* ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿ ರೈತ ಪ್ರತಿಭಟನೆಗೆ 7 ತಿಂಗಳು ಪೂರ್ಣ* ದೆಹಲಿ, ಪಂಜಾಬ್, ಹರ್ಯಾಣದ ಹಲವೆಡೆ ರೈತರು ಪ್ರತಿಭಟನೆ * ರೈತ ಹೋರಾಟಕ್ಕೆ 7 ತಿಂಗಳು: ಪುನಃ ಮಾತುಕತೆಗೆ ಕೇಂದ್ರ ಆಹ್ವಾನ
ನವದೆಹಲಿ(ಜೂ.27): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿ ರೈತ ಪ್ರತಿಭಟನೆಗೆ 7 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ದೆಹಲಿ, ಪಂಜಾಬ್, ಹರ್ಯಾಣದ ಹಲವೆಡೆ ರೈತರು ಪ್ರತಿಭಟನೆ ನಡೆಸಿದರು.
ಈ ನಡುವೆ ಪ್ರತಿಭಟನೆ ಕೈಬಿಡಿ, ಸರ್ಕಾರ ರೈತರೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕರೆ ಮತ್ತೊಮ್ಮೆ ನೀಡಿದ್ದಾರೆ. ಸರ್ಕಾರ ಮತ್ತು ರೈತರ ನಡುವೆ ಈಗಾಗಲೇ 11 ಸುತ್ತಿನ ಮಾತುಕತೆ ನಡೆದಿದೆ.
ಪ್ರತಿಭಟನೆ:
ಪಂಜಾಬ್, ಹರ್ಯಾಣ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಜ್ಞಾಪನಾ ಪತ್ರ ನೀಡುವ ಉದ್ದೇಶದ ರೈತರ ಪ್ರತಿಭಟನಾ ರಾರಯಲಿಯನ್ನು ಬಿಗಿ ಪೊಲೀಸ್ ಬಂದೋಬಸ್‌್ತ ಮೂಲಕ ತಡೆಯಲಾಯಿತು. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿ ದೆಹಲಿಯ ಸಿಂಘೂ, ಟಿಕ್ರಿ, ಗಾಜಿಪುರ ಗಡಿ ಮತ್ತು ಚಂಢೀಗಡದ ಮೊಹಾಲಿ, ಪಂಚಕುಲ ಮತ್ತಿತರ ಕಡೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಹಮ್ಮಿಕೊಳ್ಳಲಾಗಿತ್ತು.
ಟಿಕಾಯತ್ ಬಂಧನ ಸುಳ್ಳು:
ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಬಂಧಿಸಲಾಗಿದೆ ಎಂದು ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ದೆಹಲಿ ಪೊಲೀಸರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಇಂಥ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
