ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ, ಆರೋಪಿಗಳಿಗೆ ಬುಲ್ಡೋಜರ್ ಡ್ರಿಲ್!

ಖಾರ್ಗೋನ್ ನಗರದಲ್ಲಿ ಭಾನುವಾರ ನಡೆದ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ, ಕೆಲವು ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಇದರಿಂದಾಗಿ ಉದ್ರಿಕ್ತವಾಗಿದ್ದ ಇಡೀ ಖರ್ಗೋನ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಖಾರ್ಗೋನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಗ್ರಹ ಹೇಳಿದ್ದಾರೆ.

Bulldozer at the house of accused who pelted stones on Ram Navami procession in Madhya Pradesh san

ಭೋಪಾಲ್ (ಏ.11): ಖಾರ್ಗೋನ್ ನಗರದಲ್ಲಿ ಭಾನುವಾರ ರಾಮನವಮಿ ( Ram Navami ) ದಿನದಂದು ನಡೆದ ಹಿಂಸಾಚಾರದ ಪ್ರಕರಣದಲ್ಲಿ ಮಧ್ಯಪ್ರದೇಶದ (Madhya Pradesh ) ಸರ್ಕಾರ ತ್ವರಿತಗತಿಯಲ್ಲಿ ಕ್ರಮಕ್ಕೆ ಮುಂದಾಗಿದೆ. ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿದ್ದಲ್ಲದೆ, ವಾಹನಗಳಿಗೆ ಹಾಗೂ ಕೆಲ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸ್ಥಳೀಯ ಜಿಲ್ಲಾಡಳಿತ, ತ್ವರಿತವಾಗಿ ಆರೋಪಿಗಳನ್ನು ಗುರುತಿಸಿದ್ದು ಮಾತ್ರವಲ್ಲದೆ, ಅವರ ಮನೆಗಳನ್ನು ಬುಲ್ಡೋಜರ್ (Bulldozer) ಬಳಸಿ ಧ್ವಂಸ ಮಾಡಲಾಗಿದೆ. 

ನಗರದ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾದ ಛೋಟಿ ಮೋಹನ್ ಟಾಕೀಸ್ ( Choti Mohan Talkies )ಪ್ರದೇಶದಲ್ಲಿ ಸೋಮವಾರ ಭಾರೀ ಪೊಲೀಸ್ ವ್ಯವಸ್ಥೆಗಳೊಂದಿಗೆ ಆಗಮಿಸಿದ ಸರ್ಕಾರಿ ಅಧಿಕಾರಿಗಳು ಬುಲ್ಡೋಜರ್ ಗಳನ್ನು ಬಳಸಿ ಹಿಂಸಾಚಾರ ಎಸಗಿದ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸಿದರು.

ಇನ್ನೊಂದೆಡೆ ಈ ಕ್ರಮಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಹಿರಿಯ ಕಾಂಗ್ರೆಸ್ (Congress) ನಾಯಕ ದಿಗ್ವಿಜಯ್ ಸಿಂಗ್ (Digvijay Singh) ಈ ಕುರಿತಾಗಿ ಟ್ವೀಟ್ ಮಾಡಿದ್ದು, 'ಅತ್ಯಾಚಾರಿಗಳು ಮತ್ತು ಅತ್ಯಾಚಾರಿಗಳನ್ನು ಬೆಂಬಲಿಸುವವರ ಮೇಲೆ ಮಾಮು ಬುಲ್ಡೋಜರ್ ಕೆಲಸ ಮಾಡುವುದಿಲ್ಲ. ಅವರುಗಳನ್ನು ಕಂಡ ಕೂಡಲೇ ಬುಲ್ಡೋಜರ್‌ಗಳೂ ಕೂಡ ಓಡಿ ಹೋಗುತ್ತದೆ' ಎಂದು ಬರೆದಿದ್ದಾರೆ.

ಏಪ್ರಿಲ್ 10 ರಂದು, ರಾಮ ನವಮಿಯ ಪ್ರಯುಕ್ತ ಖಾರ್ಗೋನ್‌ನಲ್ಲಿ ಮೆರವಣಿಗೆಯನ್ನು ಸ್ಥಳೀಯವಾಗಿ ನಡೆಸಲಾಗಿತ್ಉತ. ಈ ಯಾತ್ರೆಯ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದು, ಬಳಿಕ ಇಡೀ ಪ್ರದೇಶದಲ್ಲಿ ಹಿಂಸಾಚಾರ ಆರಂಭವಾಯಿತು. ಹಿಂಸಾಚಾರದ ವೇಳೆ ಕೆಲವರು ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದಾರೆ. ಈ ಸಂಪೂರ್ಣ ಘಟನೆಯಲ್ಲಿ ಸಾರ್ವಜನಿಕರು ಸೇರಿದಂತೆ 20 ಪೊಲೀಸರು ಗಾಯಗೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದರು. ರಾಮನವಮಿ ಸಂದರ್ಭದಲ್ಲಿ ಖಾರ್ಗೋನ್ ನಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಸಿಎಂ ಹೇಳಿದ್ದಾರೆ. ಮಧ್ಯಪ್ರದೇಶದ ನೆಲದಲ್ಲಿ ಗಲಭೆಕೋರರಿಗೆ ಜಾಗವಿಲ್ಲ. ಈ ಗಲಭೆಕೋರರನ್ನು ಗುರುತಿಸಲಾಗಿದೆ, ಅವರನ್ನು ಬಿಡುಗಡೆ ಮಾಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಇಡಿ ಶಾಕ್

ಈ ವಿಷಯದ ಬಗ್ಗೆ ಮಾತನಾಡಿರುವ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈಗಾಗಲೇ ಇಂತಹ ಕ್ರಮವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು, ಇದು ಇಡೀ ದೇಶಕ್ಕೆ ಮಾದರಿಯಾಗುವಂಥ ಕ್ರಮ. 'ಈ ಹಿಂಸಾಚಾರದ ನಂತರ, ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಇಡೀ ಘಟನೆ ಬೆಳಕಿಗೆ ಬಂದ ತಕ್ಷಣ ಇಂತಹ ಕ್ರಮ ಕೈಗೊಳ್ಳಲಾಗುವುದು ಅದು ನಿದರ್ಶನವಾಗಲಿದೆ. ಮಧ್ಯಪ್ರದೇಶ ಶಾಂತಿಯ ನಾಡು. ಯಾವುದೇ ಸಂದರ್ಭದಲ್ಲೂ ಅದನ್ನು ಬದಲಾಯಿಸಲು ಬಿಡುವುದಿಲ್ಲ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.  'ಖಾರ್ಗೋನ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲಾ ಗಲಭೆಕೋರರನ್ನು ಗುರುತಿಸಲಾಗುತ್ತಿದೆ ಮತ್ತು ಇದುವರೆಗೆ 77 ಮಂದಿಯನ್ನು ಬಂಧಿಸಲಾಗಿದೆ ' ಎಂದು ಅವರು ಹೇಳಿದರು.

ಜಾರ್ಖಂಡ್‌ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!

ಖಾರ್ಗೋನ್ ನಗರದ ತಲಾಬ್ ಚೌಕ್ ಘರ್ಷಣೆಯು ಖಾಜಿಪುರ ಮತ್ತು ನಗರದ ಇತರ ಭಾಗಗಳಲ್ಲಿ ಘರ್ಷಣೆಗೆ ಕಾರಣವಾಯಿತು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಜಿಲ್ಲಾಧಿಕಾರಿ ಹೇಳಿದರು. ಖಾರ್ಗೋನ್ ನಗರದಿಂದ 60 ಕಿಮೀ ದೂರದಲ್ಲಿ, ಪಕ್ಕದ ಬರ್ವಾನಿ ಜಿಲ್ಲೆಯ ಕೋಮು ಸೂಕ್ಷ್ಮ ಸೆಧ್ವಾ ಬ್ಲಾಕ್‌ನಲ್ಲಿ ಇದೇ ರೀತಿಯ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು.

ದೇಶದ ವಿವಿದೆಡೆಯಲ್ಲಿ ಕಲ್ಲು ತೂರಾಟ
ಮಧ್ಯಪ್ರದೇಶ ಮಾತ್ರವಲ್ಲದೆ ರಾಮನವಮಿ ಮೆರವಣಿಗೆಯ ದಿನ ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯಗಳಲ್ಲೂ ಕಲ್ಲು ತೂರಾಟ ಹಾಗೂ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಗುಜರಾತ್ ನ ಖಂಬತ್ ನಲ್ಲಿ ನಡೆದ ಹಿಂಸಾಚಾರದಲ್ಲಿ9 ಜನರನ್ನು ಬಂಧಿಸಲಾಗಿದ್ದರೆ, ಈ ಹಿಂಸಾಚಾರದಲ್ಲಿ ಒಬ್ಬನ ಸಾವು ಕೂಡ ಆಗಿದೆ. ಹಿಮ್ಮತ್ ನಗರದಲ್ಲಿ 144 ಸೆಕ್ಷನ್ ಹಾಕಲಾಗಿದೆ. ಇನ್ನು ಜಾರ್ಖಂಡ್ ನ ಲೋಹರ್ದಾಗಾ ಜಿಲ್ಲೆಯಲ್ಲೂ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. 12ಕ್ಕೂ ಅಧಿಕ ಮೋಟಾರ್ ಸೈಕಲ್ ಗಳಿಗೆ ಈ ವೇಳೆ ಬೆಂಕಿ ಹಚ್ಚಲಾಗಿದೆ.

Latest Videos
Follow Us:
Download App:
  • android
  • ios