Asianet Suvarna News Asianet Suvarna News

Final Salute to Bipin Rawat: ಶಾ, ರಾಜನಾಥ್‌ ಸಿಂಗ್ ಸೇರಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ !

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ದೆಹಲಿ ನಿವಾಸದಲ್ಲಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ
*ಸಂಜೆ ಹೊತ್ತಿಗೆ  ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ

Home Minister Amit Shah, Rahul Gandhi pay tribute to CDS Bipin Rawat at delhi mnj
Author
Bengaluru, First Published Dec 10, 2021, 12:44 PM IST
  • Facebook
  • Twitter
  • Whatsapp

ನವದೆಹಲಿ(ಡಿ. 10) ಹೆಲಿಕಾಪ್ಟರ್‌ ದುರಂತದಲ್ಲಿ (IAF Chopper Crash) ಸಾವಿಗೀಡಾದ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (CDS General Bipin Rawat) ಅವರ ಅಂತ್ಯಸಂಸ್ಕಾರವನ್ನು ಸಕಲ ಸೇನಾ ಗೌರವದೊಂದಿಗೆ (Full Military Honours) ಶುಕ್ರವಾರ ಸಂಜೆ  ನೆರವೇರಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾವತ್‌ ಮತ್ತು ಪತ್ನಿ ಮಧುಲಿಕಾ (Madhulika) ಅವರ ಕಳೇಬರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಧ್ಯಾಹ್ನ 2ರ ತನಕ ಬಿಪಿನ್‌ ರಾವತ್‌ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. 

"

ಅಮಿತ್ ಶಾ, ರಾಜನಾಥ್‌ ಸಿಂಗ್  ಸೇರಿದಂತೆ ದೇಶದ ಉನ್ನತ ಸೇನಾ ಪಡೆಗಳ ಉನ್ನತ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು  ಭಾರತದ ಮೊದಲ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಜತೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಸಂಸದ ರಾಜೀವ್‌ ಚಂದ್ರಶೇಖರ್‌‌, ಯೋಗಿ ಆದಿತ್ಯನಾಥ್‌, ಸದಾನಂದಗೌಡ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. 

"

 

 

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಹರೀಶ್ ಸಿಂಗ್ ರಾವತ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಡಿಎಂಕೆ ನಾಯಕರಾದ ಎ ರಾಜಾ ಮತ್ತು ಕನಿಮೋಳಿ ಸೇರಿದಂತೆ ಹಲವರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದಾರೆ. ಬಿಪಿನ್‌ ರಾವತ್‌ ಹಾಗೂ ಅವರ ಪತ್ನಿ ಮಧುಲಿಕಾ ಅಂತಿಮ ದರ್ಶನ ಪಡೆಯಲು ಅವರ ನಿವಾಸದ ಹೊರಗಡೆ ಜನರ ದಂಡೇ ಜಮಾವಣೆಗೊಂಡಿದ್ದು ದರ್ಶನ ನೀಡುವಂತೆ ಒತ್ತಾಯಿಸಿದ್ದಾರೆ. ರಾಷ್ಟ್ರ ರಕ್ಷಕನ ಅಂತಿಮ ದರ್ಶಮ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸಂಜೆ ಹೊತ್ತಿಗೆ ರಾವತ್‌ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಬ್ರಾರ್‌ ಸ್ವ್ಕೇರ್ (brar square) ರುದ್ರ ಭೂಮಿಗೆ ತೆಗದುಕೊಂಡು ಹೋಗಲಾಗುತ್ತದೆ. ರಾವತ್‌ ನಿವಾಸದಿಂದ 9ಕಿ ಮೀ ಅಂತಿಮ ಯಾತ್ರೆ ನಡೆಯಲಿದೆ. ಸಕಲ ಸೇನಾ ಗೌರವದೊಂದಿಗೆ ಬ್ರಾರ್‌ ಸ್ವ್ಕೇರ್ ರುದ್ರಭೂಮಿಯಲ್ಲಿ ಬಿಪಿನ್‌ ರಾವತ್ ಅಂತಿಮ ಸಂಸ್ಕಾರ ನಡೆಯಲಿದೆ. 

"

ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳಿಗೆ ಮೋದಿ ಗೌರವ ನಮನ!

ನಿನ್ನೆ ತಮಿಳುನಾಡಿನಿಂದ(Tamil Nadu) ದೆಹಲಿಯ ಪಾಲಮ್ ವಾಯು ನೆಲೆಗೆ(Palam Airbase Delhi)  ವಾಯು ಸೇನೆ ವಿಮಾನದ ಮೂಲಕ ಪಾರ್ಥೀವ ಶರೀರ ಆಗಮಿಸಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಗಲಿದ ಸೇನಾಧಿಕಾರಿಗಳಿಗ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ್ದರು.

Bipin rawat Chopper Crash: ಹೇಗಿತ್ತು ನೀಲಗಿರಿ ಅರಣ್ಯದ ಹವಾಮಾನ? ದುರಂತಕ್ಕೆ ಇದೂ ಕಾರಣವೇ?

ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath singh) ಹಾಗೂ ಪ್ರಧಾನಿ ನರೇಂದ್ರ ಮೋದಿ((PM Narendra Modi) ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮಡಿದ 12 ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸರ್ಕಾರ ಕುಟುಂಬದ ಜೊತೆಗಿರುವುದಾಗಿ ಧೈರ್ಯ ತುಂಬಿದ್ದಾರೆ. ಪಾಲಮ್ ವಾಯುನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜನಾಥ್ ಸಿಂಗ್ ಕೂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜನಾಥ್ ಸಿಂಗ್ ಕೂಡ ಕುಟುಂಬಸ್ಥರ ಭೇಟಿಯಾಗಿದ್ದಾರೆ. ಮೋದಿ, ರಾಜನಾಥ್ ಸಿಂಗ್ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajit Doval), ಮೂರು ಸೇನಾ ಮುಖ್ಯಸ್ಥರು ಅಗಲಿದೆ ಸೇನಾಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ. 

"

ಮೃತ ವೀರರಿಗೆ ತಮಿಳ್ನಾಡಲ್ಲಿ ಹೃದಯಸ್ಪರ್ಶಿ ವಿದಾಯ!

ಹೆಲಿಕಾಪ್ಟರ್‌ ಪತನದಲ್ಲಿ ನಿಧನರಾದ ಸಶಸ್ತ್ರ ಪಡೆಯ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರ ಪತ್ನಿ ಸೇರಿ ಇನ್ನಿತರ 13 ಜನರ ಪಾರ್ಥಿವ ಶರೀರಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ (Tamil Nadu CM M K Stalin), ತೆಲಂಗಾಣ ರಾಜ್ಯಪಾಲೆ ತಮಿಳಿಸಾಯೊ ಸೌಂದರಾಜನ್‌ (Tamilisai Soundararajan) ಹಾಗೂ ಮಿಲಿಟರಿ ಸಿಬ್ಬಂದಿ ಗುರುವಾರ  ಪುಷ್ಪನಮನ ಸಲ್ಲಿಸಿದರು.‌

ನಂತರ ದೇಹಗಳನ್ನು ಮದ್ರಾಸ್‌ ರೆಜಿಮೆಂಟಲ್‌ ಕೇಂದ್ರ ವೆಲ್ಲಿಂಗ್ಟನ್‌ನಿಂದ ಸೂಳೂರು ವಾಯುಪಡೆಯ ಬೇಸ್‌ ಆವರಣಕ್ಕೆ ರವಾನಿಸಲಾಯಿತು. ರಸ್ತೆಯ ಇಕ್ಕೆಲದಲ್ಲಿ ನೆರೆದ ಸ್ಥಳೀಯರು ಕಂಬನಿಗರೆಯುತ್ತ ‘ಜೈ ಹಿಂದ್‌’, ’ವಂದೇ ಮಾತರಂ’ ‘ಭಾರತ ಮಾತಾ ಕೀ ಜೈ’ ಎಂದು ಜೈಕಾರ ಹಾಕಿದರು. ಶವ ಸಾಗಿಸುತ್ತಿರುವ ವಾಹನಗಳ ಮೇಲೆ ಹೂಮಳೆಗೈದು ಮೃತ ಸೇನಾಧಿಕಾರಿಗಳಿಗೆ ಶೃದ್ಧಾಂಜಲಿ ಸಲ್ಲಿಸಿದರು. ಪಾರ್ಥಿವ ಶರೀರಗಳನ್ನು ಸೂಳೂರಿನಿಂದ ಸಿ-130 ಜೆ ಏರ್‌ಕ್ರಾಫ್ಟ್‌ನಲ್ಲಿ ದೆಹಲಿಗೆ ರವಾನಿಸಲಾಗಿತ್ತು.

Follow Us:
Download App:
  • android
  • ios