತಮ್ಮ ಇತ್ತೀಚಿನ ಅರ್ಜಿಯಲ್ಲಿ, ಧಾರ್ಮಿಕ ಭಾವನೆಗಳಿಗೆ ಉಂಟಾದ ನೋವು ಮತ್ತು ಸಾರ್ವಜನಿಕ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಮೋಹನ್‌ ಭಾಗವತ್ (Mohan Bhagwat) ಅವರ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಪ್ರಾರ್ಥಿಸಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್‌ಎಸ್‌ಎಸ್ ಮುಖ್ಯಸ್ಥರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಹಾಗೂ, ಮೋಹನ್‌ ಭಾಗವತ್‌ ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸಲು ಉದ್ದೇಶಿಸಿದ್ದಾರೆ ಎಂದೂ ಸುಧೀರ್‌ ಕುಮಾರ್ ಓಜಾ ಹೇಳಿದ್ದಾರೆ. 

ದೇವರ ಮುಂದೆ ಎಲ್ಲರೂ ಸಮಾನರು. ಆತನ ಮುಂದೆ ಜಾತಿ, ಪಂಗಡ ಎಂಬುದೆಲ್ಲಾ ಇಲ್ಲ. ಇದು ಸೃಷ್ಟಿಯಾಗಿದ್ದು ಧರ್ಮ ಗುರುಗಳಿಂದ. ಇದು ತಪ್ಪು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಕಾರ್ಮಿಕರ ಕೆಲಸದ ಬಗ್ಗೆ ಗೌರವ ಇಲ್ಲದಿರುವುದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣ. ಎಲ್ಲ ಕೆಲಸಗಳನ್ನೂ ಗೌರವಿಸುವ ಕೆಲಸ ಆಗಬೇಕು. ಒಟ್ಟಾರೆ ಉದ್ಯೋಗದಲ್ಲಿ ಶೇ.10ರ ಷ್ಟು ಮಾತ್ರವೇ ಸರ್ಕಾರಿ ಉದ್ಯೋಗ, ಉಳಿದ ಉದ್ಯೋಗದ ಪಾಲು ಶೇ. 20. ವಿಶ್ವದ ಯಾವುದೇ ದೇಶ ಶೇ. 30ಕ್ಕಿಂತ ಹೆಚ್ಚಿನ ಉದ್ಯೋಗ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಜನರು ಉದ್ಯೋಗದ ಹಿಂದೆ ಓಡುವುದು ಬಿಡಬೇಕು ಎಂದು ಹೇಳಿದ್ದರು. 

ಇದನ್ನೂ ಓದಿ: ಗೋಮಾಂಸ ತಿಂದವ್ರನ್ನೂ ಹಿಂದೂ ಧರ್ಮಕ್ಕೆ ಮರಳಿ ಕರೆತರಬಹುದು: RSS ನಾಯಕ ದತ್ತಾತ್ರೇಯ ಹೊಸಬಾಳೆ

ಅಲ್ಲದೆ, ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಎಲ್ಲವೂ ಒಂದೇ, ಅಭಿಪ್ರಾಯಗಳು ಮಾತ್ರ ಭಿನ್ನವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (ಫೆಬ್ರವರಿ 5ರ ಭಾನುವಾರ ಹೇಳಿದ್ದರು. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ರವೀಂದ್ರ ನಾಟ್ಯ ಮಂದಿರದ ಸಭಾಂಗಣದಲ್ಲಿ ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌ ಈ ರೀತಿ ಹೇಳಿದ್ದಾರೆ.

ನಾವು ಜೀವನೋಪಾಯವನ್ನು ಗಳಿಸಿದಾಗ, ಸಮಾಜದ ಬಗ್ಗೆ ನಮಗೆ ಜವಾಬ್ದಾರಿಯೂ ಇರುತ್ತದೆ. ಪ್ರತಿಯೊಂದು ಕೆಲಸವೂ ಸಮಾಜದ ಒಳಿತಿಗಾಗಿ ಇರುವಾಗ, ಯಾವುದೇ ಕೆಲಸವು ಹೇಗೆ ದೊಡ್ಡದು, ಚಿಕ್ಕದು ಅಥವಾ ವಿಭಿನ್ನವಾಗಿರುತ್ತದೆ? ಎಂದೂ ಮೋಹನ್‌ ಭಾಗವತ್‌ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇದ್ದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್‌

Follow Us:
Download App:
  • android
  • ios