Asianet Suvarna News Asianet Suvarna News

ಬಿಹಾರ ವಲಸಿಗರ ಮೇಲೆ ದಾಳಿ ವದಂತಿ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಕೇಸ್‌

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ನೋಡುವುದು ನಿರಾಶಾದಾಯಕವಾಗಿದೆ. ನಾವು, ತಮಿಳು ಜನರು, "ಜಗತ್ತು ಒಂದೇ" ಎಂಬ ಪರಿಕಲ್ಪನೆಯನ್ನು ನಂಬುತ್ತೇವೆ ಮತ್ತು ನಮ್ಮ ಉತ್ತರ ಭಾರತೀಯ ಸ್ನೇಹಿತರ ವಿರುದ್ಧ ಪ್ರತ್ಯೇಕತಾವಾದ ಮತ್ತು ಕೆಟ್ಟ ದ್ವೇಷವನ್ನು ಅನುಮೋದಿಸುವುದಿಲ್ಲ ಎಂದು ಅಣ್ಣಾಮಲೈ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದರು.

case against tamil nadu bjp chief amid rumours of attack on bihar migrants ash
Author
First Published Mar 5, 2023, 3:57 PM IST

ಚೆನ್ನೈ (ಮಾರ್ಚ್‌ 5, 2023): ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆ ವದಂತಿ ಪ್ರಕರಣ ಹಿನ್ನೆಲೆ ಅಲ್ಲಿನ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಕೆ. ಅಣ್ಣಾಮಲೈ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಶನಿವಾರ ಹೊಣೆಗಾರರನ್ನಾಗಿ ಮಾಡಿದ್ದರು. ಆದರೆ, ಇಂದು ತಮಿಳುನಾಡು ಪೊಲೀಸರು ಅಣ್ಣಾಮಲೈ ವಿರುದ್ಧ ಗುಂಪುಗಳ ನಡುವೆ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.  

ಬಿಜೆಪಿ ರಾಜ್ಯ ಘಟಕದ  (BJP State Unit) ಮುಖ್ಯಸ್ಥರ (Chief) ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಇತರ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳ ಅಡಿಯಲ್ಲಿ ಸೈಬರ್ ಕ್ರೈಂ ವಿಭಾಗವು  (Cyber Crime Division) ಆರೋಪ ಮಾಡಿದೆ. ಅಲ್ಲದೆ, ಅಧಿಕಾರಿಗಳ ಪ್ರಕಾರ, ಘಟನೆಯ ಬಗ್ಗೆ ಬಿಜೆಪಿ ಬಿಹಾರ (BJP Bihar) ಟ್ವಿಟ್ಟರ್‌ ಖಾತೆದಾರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ತಮಿಳ್ನಾಡಲ್ಲಿ ಬಿಹಾರಿಗಳ ಕೊಲೆ ವದಂತಿ: ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್‌

ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ (Annamalai) ನಿನ್ನೆ ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರು ತಮಿಳುನಾಡಿನಲ್ಲಿ (Tamil Nadu) ಸುರಕ್ಷಿತವಾಗಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) (DMK) ಮತ್ತು ಅದರ ಮೈತ್ರಿ ಪಕ್ಷದ ನಾಯಕರು ಅವರ ಮೇಲಿನ ದ್ವೇಷಕ್ಕೆ ಕಾರಣ ಎಂದು ಹೇಳಿದ್ದರು. ಹಾಗೂ, ರಾಜ್ಯದಲ್ಲಿ ಬಿಹಾರದ ಜನರ ಮೇಲಿನ ದಾಳಿಯ ಬಗ್ಗೆ ಸುಳ್ಳು ಸುದ್ದಿ ಹರಡುವುದನ್ನು ವಿರೋಧಿಸಿದ ಅವರು, ತಮಿಳರು ಉತ್ತರ ಭಾರತೀಯರ ವಿರುದ್ಧ "ಪ್ರತ್ಯೇಕತೆ" ಮತ್ತು "ನೀಚ ದ್ವೇಷ" ವನ್ನು ಬೆಂಬಲಿಸುವುದಿಲ್ಲ ಎಂದೂ ಹೇಳಿದ್ದರು.

ಹಾಗೆ, "ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ನಕಲಿ ಸುದ್ದಿಗಳನ್ನು ನೋಡುವುದು ನಿರಾಶಾದಾಯಕವಾಗಿದೆ. ನಾವು, ತಮಿಳು ಜನರು, "ಜಗತ್ತು ಒಂದೇ" ಎಂಬ ಪರಿಕಲ್ಪನೆಯನ್ನು ನಂಬುತ್ತೇವೆ ಮತ್ತು ನಮ್ಮ ಉತ್ತರ ಭಾರತೀಯ ಸ್ನೇಹಿತರ ವಿರುದ್ಧ ಪ್ರತ್ಯೇಕತಾವಾದ ಮತ್ತು ಕೆಟ್ಟ ದ್ವೇಷವನ್ನು ಅನುಮೋದಿಸುವುದಿಲ್ಲ ಎಂದು ಅಣ್ಣಾಮಲೈ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದರು.

ಇದನ್ನೂ ಓದಿ: ಲೋಕಾಯುಕ್ತ ಇಲ್ಲದ ಕಾರಣ ಕಾಂಗ್ರೆಸ್‌ ಆಳ್ವಿಕೆಯಲ್ಲಿ ಇಂತಹ ಹಲವು ಕೇಸ್‌ ಮುಚ್ಚಿಹೋಗಿವೆ: ಸಿಎಂ ಬೊಮ್ಮಾಯಿ

ಅಲ್ಲದೆ, ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಣ್ಣಾಮಲೈ, "ಉತ್ತರ ಭಾರತೀಯರ ಬಗ್ಗೆ ಡಿಎಂಕೆ ಸಂಸದರ ನೀಚ ಕಾಮೆಂಟ್‌ಗಳು, ಡಿಎಂಕೆ ಸಚಿವರು ಅವರನ್ನು ಪಾನಿಪುರಿ ವಾಲಾ ಎಂದು ಕರೆಯುವುದು ಮತ್ತು ಅವರ ಮೈತ್ರಿ ಪಾಲುದಾರ ಪಕ್ಷ ಅವರ ವಲಸೆಗೆ ಒತ್ತಾಯಿಸುತ್ತಿರುವುದು ಇಂದು ನಾವು ನೋಡುತ್ತಿರುವುದನ್ನು ಪ್ರಚೋದಿಸಿದೆ" ಎಂದೂ ಹೇಳಿದ್ದರು. ಹಾಗೂ, ಜನರು, ಸರ್ಕಾರ ಮತ್ತು ಪೊಲೀಸರು ಡಿಎಂಕೆ ಮತ್ತು ಅವರ ಮೈತ್ರಿ ಪಕ್ಷದ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ ಎಂದೂ ಅವರು ಹೇಳಿದ್ದರು.

ಆದರೂ, ತಮಿಳುನಾಡು ಪೊಲಿಸರು, ಅಣ್ಣಾಮಲೈ, ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಟ್ನಾ ಮೂಲದ ಪತ್ರಕರ್ತ ದೈನಿಕ್ ಭಾಸ್ಕರ್ ಸಂಪಾದಕ ಪ್ರಶಾಂತ್ ಉಮ್ರಾವ್, 'ತನ್ವೀರ್ ಪೋಸ್ಟ್' ಟ್ವಿಟ್ಟರ್‌ ಹ್ಯಾಂಡಲ್‌ನ ಮಾಲೀಕ ಮೊಹಮ್ಮದ್ ತನ್ವೀರ್ ಮತ್ತು ಶುಭಂ ಶುಕ್ಲಾ ವಿರುದ್ಧವೂ ವಲಸೆ ಕಾರ್ಮಿಕರ ಮೇಲಿನ ದಾಳಿಗೆ ಸಂಬಂಧಿಸಿದಂತೆ "ಸುಳ್ಳು" ಸುದ್ದಿ ಹರಡಿದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.  ವಲಸೆ ಕಾರ್ಮಿಕರ ಮೇಲೆ ಹಲ್ಲೆ ಮಾಡುವುದನ್ನು ತೋರಿಸುವ, ಹಲವಾರು ಉದ್ದೇಶಿತ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ತಮಿಳುನಾಡಿನಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರಲ್ಲಿ ರಾಜ್ಯಾದ್ಯಂತ ಭೀತಿಯನ್ನು ಸೃಷ್ಟಿಸಲಾಯಿತು.

ಇದನ್ನೂ ಓದಿ: ಹತ್ರಾಸ್‌ ಗ್ಯಾಂಗ್‌ರೇಪ್‌, ಕೊಲೆ ಕೇಸ್‌: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್‌; ಒಬ್ಬರು ಮಾತ್ರ ದೋಷಿ

Follow Us:
Download App:
  • android
  • ios