ರಾವತ್ ನಿಧನಕ್ಕೆ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ ಕಾಶ್ಮೀರಿ ಜನರು ಭದ್ರತೆ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾವತ್ ಶ್ರಮಿಸಿದ್ದನ್ನು ನೆನೆದ ಜನ ಕಾಶ್ಮೀರಕ್ಕೆ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದ ಕಾಶ್ಮೀರಿಗರು

ಜಮ್ಮು ಮತ್ತು ಕಾಶ್ಮೀರ (ಡಿ.10:) ಭಾರತದ IAF ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ( Bipin Rawat) ಸೇರಿದಂತೆ 13 ಮಂದಿಗೆ ಕಾಶ್ಮೀರದ (Kashmir) ಜನರು ಗುರುವಾರ ಶ್ರದ್ಧಾಂಜಲಿ ಸಲ್ಲಿಸಲು ಅನೇಕ ಸಂಖ್ಯೆಯಲ್ಲಿ ನೆರೆದಿದ್ದರು. ಗಡಿ ನಿಯಂತ್ರಣ ರೇಖೆ (LOC) ಬಳಿಯ ಬಾರಾಮುಲ್ಲಾ, (Baramulla) ಕುಪ್ವಾರಾ, (Kupwara) ಕೆರಾನ್ (Keran) ಮತ್ತು ಮಚ್ಚಲ್ (Machhal) ಸೆಕ್ಟರ್‌ನಲ್ಲಿ ದುರಂತದಲ್ಲಿ ಮಡಿದ ಎಲ್ಲರಿಗೂ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಶ್ರೀನಗರ ಮೂಲದ ಡಿಫೆನ್ಸ್ ಪಿಆರ್‌ಒ ಕರ್ನಲ್ ಎಮ್ರಾನ್ ಮುಸಾವಿ ಹೇಳಿದ್ದಾರೆ. ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದ ನೊಂದ ಮಚ್ಚಲ್ ಗ್ರಾಮದ ಸುಮಾರು 150 ಕ್ಕೂ ಹೆಚ್ಚು ನಿವಾಸಿಗಳು ಅವರ ಸ್ಮರಣಾರ್ಥ ಕ್ಯಾಂಡಲ್ ಲೈಟ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ಎರಡು ನಿಮಿಷ ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.

"

ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭದ್ರತೆ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾವತ್ ಅವರು ಅವಿರತ ಪ್ರಯತ್ನಗಳನ್ನು ಮಾಡಿದ್ದಾರೆ. ಇದನ್ನು ಎಂದಿಗೂ ಕಾಶ್ಮೀರಿಗಳು ನೆನಪಿಸಿಕೊಳ್ಳುತ್ತಾರೆ ಎಂದು ಮುಸಾವಿ ಹೇಳಿದ್ದಾರೆ. 

ಗಡಿ ಭದ್ರತಾ ರೇಖೆಯ ಕೆರಾನ್‌ನಲ್ಲಿ ಸ್ಥಳೀಯರು ಕಿಶನ್‌ಗಂಗಾ ನದಿಯ ದಡದಲ್ಲಿ ಮಾತ್ರವಲ್ಲ ಬಾರಾಮುಲ್ಲಾ ಪಟ್ಟಣದ ಶೇರ್ವಾನಿ ಸಭಾಂಗಣದಲ್ಲಿ ನೆರೆದ ಜನರು ಕೂಡ ಜನರಲ್ ರಾವತ್‌ಗೆ ಅವರಿಗೆ ಮೇಣದ ಬತ್ತಿ ಹಚ್ಚಿ ಗೌರವ ನಮನ ಸಲ್ಲಿಸಿದರು ಎಂದು ಮುಸಾವಿ ಮಾಹಿತಿ ನೀಡಿದರು.

Army Helicopter Crash: ಅತೀ ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಬಿಪಿನ್‌ರ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು

ಇನ್ನು ಟ್ವಿಟ್ಟರ್ ನಲ್ಲಿ ಆಸೀಂ ಖಾನ್ ಎಂಬುವವರು ಈ ಬಗ್ಗೆ ಬರೆದುಕೊಂಡಿದ್ದು, ಕಾಶ್ಮೀರದ ಜನರಾದ ನಾವು ಜನರಲ್ ಬಿಪಿನ್ ರಾವತ್ ಅವರು ಕಾಶ್ಮೀರಕ್ಕೆ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಅವರು ಯಾವಾಗಲೂ ಕಾಶ್ಮೀರಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಕಾಶ್ಮೀರದ ಬಹುತೇಕ ಎಲ್ಲಾ ಜಿಲ್ಲೆಗಳ ಜನರು ಸಿಡಿಎಸ್ ಜನರಲ್ ಬಿಪಿನ್ ರಾವತ್, ಶ್ರೀಮತಿ ರಾವತ್ ಮತ್ತು ಇತರ 11 ಅಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ಧಾರೆ ಎಂದು ಬರೆದುಕೊಂಡಿದ್ದಾರೆ.

Scroll to load tweet…

Bipin Rawat Chopper Crash: 2 ವಿಚಕ್ಷಣಾ ವಿಮಾನ ಕಳಿಸಿದ್ವಿ ಎಂದ ಸೂಲೂರ್ ಬೇಸ್, ನಿರಾಕರಿಸಿದ ಮದ್ರಾಸ್ ರೆಜಿಮೆಂಟ್!

ರಾವತ್ ಅಂತ್ಯಕ್ರಿಯೆಗೆ (cremation) ಗೌರವಾರ್ಥವಾಗಿ ಶ್ರೀಲಂಕಾ, ಭೂತಾನ್ ಹಾಗೂ ನೇಪಾಳ ತಮ್ಮ ದೇಶದ ಸೇನಾಧಿಕಾರಿಗಳನ್ನು ಭಾರತಕ್ಕೆ ಕಳುಹಿಸಿದೆ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅಂತ್ಯಕ್ರಿಯೆ ಇಂದು ದೆಹಲಿಯ ಕಂಟೋನ್ಮೆಂಟ್ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ನಡೆಯಲಿದೆ. ರಾವತ್ ಸೇರಿ ಸೇನಾಧಿಕಾರಿಗಳ ನಿಧನಕ್ಕೆ ಅಮೆರಿಕ, ರಷ್ಯಾ, ಇಸ್ರೇಲ್, ಯುಕೆ, ಆಸ್ಟ್ರೇಲಿಯಾ ಪೋಲಾಂಡ್, ಜೆಕ್ ರಿಪಬ್ಲಿಕ್, ಮಾಲ್ಡೀವ್ಸ್, ಪಾಕಿಸ್ತಾನ, ಚೀನಾ, ಜಪಾನ್, ತೈವಾನ್, ಜರ್ಮನಿ, ಸಿಂಗಾಪೂರ್, ಯುರೂಪೋ, ಸ್ವೀಡನ್, ಬಾಂಗ್ಲಾದೇಶ, ಓಮನ್, ಇರಾನ್, UA, ಗ್ರೀಸ್, ನೇಪಾಳ, ಭೂತಾನ್, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳು ಸಂತಾಪ ಸೂಚಿಸಿದೆ.

Final Salute to Bipin Rawat: ಶಾ, ರಾಜನಾಥ್‌ ಸಿಂಗ್ ಸೇರಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ !

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​(Bipin Rawat) ಹಾಗೂ ಅವರ ಪತ್ನಿ ಮಧುಲಿಕಾ ರಾವತ್ (Madhulika Rawat)​​ ಹಾಗೂ ಇತರೆ 11 ಮಂದಿಯನ್ನು ಹೊತ್ತು ಸಾಗುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​​ ತಮಿಳುನಾಡಿನ ಕೂನೂರ್​​ನಲ್ಲಿ ಡಿಸೆಂಬರ್ 8ರಂದು ದುರಂತಕ್ಕೀಡಾಗಿತ್ತು. ವೆಲ್ಲಿಂಗ್ಟನ್​ನ ಡಿಫೆನ್ಸ್​ ಸರ್ವೀಸ್​ ಸ್ಟಾಫ್​​ ಕಾಲೇಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಎಂಐ 15 ವಿ5 ಹೆಲಿಕಾಪ್ಟರ್​​​ ದುರಂತಕ್ಕೀಡಾಗಿತ್ತು.