Asianet Suvarna News Asianet Suvarna News

BJP ವಿರುದ್ಧ ರೈತ ಪ್ರತಿಭಟನೆಗೆ ಪಂಜಾಬ್ ಸಿಎಂ ಪ್ರಚೋದನೆ; ಸತ್ಯ ಬಹಿರಂಗಪಡಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ!

  • ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತ ಪ್ರತಿಭಟನೆ ಅಸಲಿಯತ್ತು ಬಹಿರಂಗ
  • ಪಂಜಾಬ್ ಸಿಎಂ ಪ್ರಚೋದನೆಯಿಂದ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ
  • ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸೀಕ್ರೆಟ್ ಬಯಲು
Capt Amarender Singh provoked farmers to Delhi against BJP says Former Punjab congress chief ckm
Author
Bengaluru, First Published Jul 23, 2021, 6:53 PM IST
  • Facebook
  • Twitter
  • Whatsapp

ಪಂಜಾಬ್(ಜು.23): ಕೇಂದ್ರದ 3 ಕೃಷಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಪರ ವಿರೋಧಗಳು ಇವೆ. ಕಳೆದ ವರ್ಷ ನವೆಂಬರ್ ತಿಂಗಳಿನಿಂದ ದೆಹಲಿ ಗಡಿಯಲ್ಲಿ ಆರಂಭಗೊಂಡ ರೈತ ಪ್ರತಿಭಟನೆ ಇನ್ನೂ ನಡೆಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಅಸಲಿ ಕತೆ ಇದೀಗ ಬಹಿರಂಗವಾಗಿದೆ. ಬಿಜೆಪಿ ವಿರುದ್ಧ ರೈತನ್ನು ಎತ್ತಿಕಟ್ಟಿರುವುದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್.

ರೈತ ಹೋರಾಟಕ್ಕೆ 7 ತಿಂಗಳು: ಪುನಃ ಮಾತುಕತೆಗೆ ಕೇಂದ್ರ ಆಹ್ವಾನ!

ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಕಾರಣ ಅಮರಿಂದರ್ ಸಿಂಗ್. ಈ ಮಾತನ್ನು ನಾವು ಹೇಳುತ್ತಿಲ್ಲ. ಸ್ವತಃ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಕಾರ್ ರೈತ ಪ್ರತಿಭಟನೆ ಹಿಂದಿನ ಕರಾಳ ಸತ್ಯ ಬಹಿರಂಗಪಡಿಸಿದ್ದಾರೆ.

"

ಬಿಜೆಪಿ ವಿರುದ್ಧ ರೈತರನ್ನು ಪ್ರಚೋದಿಸಿ , ರೈತ ಪ್ರತಿಭಟನೆಗೆ ನಾಂದಿ ಹಾಡದಿದ್ದರೆ ಅವರ(ರೈತರ) ಕೋಪವನ್ನು ಪಂಜಾಬ್‌ನಲ್ಲಿ ನಾವು ಎದುರಿಸಬೇಕಾಗಿತ್ತು. ಆದರೆ ಸಿಎಂ ಅಮರಿಂದರ್ ಸಿಂಗ್, ಕೃಷಿ ಕಾಯ್ದೆ ಹೆಸರಿನಲ್ಲಿ ರೈತರನ್ನು ಬಿಜೆಪಿ ವಿರುದ್ಧ ಪ್ರಚೋದಿಸಿ ರೈತರ ಬೃಹತ್ ಪ್ರತಿಭಟನೆಗೆ ಕಾರಣರಾದರು. ಇದು ನಮ್ಮ ಸಿಎಂ ಅವರ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ಸುನಿಲ್ ಜಕಾರ್ ಹೇಳಿದ್ದಾರೆ.

ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!

ರೈತ ಪ್ರತಿಭಟನೆ ಹಾಗೂ ರೈತ ಸಂಘಟನೆಗಳ ಬೇಡಿಕೆ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು. ಕೃಷಿ ಕಾಯ್ದೆಯ ಯಾವ ಅಂಶ ತಿದ್ದುಪಡಿ ಮಾಡಬೇಕು ಅನ್ನೋ ಕೇಂದ್ರದ ಪ್ರಶ್ನೆಗೆ ಉತ್ತರಿಸಿದ ರೈತ ಸಂಘಟನೆ, ಸಂಪೂರ್ಣ ಕಾಯ್ದೆ ರದ್ದು ಮಾಡಲು ಪಟ್ಟು ಹಿಡಿದಿದೆ. ಈ ಕುರಿತು ರೈತರ 11 ಸಭೆಗಳನ್ನು ನಡೆಸಲಾಗಿದೆ. 

ಎಲ್ಲಾ ಸಭೆಗಳು ವಿಫಲವಾಗಿದೆ. ರೈತ ಪ್ರತಿಭಟನೆ ಹೆಸರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದ ರೈತ ಸಂಘಟನೆಗಳು ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಗೆ ಹಾಕಿತ್ತು. ದೆಹಲಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಸುಮಾರು 500ಕ್ಕೂ ಹೆಚ್ಚಿನ ಪೊಲೀಸರು ಈ ಟ್ರಾಕ್ಟರ್ ರ್ಯಾಲಿಯಲ್ಲಿ ಗಾಯಗೊಂಡಿದ್ದರು.

ಸದ್ಯ ಪ್ರತಿಭಟನೆ ಚುರುಕುಗೊಳಿಸಿರುವ ರೈತರು, ಸಂಸತ್ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಆದರೆ ಪೊಲೀಸರು ಅವಕಾಶ ನೀಡದ ಕಾರಣ ಇದೀಗ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios