ರಾಜೀನಾಮೆ ಘೋಷಿಸಿದ ಕಲ್ಕತಾ ಹೈಕೋರ್ಟ್ ಜಡ್ಜ್, ಲೋಕಸಭಾ ಚುನಾವಣಾ ಅಖಾಡಕ್ಕೆ ಎಂಟ್ರಿ!

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ರಾಜೀನಾಮೆ ಘೋಷಿಸಿದ್ದಾರೆ. ದೀದಿ ಸರ್ಕಾರದ ಅಕ್ರಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿ ಭಾರಿ ಕೋಲಾಹಲ ಸೃಷ್ಟಿಸಿದ್ದ ನ್ಯಾಯಮೂರ್ತಿ ಇದೀಗ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಯಾವ ಪಕ್ಷ ಸೇರಿಕೊಳ್ಳುತ್ತಿದ್ದಾರೆ? ಇಲ್ಲಿದೆ ಮಾಹಿತಿ.
 

Calcutta high court judge abhijit gangopadhyay announces resignation likely to join Politics ckm

ಕೋಲ್ಕತ್ತಾ(ಮಾ.03) ಜಡ್ಜ್ ವರ್ಸಸ್ ಜಡ್ಜ್ ಅಪರೂಪ ಪ್ರಕರಣದ ಮೂಲಕ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಕಲ್ಕತಾ ಹೈಕೋರ್ಟ್ ಜಡ್ಜ್ ಅಭಿಶೇಕ್ ಗಂಗೋಪಾಧ್ಯಾಯ ರಾಜೀನಾಮೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿರುದ್ಧ ಮಹತ್ವದ ನಿರ್ಧಾರ ತೆಗೆದುಕೊಂಡು ಜಟಾಪಟಿಗೆ ಕಾರಣವಾಗಿದ್ದ ಅಭಿಜಿತ್ ಗಂಗೋಪಾದ್ಯಾಯ ಇದೀಗ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ತಮ್ಮ ರಾಜಕೀಯ ಪ್ರವೇಶವನ್ನು ಅಭಿಜಿತ್ ಗಂಗೋಪಾದ್ಯಯ ಖಚಿತಪಡಿಸಿದ್ದಾರೆ.  ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿಕೊಳ್ಳು ಸಾಧ್ಯತೆ ಎಂದು ಮೂಲಗಳು ಹೇಳುತ್ತಿವೆ.

ಮಾರ್ಚ್ 5 ರಂದು ಸ್ಥಾನದಿಂದ ಹೊರಬರುವುದಾಗಿ ಅಭಿಜಿತ್ ಗಂಗೋಪಾದ್ಯ ಹೇಳಿದ್ದಾರೆ. ಆಡಳಿತರೂಢ ತೃಣಮೂಲ ಕಾಂಗ್ರೆಸ್ ಸತತವಾಗಿ ಸವಾಲು ಹಾಕಿತ್ತು. ಇದರಿಂದ ನಾನು ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಟಿಎಂಸಿಗೆ ಧನ್ಯವಾದ ಹೇಳುತ್ತೇನೆ ಎಂದು ಅಭಿಜಿತ್ ಗಂಗೋಪಾಧ್ಯಾಯ ಹೇಳಿದ್ದಾರೆ. ಸದ್ಯ ಯಾವ ಪಕ್ಷಕ್ಕೆ ಸೇರಿಕೊಳ್ಳಬೇಕು ಅನ್ನೋ ಕುರಿತು ಚರ್ಚಿಸುತ್ತಿದ್ದೇನೆ. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

ಅಪರಿಚಿತ ಮಹಿಳೆಗೆ 'ಹೇ ಡಾರ್ಲಿಂಗ್' ಅಂತೀರಾ? ಇದು ಲೈಂಗಿಕ ದೌರ್ಜನ್ಯ ಎಚ್ಚರ!

ಬಿಜೆಪಿ, ಕಾಂಗ್ರೆಸ್ ಅಥವಾ ಕಮ್ಯೂನಿಸ್ಟ್ ಪಕ್ಷಗಳ ಪೈಕಿ ಒಂದಕ್ಕೆ ಸೇರಿಕೊಳ್ಳುವ ಕುರಿತು ಚರ್ಚಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ತೃಣಮೂಲ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದಿದ್ದಾರೆ. ಈ ಮೂಲಕ ರಾಜಕೀಯ ಪ್ರವೇಶವನ್ನು ಅಭಿಜಿತ್ ಗಂಗೋಪಾಧ್ಯಾಯ ಖಚಿತಪಡಿಸಿದ್ದಾರೆ. ಇದೀಗ ಪಶ್ಚಿಮ ಬಂಗಾಳದಲ್ಲಿನ ಲೋಕಸಭಾ ಚುನಾವಣೆ ಕಣ ಮತ್ತಷ್ಟು ರಂಗೇರಲಿದೆ.

ಟಿಎಂಸಿ ಸರ್ಕಾರದ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಅಕ್ರಮವಾಗಿ ನಕಲಿ ಜಾತಿ ಪ್ರಮಾಣಪತ್ರ ವಿಚಾರಣೆಯನ್ನು ಸಿಬಿಐ ತನಿಖೆಗೆ ಆದೇಶಿಸಿದ ಅಭಿಜಿತ್ ಗಂಗೋಪಾಧ್ಯಯ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಕಾರಣ ಈ ಪ್ರಕರಣ ಸಂಬಂಧ  ನ್ಯಾ। ಅಭಿಜಿತ್‌ ಗಂಗೋಪಾಧ್ಯಾಯ ನೇತೃತ್ವದ ಏಕಸದಸ್ಯ ಪೀಠಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಅದರ ವಿಚಾರಣೆ ನಡೆಸಿದ್ದ ಗಂಗೋಪಾಧ್ಯಾಯ ಅವರು ಸಿಬಿಐ ತನಿಖೆಗೆ ಕಳೆದ ವಾರ ಆದೇಶಿಸಿದ್ದರು. ಇದರ ವಿರುದ್ಧ ತೃಣಮೂಲ ಕಾಂಗ್ರೆಸ್‌ ಸರ್ಕಾರ ವಿಭಾಗೀಯ ಪೀಠದ ಕದ ಬಡಿದಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ। ಸೌಮೇನ್‌ ಸೇನ್‌ ಅವರಿದ್ದ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದರು.

ಶಾಜಹಾನ್ ಬಂಧಿಸಿ: ಬಂಗಾಳ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್ ಜಡ್ಜ್ ನಡುವಿನ ಕಾದಾಟಕ್ಕೆ ಬ್ರೇಕ್ ಹಾಕಿತ್ತು.ಎರಡೂ ಪೀಠಗಳ ಎದುರು ನಡೆಯುತ್ತಿದ್ದ ಎಲ್ಲ ವಿಚಾರಣೆಗಳನ್ನೂ ನಿಲ್ಲಿಸುವಂತೆ ತಾಕೀತು ಮಾಡಿತ್ತು.

Latest Videos
Follow Us:
Download App:
  • android
  • ios