ಹಿಮ ಪರ್ವತ ಗೆದ್ದ ಯೋಧರು: 17 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು!

ದೇಶಾದ್ಯಂತ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ| ನವದೆಹಲಿಯ ರಾಜಪಥ್’ದಲ್ಲಿ ಗಣ್ಯರ ಸಮ್ಮುಖದಲ್ಲಿ ಪಥಸಂಚಲನ| ಲಡಾಖ್’ನಲ್ಲಿ ಐಟಿಬಿಪಿ ಪೊಲೀಸರಿಂದ ಧ್ವಜಾರೋಹಣ| ಸುಮಾರು 17 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಧ್ವಜಾರೋಹಣ| ತ್ರಿವರ್ಣ ಧ್ವಜ ಹಾರಿಸಿ ‘ಭಾರತ್ ಮಾತಾ ಕೀ ಜೈ’ ಘೋಷಣೆ|

At 17 Thousand Feet Hight ITBP Personnel Celebrates Republic Day In Ladakh

ಲಡಾಖ್(ಜ.26): ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯ ರಾಜಪಥ್’ದಲ್ಲಿ ಗಣ್ಯರ ಸಮ್ಮುಖದಲ್ಲಿ ಪಥಸಂಚಲನ ನಡೆಯುತ್ತಿದೆ.

ಅತ್ತ ಲಡಾಖ್’ನಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸರು, ಹಿಮಚ್ಛಾದಿತ ಪರ್ವತ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.

ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!

ಇಂಡೋ-ಟಿಬೆಟ್ ಗಡಿಯಲ್ಲಿರುವ ಲಡಾಖ್’ನ ಸುಮಾರು 17 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಐಟಿಬಿಪಿ ಯೋಧರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ರಕ್ತವನ್ನೇ ಹೆಪ್ಪುಗಟ್ಟಿಸುವಷ್ಟು ಭೀಕರ ಚಳಿಯಲ್ಲಿ ಗಡಿ ಕಾಯುತ್ತಿರುವ ಐಟಿಬಿಪಿ ಯೋಧರು, ಭಯಂಕರ ಚಳಿಯನ್ನೂ ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಸಂಭ್ರಮಿಸಿದ್ದಾರೆ.

ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ!

ಶ್ವೇತವರ್ಣದ ಸಮವಸ್ತ್ರವನ್ನು ಧರಿಸಿದ ಯೋಧರು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ್ದಾರೆ. ಇಲ್ಲಿನ ತಾಪಮಾನ ಮೈನಸ್ 20 ಡಿಗ್ರಿಗೂ ಕೆಳಗೆ ಕುಸಿಯುವುದು ವಿಶೇಷ.

Latest Videos
Follow Us:
Download App:
  • android
  • ios