ಕುಡಿದು ತೂರಾಡಿದ ಯುವತಿಯನ್ನು ಸುರಕ್ಷಿತವಾಗಿ ಮನೆ ತಲುಪಿಸಿದ ಕ್ಯಾಬ್ ಚಾಲಕನಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ಯಾಬ್ ಪ್ರಯಾಣ ಹಾಗೂ ಯುವತಿಯನ್ನು ಮನೆಗೆ ತಲುಪಿಸಿದವರಿಗಿನ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. 

ಕೋಲ್ಕತಾ (ಡಿ.27) ಹಲವು ಘಟನೆಗಳು ದೇಶವನ್ನೇ ಬೆಚ್ಚಿ ಬೀಳಿಸಿದೆ.ಪ್ರಮುಖವಾಗಿ ಮಹಿಳೆಯರು , ಹೆಣ್ಣುಮಕ್ಕಳ ಮಲೆ ನಡೆಯುವ ಪ್ರಕರಣ. ಅದರಲ್ಲೂ ರಾತ್ರಿ ವೇಳೇ ಕ್ಯಾಬ್, ಆಟೋ ಹತ್ತಿದ ಬಳಿಕ ನಡೆದ ದುರ್ಘಟನೆಗಳ ಉದಾಹರಣೆಗಳು ಕಣ್ಣ ಮುಂದಿದೆ. ಇನ್ನು ಯುವತಿ ಸಂಪೂರ್ಣವಾಗಿ ಪಾನಮತ್ತವಾಗಿದ್ದಾಳೆ ಎಂದರೆ ಅಪಾಯದ ಸಾಧ್ಯತೆ ಹೆಚ್ಚು. ಆದರೆ ಇಲ್ಲೊಬ್ಬ ಕ್ಯಾಬ್ ಚಾಲಕ ಕುಡಿದು ತೂರಾಡುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ಮನಗೆ ತಲುಪಿಸಿದ್ದಾನೆ. ಇಷ್ಟೇ ಅಲ್ಲ ಪ್ರಯಾಣದ ನಡುವೆ ಪಾನಮತ್ತ ಯುವತಿ ತೂರಾಡುತ್ತಾ, ಆತಂಕದಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ತಾಳ್ಮೆಯಂದಲೇ ಉತ್ತರಿಸಿದ್ದಾನೆ. ಈ ಯುವತಿಯ ಪ್ರಯಾಣ, ಸುರಕ್ಷಿತವಾಗಿ ಮನಗೆ ತಲುಪಿಸಿದ ಈ ವಿಡಿಯೋ ಭಾರಿ ವೈರಲ್ ಆಗಿದೆ. ಆದರೆ ವೈರಲ್ ಬಳಿಕ ಕೆಲ ಸಮಸ್ಯೆಗಳು ಎದುರಾಗಿದೆ.

ಪಾನಮತ್ತ ಯುವತಿ ಮನೆಗೆ ಮರಳಲು ಕ್ಯಾಬ್ ಬುಕ್

ಗೆಳತಿಯರ ಜೊತೆ ಪಾರ್ಟಿಯಲ್ಲಿ ಪಾಲ್ಗೊಂಡ ಯುವತಿ ಮನೆಗೆ ಮರಳಲು ಕ್ಯಾಬ್ ಬುಕ್ ಮಾಡಿದ್ದಾಳೆ. ಆದರೆ ಪಾರ್ಟಿ ಸ್ಥಳದಿಂದ ಬಂದು ಕ್ಯಾಬ್ ಹತ್ತಲು ಯುವತಿ ಹರಸಾಹಸ ಪಟ್ಟಿದ್ದಾಳೆ.ಕಾರಣ ಪಾರ್ಟಿ ಸ್ಥಳದಿಂದ ಕ್ಯಾಬ್ ಬಳಿ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕ್ಯಾಬ್ ಚಾಲಕ ಆಕೆಯನ್ನು ಕರೆತಂದು ಕ್ಯಾಬ್‌ನಲ್ಲಿ ಕೂರಿಸಿ ಒಟಿಪಿ ಪಡೆದು ರೈಡ್ ಆರಂಭಿಸಿದ್ದಾನೆ.

ಒಂದೆಡೆ ರಾತ್ರಿ ಸಮಯ, ಮತ್ತೊಂದೆಡೆ ಯುವತಿ ಸಂಪೂರ್ಣವಾಗಿ ಪಾನಮತ್ತಳಾಗಿದ್ದಾಳೆ. ಮಾತನಾಡಲು ಸಾಧ್ಯವಾಗದ ಪರಿಸ್ಥಿತಿ. ಇದರ ನಡುವೆ ಆಕೆಯಲ್ಲಿ ಆತಂಕವೂ ಇದೆ. ನನ್ನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತಿದೆಯಾ ಎಂದು ಪದೇ ಪದೇ ಕೇಳಿದ್ದಾಳೆ. ಈ ವೇಳೆ ಯುವತಿಗೆ ತಾಳ್ಮೆಯಿಂದಲೇ ಉತ್ತರಿಸಿದ ಕ್ಯಾಬ್ ಚಾಲಕ, ಯಾವುದೇ ಭಯ ಬೇಡ, ಸುರಕ್ಷಿತವಾಗಿ ಮನೆಗೆ ತಲುಪಿಸುತ್ತೇನೆ. ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಉತ್ತರಿಸಿದ್ದಾನೆ.

ಯುವತಿ ತಾಯಿ ಜೊತೆ ಮಾತನಾಡಿದ ಕ್ಯಾಬ್ ಚಾಲಕ

ಇದರ ನಡುವೆ ಯುವತಿ ತಾಯಿಗೆ ಕರೆ ಮಾಡಿ ಕ್ಯಾಬ್‌ನಲ್ಲಿ ಬರುತ್ತಿರುವುದಾಗಿ ಹೇಳಿದ್ದಾಳೆ. ಮಗಳು ಪಾನಮತ್ತಳಾಗಿದ್ದಾಳೆ ಅನ್ನೋದು ಅರಿತ ತಾಯಿಗೆ ಆತಂಕ ಹೆಚ್ಚಾಗಿದೆ. ಈ ವೇಳೆ ತಾಯಿ ಜೊತೆ ಕ್ಯಾಬ್ ಚಾಲಕ ಮಾತನಾಡಿದ್ದಾನೆ. ಬಳಿಕ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾನೆ. ಇದೇ ವೇಳೆ ಲೈವ್ ಲೋಕೇಶನ್ ಹಂಚಿಕೊಂಡಿದ್ದಾನೆ. ಇದೇ ವೇಳೆ ಕುಡಿದು ಮನೆಗೆ ತೆರಳುತ್ತಿರುವ ತನಗೆ ತಾಯಿ ಬಯುತ್ತಾರೆ, ಚೀರಾಡುತ್ತಾರೆ ಎಂದು ಕ್ಯಾಬ್ ಚಾಲಕನ ಜೊತೆ ಹೇಳಿಕೊಂಡಿದ್ದಾಳೆ. ಇದೇ ವೇಳೆ ಇದಕ್ಕೆ ನೀವು ಅರ್ಹರು ಎಂದು ಜೋಕ್ ಮಾಡಿದ್ದಾನೆ.

ಮನೆ ಗೇಟ್ ತೆರೆದು ಕೊಟ್ಟ ಚಾಲಕ

ಲೋಕೇಶನ್ ತಲುಪಿದ ಬಳಿಕ ಕ್ಯಾಬ್ ಚಾಲಕ ಯುವತಿಯನ್ನು ಇಳಿಸಿ ಮನೆಯ ಗೇಟ್ ತೆರೆದುಕೊಟ್ಟಿದ್ದಾನೆ. ಆಕೆ ನಡೆಯಲು ಕಷ್ಟಪಡುತ್ತಿದ್ದರೂ ಯಾವುದೇ ಸಮಸ್ಯೆಗಳಿಲ್ಲದೇ ಮನೆ ತಲುಪಿದ್ದಾಳೆ ಎಂದು ಕ್ಯಾಬ್ ಚಾಲಕ ತನ್ನ ಕಾರಿನೊಳಗಿನ ಡ್ಯಾಶ್ ಕ್ಯಾಮೆರಾ ವಿಡಿಯೋ ರೆಕಾರ್ಡ್‌ನಲ್ಲಿ ಹೇಳಿದ್ದಾನೆ.

ಶುರುವಾಯ್ತು ಸಮಸ್ಸೆ

ಈ ಕ್ಯಾಬ್ ಚಾಲಕ ತನ್ನ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮಾತುಕತೆಗಳನ್ನು, ಹರಟೆಗಳನ್ನು ವಿಡಿಯೋ ಮಾಡಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾನೆ. ಈ ಪಾನಮತ್ತ ಯುವತಿಯ ವಿಡಿಯೋ ಕೂಡ ಪೋಸ್ಟ್ ಮಾಡುವುದಾಗಿ ಹೇಳಿದ್ದಾನೆ. ಯುವತಿ ಕೂಡ ಒಕೆ ಎಂದಿದ್ದಾಳೆ. ಆದರೆ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಯುವತಿಗೆ ಕರೆಗಳು, ಸಂದೇಶಗಳು ಬರತೊಡಗಿದೆ. ಹೀಗಾಗಿ ವಿಡಿಯೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾಳೆ. ಹೀಗಾಗಿ ಯುವತಿ ಮನವಿಯಂತೆ ವಿಡಿಯೋವನ್ನು ಪ್ರೈವೇಟ್ ಮಾಡಲಾಗಿದೆ.

View post on Instagram