Asianet Suvarna News Asianet Suvarna News

ಹೆದ್ದಾರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರು, ವಾಹನ ನಿಲ್ಲಿಸಿ ನೆರವಿಗೆ ಧಾವಿಸಿದ CM Shinde !

ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುತ್ತಿದ್ದ ಸಿಎಂ ಏಕನಾಥ್ ಶಿಂಧೆಗೆ ಭಯಾನಗ ದೃಶ್ಯ ಕಣ್ಣಿಗೆ ಬಿದ್ದಿದೆ. ಹೆದ್ದಾರಿಯಲ್ಲಿ ಕಾರೊಂದು ಹೊತ್ತಿ ಉರಿಯುತ್ತಿರುವ ದೃಶ್ಯದಿಂದ ಸಿಎಂ ಶಿಂಧೆ, ತಕ್ಷಣ ಕಾರು ಹಾಗೂ ಬೆಂಗಾವಲು ವಾಹನ ನಿಲ್ಲಿಸಿ ಸಂತ್ರಸ್ತರ ನೆರವಿಗೆ ಧಾವಿಸಿದ ಘಟನೆ ನಡೆದಿದೆ.

Car caught fire at Mumbai Highway Maharastra cm Enkanth shinde stops convoy and stepped out to help victims ckm
Author
First Published Sep 13, 2022, 4:28 PM IST

ಮುಂಬೈ(ಸೆ.13): ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬೆನ್ನಲ್ಲೇ ಆಟೋವಾಲ ಸಿಎಂ, ಕಾಮನ್ ಸಿಎಂ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಸಿಎಂ ಆದ ಬಳಿಕವೂ ಶಿಂಧೆ ಕಾಮನ್‌ಮ್ಯಾನ್ ಪಟ್ಟ ಉಳಿಸಿಕೊಂಡಿದ್ದಾರೆ. ಇದೀಗ ಹೆದ್ದಾರಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರ ನೆರವಿಗೆ ಧಾವಿಸುವ ಮೂಲಕ ಏಕನಾಥ್ ಶಿಂಧೆ ಮತ್ತೆ ಮಾನವೀಯತೆ ಮರೆದಿದ್ದಾರೆ. ಏಕನಾಥ್ ಶಿಂಧೆ ಕಾರ್ಯಕ್ರಮ ಮುಗಿಸಿ ಮುಂಬೈ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಕಾರು ನಿಲ್ಲಿಸಲು ಸೂಚಿಸಿದ ಏಕನಾಥ್ ಶಿಂಧೆ ಕಾರು ಪ್ರಯಾಣಿಕರ ಬಳಿಗೆ ಧಾವಿಸಿದ್ದಾರೆ. ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕಾರು ನಿಲ್ಲಿಸಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಕಾರು ಹೊತ್ತಿ ಉರಿದಿದೆ. ಇದೇ ವೇಳೆ ಶಿಂಧೆ ಇದೇ ರಸ್ತೆ ಮೂಲಕ ಸಾಗಿದ್ದಾರೆ. ಹೀಗಾಗಿ ಘಟನೆ ಗಮನಿಸಿ ಪ್ರಯಾಣಿಕರ ಬಳಿ ಬಂದು ಎಲ್ಲಾ ನೆರವು ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿ, ಎಲ್ಲರ ಆರೋಗ್ಯ ವಿಚಾರಿಸಿದ್ದಾರೆ.

ವಿಲೆ ಪರ್ಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಐಷಾರಾಮಿ ಕಾರು ತಾಂತ್ರಿಕ ಕಾರಣಗಳಿಂದ ಹೊತ್ತಿ(Car Fire) ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಡ ರಾತ್ರಿ ಈ ಘಟನೆ ಸಂಭವಿಸಿದೆ. ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ವೇಳೆ ಸಿಎಂ ಏಕನಾಥ್ ಶಿಂಧೆ(CM Eknath Shinde) ಘಟನೆ ಗಮನಿಸಿ ಪ್ರಯಾಣಿಕರಿಗೆ ನೆರವು ನೀಡಿದ್ದಾರೆ. 

ಕಪಿಲ್‌ ಸಿಬಲ್‌ ಆವೇಶದ ನಡುವೆಯೂ ಶಿವಸೇನೆ ವಿವಾದವನ್ನು ಮತ್ತೆ ಮುಂದೂಡಿದ ಸುಪ್ರೀಂ ಕೋರ್ಟ್!

ಕಾರಿನ ಚಾಲಕನ ಬಳಿ ಮಾತನಾಡಿದ ಸಿಎಂ ಶಿಂಧೆ(Maharastra) ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಎರಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಅಧಿಕಾರಿಗಳ ತಂಡ ಹೊತ್ತಿ ಉರಿದ ಕಾರು ಪ್ರಯಾಣಿಕರಿಗೆ ಇತರ ನೆರವು ನೀಡಿದ್ದಾರೆ. ಶಿಂಧೆ ನೆರವಿಗೆ ಧಾವಿಸಿದ ದೃಶ್ಯ, ಚಾಲಕನ ಬಳಿಕ ಮಾತನಾಡುತ್ತಿರುವ ದೃಶ್ಯ ವೈರಲ್(Viral Video) ಆಗಿದೆ.

 

 

ಶಿವಸೇನೆ ಶಾಸಕಾಂಗ ಕಚೇರಿ ಶಿಂಧೆ ಬಣದ ವಶಕ್ಕೆ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಶಾಸಕಾಂಗ ಪಕ್ಷಕ್ಕೆ ನೀಡಲಾಗಿರುವ ಕಚೇರಿಯನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಬಣ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಕಚೇರಿಯ ಬಾಗಿಲಿಗೆ ಮರಾಠಿಯಲ್ಲಿ ಮಾಹಿತಿ ಹಾಕಲಾಗಿದ್ದು ಅದರಲ್ಲಿ, ‘ಈ ಕಚೇರಿಯನ್ನು ಶಿವಸೇನೆ ಶಾಸಕಾಂಗ ಪಕ್ಷದ ಸೂಚನೆ ಅನ್ವಯ ಮುಚ್ಚಲಾಗಿದೆ’ ಎಂದು ಬರೆಯಲಾಗಿದೆ.

ಖಾತೆ ಹಂಚಿಕೆ, ಫಡ್ನವಿಸ್‌ಗೆ ಗೃಹ, ಗ್ರಾಮೀಣ ಅಭಿವೃದ್ಧಿ ಉಳಿಸಿಕೊಂಡ ಶಿಂಧೆ!

ಮಹಾ ವಿಧಾನ ಭವನದಲ್ಲಿ ಶಿಂಧೆ ಬಣ-ಎನ್‌ಸಿಪಿ ಶಾಸಕ ಹೊಯ್‌ಕೈ
ಮಹಾರಾಷ್ಟ್ರದ ವಿಧಾನ ಭವನದ ಆವರಣದಲ್ಲಿ ಶಿಂಧೆ ಬಣದ ಶಾಸಕರು ಹಾಗೂ ವಿಪಕ್ಷ ನಾಯಕರು ಪರಸ್ಪರರ ವಿರುದ್ಧ ಘೋಷಣೆ ಕೂಗಿದ ಘಟನೆ ಬುಧವಾರ ನಡೆದಿದೆ. ಈ ನಡುವೆ ಇಬ್ಬರು ಶಾಸಕರು ಕೈಕೈ ಮಿಲಾಯಿಸಿದ್ದೂ ವರದಿಯಾಗಿದೆ. ವಿಧಾನ ಭವನದ ಮೆಟ್ಟಿಲುಗಳ ಮೇಲೆ ಎನ್‌ಸಿಪಿ ನಾಯಕರು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಾಸಕರು ಪರಸ್ಪರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ನಡುವೆಯೇ ಮಾತಿಗೆ ಮಾತು ಬೆಳೆದು ಶಾಸಕ ಮಹೇಶ್‌ ಶಿಂಧೆ ಹಾಗೂ ಎನ್‌ಸಿಪಿ  ಅಮೋಲ್‌ ಮಿಟ್‌ಕಾರಿ ಕೈಕೈ ಮಿಲಾಯಿಸಿದ್ದಾರೆ. ಬಳಿಕ 2 ಪಕ್ಷಗಳ ಕೆಲ ಶಾಸಕರು ಮಧ್ಯಪ್ರವೇಶಿಸಿ ಹೊಡೆದಾಟ ನಿಲ್ಲಿಸಿದ್ದಾರೆ.

Follow Us:
Download App:
  • android
  • ios