ನೋಯ್ಡಾದ ಉಬರ್ ಚಾಲಕ ಅಬ್ದುಲ್ ಖಾದಿರ್ ತಮ್ಮ ಕ್ಯಾಬ್‌ನಲ್ಲಿ ಪ್ರಯಾಣಿಕರಿಗೆ ತಿಂಡಿ, ಔಷಧಿ, ಆಟಿಕೆ, ವೈಫೈ, ಶೂ ಪಾಲಿಶ್ ಮುಂತಾದ ಸೌಲಭ್ಯಗಳನ್ನು ಒದಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ. "ಚಲಿಸುವ 1BHK ಫ್ಲಾಟ್" ಎಂದು ಕರೆಯಲ್ಪಡುವ ಈ ಕ್ಯಾಬ್‌ನಲ್ಲಿ ದೇಣಿಗೆ ಪೆಟ್ಟಿಗೆಯೂ ಇದೆ. ಆದರೆ, ಕೆಲವರು ಸುರಕ್ಷತೆ ಮತ್ತು ವೈಫೈ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೋಯ್ಡಾದ ಉಬರ್ ಕ್ಯಾಬ್ (Noida Uber Cab) ಒಂದು ವೈರಲ್ ಆಗಿದೆ. ಅಬ್ದುಲ್ ಖಾದಿರ್ ಈ ಕಾರಿನ ಚಾಲಕ. ಕ್ಯಾಬ್ ನೋಡಿದ ಜನರು ಅದು ಚಲಿಸುವ 1BHK ಫ್ಲಾಟ್ನಂತೆ ಕಾಣುತ್ತೆ ಎಂದಿದ್ದಾರೆ. ಕ್ಯಾಬ್ ಒಳಗೆ ಪ್ರಯಾಣಿಕರಿಗೆ ತಿಂಡಿ, ಔಷಧಿ, ಆಟಿಕೆ, ವೈಫೈ ಮತ್ತು ಶೂ ಪಾಲಿಶ್ ಕೂಡ ಲಭ್ಯವಿದೆ. ಕ್ಯಾಬ್ ನಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಿರುವ ಕಾರಣ ಅಬ್ದುಲ್, ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದಾರೆ.
ಅಬ್ದುಲ್ ಕ್ಯಾಬ್ನಲ್ಲಿ ಕುಳಿತುಕೊಳ್ತಿದ್ದಂತೆ ಒಂದು ಸಣ್ಣ ಮನೆ ಪ್ರವಾಸಕ್ಕೆ ಹೊರಟಂತೆ ಭಾಸವಾಗುತ್ತದೆ. ಚಾಕೊಲೇಟ್ಗಳು, ಬಿಸ್ಕತ್ತುಗಳು, ಎನರ್ಜಿ ಡ್ರಿಂಕ್ಸ್, ನೀರಿನ ಬಾಟಲಿಗಳು ಮತ್ತು ಔಷಧಿಗಳನ್ನು ಸೀಟ್ ಹಿಂದೆ ಮತ್ತು ಬದಿಗಳಲ್ಲಿ ಸಣ್ಣ ಟ್ರೇಗಳಲ್ಲಿ ಇಡಲಾಗಿದೆ. ಮಕ್ಕಳಿಗಾಗಿ ಆಟಿಕೆಗಳು ಮತ್ತು ಪ್ರಯಾಣಿಕರಿಗೆ ಟಿಶ್ಯೂ ಪ್ಯಾಡ್ನಿಂದ ಹಿಡಿದು ಟೂತ್ ಬ್ರಷ್ಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. 

ವೈಫೈ ಸೌಲಭ್ಯ (WiFi facility) – ಔಷಧಿ : ಕ್ಯಾಬ್ಗಳಲ್ಲಿ ಉಚಿತ ವೈಫೈ ಸೌಲಭ್ಯವಿದೆ. ನೀವು ಪ್ರಯಾಣ ಮುಗಿಯುವವರೆಗೆ ಆರಾಮವಾಗಿ ಅಬ್ದುಲ್ ವೈಫೈ ಬಳಸಬಹುದು. ಯಾವುದೇ ಸಮಸ್ಯೆ ಎದುರಾದರೆ ಎನ್ನುವ ಕಾರಣಕ್ಕೆ ಔಷಧಿಗಳನ್ನು ಇಡಲಾಗಿದೆ. ಪ್ರಯಾಣಿಕರಿಗೆ ಅಬ್ದುಲ್ ಸೇವೆ ಇಷ್ಟವಾದ್ರೆ ತಮ್ಮ ಅಭಿಪ್ರಾಯವನ್ನು ಅಲ್ಲಿ ನಮೂದಿಸಲು ಅವಕಾಶವಿದೆ. ಡೈರಿಯಲ್ಲಿ ಪ್ರಯಾಣಿಕರು ಸೇವೆಯ ರಿಯಾಕ್ಷನ್ ನೀಡಬಹುದು. 

ದೇಣಿಗೆ ಬಾಕ್ಸ್ : ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಅಬ್ದುಲ್ ಕ್ಯಾಬ್ನಲ್ಲಿ ಸಣ್ಣ ಡೊನೆಷನ್ ಬಾಕ್ಸ್ ಸಹ ಇಟ್ಟಿದ್ದಾರೆ. ಅಷ್ಟೇ ಅಲ್ಲ ವೃತ್ತ ಪತ್ರಿಕೆಯಲ್ಲಿ ಬಂದ ಅತ್ಯುತ್ತಮ ಉಬರ್ ಕ್ಯಾಬ್ ಡ್ರೈವರ್ ಎಂಬ ಲೇಖನದ ಕಟ್ಟಿಂಗ್ ಕೂಡ ಇಟ್ಟಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ : ಇನ್ಸ್ಟಾಗ್ರಾಮ್ನ @sheannoying ಎಂಬ ಖಾತೆಯಲ್ಲಿ ಅಬ್ದುಲ್ ಕ್ಯಾಬ್ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇಂದು ನಾನು 1BHK ನಲ್ಲಿ ಪ್ರಯಾಣಿಸುತ್ತಿದ್ದ ಅನುಭವವಾಯ್ತು. ಇದುವರೆಗಿನ ಅತ್ಯಂತ ಕೂಲ್ ಉಬರ್ ಸವಾರಿ ಇದು ಎಂದು ಬರೆದಿದ್ದಾರೆ. ಅಬ್ದುಲ್ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಜೀನಿಯಸ್, 5 ಸ್ಟಾರ್ ಡ್ರೈವರ್ ಎಂಬೆಲ್ಲ ಕಮೆಂಟ್ ಹಾಕಿದ್ದಾರೆ. ಶೂ ಪಾಲಿಶ್ ಇಟ್ಟಿರೋದು ಆಸಕ್ತಿಕರವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾವು ಪ್ರಯಾಣಕ್ಕೆ ಶುಲ್ಕ ಪಾವತಿ ಮಾಡ್ತಿಲ್ಲ, ರೂಮ್ ಗೆ ರೆಂಟ್ ನೀಡ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಅಬ್ದುಲ್ ಹೊಗಳಿದ್ರೆ, ಮತ್ತೆ ಕೆಲವರು ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ವಸ್ತುಗಳನ್ನು ಹಿಂದೆ ಇಟ್ಟುಕೊಂಡು ಪ್ರಯಾಣ ಬೆಳೆಸೋದು ಸೂಕ್ತವಲ್ಲ. ಕಾರನ್ನು ಹಠಾತ್ ಬ್ರೇಕ್ ಹಾಕಿದರೆ, ಹಿಂದೆ ಕುಳಿತಿದ್ದ ಪ್ರಯಾಣಿಕನಿಗೆ ಗಾಯವಾಗಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ವೈಫೈ ಡೇಟಾ ಬಳಕೆ ಕೂಡ ಸುರಕ್ಷಿತವಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕೆ ಇಂಥ ಸೌಲಭ್ಯ ನೀಡೋದು ಇದೇ ಮೊದಲಲ್ಲ. ಹಿಂದೆ ಕೂಡ ಅನೇಕ ಆಟೋ ಹಾಗೂ ಕ್ಯಾಬ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿವೆ. ಕ್ಯಾಬ್ ಚಾಲಕನೊಬ್ಬ, ಪೇಪರ್ ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆ ಮಾಡಿದ್ದ. ಇನ್ನೊಬ್ಬ ವ್ಯಕ್ತಿ ಆಟೋದಲ್ಲಿ ಗಿಡ ಬೆಳೆಸೋದು ಮಾತ್ರವಲ್ಲ ನೀರು, ಫ್ಯಾನ್ ಸೇರಿದಂತೆ ಹಸಿವಾದವರಿಗೆ ನೀಡಲು ಬಿಸ್ಕತ್ ಕೂಡ ಇಟ್ಟಿದ್ದ. 

Scroll to load tweet…