Asianet Suvarna News Asianet Suvarna News

Bus Catches Fire ವೈಷ್ಣೋ ದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ, 4 ಸಾವು, 22 ಮಂದಿ ಗಂಭೀರ!

  • ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಅವಘಡ
  • ಕತ್ರಾದಿಂದ ಜಮ್ಮುಗೆ ತೆರಳುತ್ತಿದ್ದ ಬಸ್‌ಗೆ ಹೊತ್ತಿಕೊಂಡ ಬೆಂಕಿ
  • 4 ಮಂದಿ ಸಜೀವ ದಹನ, 22 ಮಂದಿ ಗಂಭೀರವಾಗಿ ಗಾಯ
     
Bus carrying pilgrims to Vaishno Devi shrine caught fire near Katra in Jammu 4 dead few injured ckm
Author
Bengaluru, First Published May 13, 2022, 8:06 PM IST

ಜಮ್ಮು(ಮೇ.13): ಪವಿತ್ರ ವೈಷ್ಣೋ ದೇವಿ  ಮಂದಿರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್‌ಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಜೀವವಾಗಿ ದಹನವಾಗಿದ್ದರೆ, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕತ್ರಾದಿಂದ ಜಮ್ಮುಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಈ ಘಟನೆ ನಡೆದಿದೆ. 

ವೈಷ್ಣೋ ದೇವಿ ಮಂದಿರಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಕತ್ರಾ ಮೂಲ ಶಿಬಿರವಾಗಿದೆ. ಕತ್ರಾದಿಂದ ಜಮ್ಮುಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಬಸ್‌ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಬಸ್ ನಿಲ್ಲಿಸಲಾಗಿದೆ. ಬಸ್‌ನಲ್ಲಿದ್ದ ಯಾತ್ರಾರ್ಥಿಗಳು ಹೊರಕ್ಕೆ ಜಿಗಿಯಲು ಯತ್ನಿಸಿದ್ದಾರೆ. ಆದರೆ ಒಂದೇ ಸಮನೇ ಇಳಿಯಲು ಸಾಧ್ಯವಾಗದೆ ನಾಲ್ವರು ಸಜೀವ ದಹನವಾಗಿದ್ದಾರೆ. ಇನ್ನು 20 ಮಂದಿ ಗಾಯಗೊಂಡಿದ್ದಾರೆ.

'ಸೇಡಿನ ಜ್ವಾಲೆ': ಹಾಡಹಗಲೇ ಟ್ರಕ್‌ಗೆ ಬೆಂಕಿ ಹಚ್ಚಿದ ಕಾರು ಡ್ರೈವರ್!

ಬಸ್ ಅವಘಡದಲ್ಲಿ ನಾಲ್ವರು ಮೃತಪಟ್ಟಿರುವ ಕುರಿತು ಜಮ್ಮುವಿನ ಅಡೀಷನಲ್ ಡೈರೆಕ್ಟರ್ ಜನರಲ್ ಮುಕೇಶ್ ಸಿಂಗ್ ಖಚಿತಪಡಿಸಿದ್ದಾರೆ. ಅತೀಯಾದ ತಾಪಮಾನದಿಂದ ಬಸ್ ಇಂಧನ ಟ್ಯಾಂಕ್ ಬಿಸಿಯಾಗಿದೆ. ಇದರಿಂದ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಮೂಲಗಳು ಹೇಳಿವೆ. ಆದರೆ ಮುಕೇಶ್ ಸಿಂಗ್ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ ಎಂದಿದ್ದಾರೆ.

ಬಸ್ ಸ್ಫೋಟಗೊಳ್ಳಲು, ಬೆಂಕಿ ಹೊತ್ತಿಕೊಳ್ಳಲು ಕಾರಣವೇನು? ಬಸ್‌ನಲ್ಲಿ ಯಾರಾದರೂ ಸ್ಪೋಟಕವಿಟ್ಟಿದ್ದರೆ ಅನ್ನೋ ಕುರಿತು ತನಿಖೆ ನಡೆಯಲಿದೆ ಎಂದು ಮುಕೇಶ್ ಸಿಂಗ್ ಹೇಳಿದ್ದಾರೆ.

 

 

ವಿಜಯಪುರ: ಪ್ರಾಣದ ಹಂಗು ತೊರೆದು ರಾಷ್ಟ್ರ ಪಕ್ಷಿಯ ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ...!

ಸಿಡಿಲು ಬಡಿದು ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆಫೀಸ್‌ ವಸ್ತುಗಳು ಭಸ್ಮ
ದೇವರಹಿಪ್ಪರಗಿ ಪಟ್ಟಣದ ಇಂಡಿ ರಸ್ತೆಯಲ್ಲಿರುವ ಎಂಡಿಜಿ ಎಚ್‌ಪಿ ಗುತ್ತೇದಾರ ಗ್ಯಾಸ್‌ ಗೋಡೌನ್‌ದ ಹತ್ತಿರವಿರುವ ಆಫೀಸಿಗೆ ಸಿಡಿಲು ಬಿಡಿದ ಪರಿಣಾಮ ಗ್ಯಾಸ್‌ ಸಿಲೆಂಡರ್‌ ಸ್ಫೋಟಗೊಂಡು ಆಫೀಸ್‌ನಲ್ಲಿನ ಕಂಪ್ಯೂಟರ್‌ಗಳು, ಟಿವಿ ಹಾಗೂ ಆಫೀಸಿಗೆ ಸಂಬಂಧಪಟ್ಟಡಾಕುಮೆಂಟ್ಸ್‌ ಛಿದ್ರ ಛಿದ್ರವಾಗಿವೆ. ಗುರುವಾರ ಸಂಜೆ ಆಫೀಸಿನಲ್ಲಿ ಯಾರು ಇಲ್ಲದ ಸಮಯದಲ್ಲಿ ಸಿಡಿಲು ಬಿದ್ದ ಪರಿಣಾಮ ಆಫೀಸಿನಲ್ಲಿ ಇನ್‌ಸ್ಪೆಕ್ಷನ್‌ ಸಲುವಾಗಿ ಇದ್ದ ಕೆಲ ಸಿಲೆಂಡರ್‌ ಭಾರೀ ಸ್ಫೋಟಗೊಂಡ ಪರಿಣಾಮ ಆತಂಕ ಉಂಟಾಗಿತ್ತು. ಸಿಡಿಲಿನಿಂದ ಈ ಭಾಗದ ಕೆಲ ಮನೆಗಳ ಟಿವಿ ಹಾಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

ಚೀನಾದಲ್ಲಿ ವಿಮಾನಕ್ಕೆ ಬೆಂಕಿ: 40 ಪ್ರಯಾಣಿಕರಿಗೆ ಗಾಯ
ಚೀನಾದ ಟಿಬೇಟ್‌ ಏರಲೈನ್ಸ್‌ ವಿಮಾನ ರನ್‌ವೇ ಆಚೆಗೆ ಜಾರಿ ಬೆಂಕಿಗೆ ಆಹುತಿಯಾಗಿದ್ದು, ವಿಮಾನದಲ್ಲಿದ್ದ 40ಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ವರದಿಯಾಗಿದೆ. ಇದು ಕಳೆದ 2 ತಿಂಗಳಿನಲ್ಲಿ ಚೀನಾದಲ್ಲಿ ನಡೆದ 2ನೇ ವಿಮಾನ ಅಪಘಾತವಾಗಿದೆ.

113 ಪ್ರಯಾಣಿಕರು ಹಾಗೂ 9 ವಿಮಾನ ಸಿಬ್ಬಂದಿಗಳನ್ನೊಳಗೊಂಡ ಚಾಂಗ್ಕಿಂಗ್‌ನಿಂದ ನೈಂಗ್ಚಿಗೆ ತೆರಳುತ್ತಿದ್ದ ಟಿಬೇಟ್‌ ಏರಲೈನ್ಸ್‌ ವಿಮಾನ ಚಾಂಗ್ಕಿಂಗ್‌ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಮಾಡುತ್ತಿರುವ ವೇಳೆಯಲ್ಲಿ ರನ್‌-ವೇ ಯಿಂದ ಜಾರಿದೆ. ಇದರಿಂದಾಗಿ ತಗುಲಿದ ಬೆಂಕಿಯಲ್ಲಿ 40 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಪ್ಪು ದಟ್ಟಹೊಗೆ ಆವರಿಸಿದ್ದು, ಪ್ರಯಾಣಿಕರು ತುರ್ತು ದ್ವಾರ ಬಳಸಿ ವಿಮಾನದಿಂದ ಹೊರ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ರನ್‌ ವೇಯಿಂದ ಜಾರಿದಾಗ ವಿಮಾನದ ಎಂಜಿನ್‌ ನೆಲಕ್ಕೆ ಉಜ್ಜಿ ಘರ್ಷಣೆಯಿಂದ ಬೆಂಕಿ ತಗುಲಿದೆ ಎಂದು ತನಿಖಾ ತಂಡ ತಿಳಿಸಿದೆ. ಈ ಮೊದಲು ಮಾಚ್‌ರ್‍ 12 ರಂದು ನಡೆದ ಬೋಯಿಂಗ್‌ ವಿಮಾನ ದುರಂತದಲ್ಲಿ 132 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಮೃತಪಟ್ಟಿದ್ದರು.

Follow Us:
Download App:
  • android
  • ios