Asianet Suvarna News Asianet Suvarna News

'ದೇಶದಲ್ಲಿ ಏ.25ರ ವೇಳೆಗೆ ಸೋಂಕು ತಾರಕಕ್ಕೆ!'

ಮಹಾರಾಷ್ಟ್ರದಲ್ಲಿ ಸೋಂಕು ಗರಿಷ್ಠಕ್ಕೆ?| ಐಐಟಿ ಕಾನ್ಪುರ ತಜ್ಞರ ಅಧ್ಯಯನ| ದೇಶದಲ್ಲಿ ಏ.25ರ ವೇಳೆಗೆ ಸೋಂಕು ತಾರಕಕ್ಕೆ| ನಂತರ ಇಳಿಕೆಯ ಪರ್ವ ಕಾಣಬಹುದು

By April 25 Covid Cases May reach peak in india says IIT kanpur experts pod
Author
Bangalore, First Published Apr 17, 2021, 2:21 PM IST

ನವದೆಹಲಿ(ಏ.17): ನಿತ್ಯವೂ 60000 ಕೇಸುಗಳ ಮೂಲಕ ಆತಂಕ ಹುಟ್ಟುಹಾಕಿರುವ ಮಹಾರಾಷ್ಟ್ರದಲ್ಲಿ ಕೊರೋನಾ 2ನೇ ಅಲೆ ತನ್ನ ಗರಿಷ್ಠ ಮಟ್ಟಮುಟ್ಟಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 3 ವಾರದ ಹಿಂದೆ ಮಹಾರಾಷ್ಟ್ರವು ಒಟ್ಟಾರೆ ಸೋಂಕಿನಲ್ಲಿ ಶೇ.60 ಪಾಲು ಹೊಂದಿತ್ತು. ಅದು ಈಗ ಶೇ.30ಕ್ಕೆ ಇಳಿದಿದೆ. ಇಷ್ಟುಕನಿಷ್ಠ ಕಳೆದ 2 ತಿಂಗಳಲ್ಲೇ ಮೊದಲು. ಆದರೆ ಇದೇ 3 ವಾರದ ಅವಧಿಯಲ್ಲಿ ದೇಶದಲ್ಲಿನ ದೈನಂದಿನ ಸೋಂಕು ಈ ಅವಧಿಯಲ್ಲಿ 52 ಸಾವಿರದಿಂದ 2.17 ಲಕ್ಷಕ್ಕೆ ಏರಿದೆ. ಅಂದರೆ 4 ಪಟ್ಟು ಹೆಚ್ಚಿದೆ.

ಮತ್ತೊಂದು ವಿಚಾರವೆಂದರೆ ಈ 3 ವಾರದ ಅವಧಿಯಲ್ಲಿ ಮಹಾರಾಷ್ಟ್ರದ ಕೇಸು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿದೆ. ಅಂದರೆ 2 ಪಟ್ಟು ಮಾತ್ರ. ಜೊತೆಗೆ ಕಳೆದ 10 ದಿನಗಳಿಂದ ಒಟ್ಟಾರೆ ಪ್ರಕರಣಗಳ ಸಂಖ್ಯೆ 60000ದ ಆಸುಪಾಸಿನಲ್ಲೇ ಇದ್ದು, ಸ್ಥಿರವಾಗಿರುವ ಲಕ್ಷಣ ಕಂಡುಬರುತ್ತಿದೆ. ಇದೆಲ್ಲಾ ಸೋಂಕು ಗರಿಷ್ಠ ಮಟ್ಟಮುಟ್ಟಿರಬಹುದಾದ ಲಕ್ಷಣಗಳು ಎಂದು ಐಐಟಿ-ಕಾನ್ಪುರ ಪ್ರಾಧ್ಯಾಪಕ ಮಣಿಂದರ್‌ ಅಗರ್‌ವಾಲ್‌ ಹೇಳಿದ್ದಾರೆ. ದೆಹಲಿ ಮತ್ತು ಛತ್ತೀಸ್‌ಗಢದಲ್ಲಿ ಮುಂದಿನ 7-10 ದಿನಗಳಲ್ಲಿ ಸೋಂಕು ಇಳಿ ಮುಖವಾಗಲಿದೆ. ಜೊತೆಗೆ ಈಗಿನ ಲೆಕ್ಕಾಚಾರದ ಅನ್ವಯ ಏ.25ರ ಹೊತ್ತಿಗೆ ದೇಶದಲ್ಲಿ ಸೋಂಕು ತಾರಕಕ್ಕೇರಿ ನಂತರ ಇಳಿಕೆ ಆಗಬುಹುದು ಎಂದು ಅಗರ್‌ವಾಲ್‌ ವಿಶ್ಲೇಷಿಸಿದ್ದಾರೆ.

ಐಐಟಿ-ಕಾನ್ಪುರದ ತಜ್ಞರು ಕಂಪ್ಯೂಟರ್‌ ಮಾಡೆಲ್‌ ಬಳಸಿ ಅಕ್ಟೋಬರ್‌ನಿಂದ ಫೆಬ್ರವರಿವರೆಗಿನ ಸೋಂಕು ಅಂದಾಜಿಸಿದ್ದರು. ಅದು ಬಹುತೇಕ ನಿಜವಾಗಿತ್ತು. ಏಪ್ರಿಲ್‌ ವೇಳೆ 2ನೇ ಅಲೆ ಏಳಬಹುದು ಎಂದು ಅವರು ಅಂದಾಜಿಸಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಂದುಕೊಂಡಿರಲಿಲ್ಲ.

Follow Us:
Download App:
  • android
  • ios