ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್ ಹೀಗಿದೆ..
ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂದಿನಿಂದ ಒಂದು ತಿಂಗಳುದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ನವದೆಹಲಿ (ಮೇ 30, 2023): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಗಳವಾರ 9 ವರ್ಷಗಳನ್ನು ಪೂರೈಸಲಿದೆ. ಲೋಕಸಭೆ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ 9ನೇ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಇಂದಿನಿಂದ ಒಂದು ತಿಂಗಳುದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇಡೀ ತಿಂಗಳು ಹಲವಾರು ಕಾರ್ಯಕ್ರಮ
- ವಿವಿಧ ಕ್ಷೇತ್ರಗಳ 1 ಲಕ್ಷ ಪ್ರಸಿದ್ಧ ವ್ಯಕ್ತಿಗಳಿಂದ ಕೇಂದ್ರ ಸರ್ಕಾರದ ಪರವಾಗಿ ಅಭಿಯಾನ
- 51 ಬಿಜೆಪಿ ನಾಯಕರಿಂದ ದೇಶಾದ್ಯಂತ ಸಭೆ. ಸರ್ಕಾರದ ಕೊಡುಗೆ ಜನರಿಗೆ ಮನವರಿಕೆ
- ಪ್ರತಿ ಲೋಕಸಭೆ ಕ್ಷೇತ್ರದಲ್ಲಿ ತಲಾ 250 ಗಣ್ಯರಿಗೆ ಮೋದಿ ಕೊಡುಗೆಗಳ ಬಗ್ಗೆ ವಿವರಣೆ
- ಬುದ್ಧಿಜೀವಿಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವಿವಿಧ ವರ್ಗಗಳ ಜತೆ ಚರ್ಚೆ
- ಪ್ರಧಾನಿ ಮೋದಿ ಅವರು ಇಂದು ಭಾಷಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡುವ ಸಾಧ್ಯತೆ
ಇದನ್ನು ಓದಿ: ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ
ಸರ್ಕಾರದ ಸಾಧನೆಗಳು
- 50000 ಕಿ.ಮೀ. ಹೆದ್ದಾರಿ: ಮೋದಿ ಸರ್ಕಾರದ 9 ವರ್ಷದ ಅವಧಿಯಲ್ಲಿ ದೇಶದಲ್ಲಿ ರಸ್ತೆ ಕ್ರಾಂತಿ
- 4 ಕೋಟಿ ಮನೆ: ಸ್ವಂತ ಮನೆ ಹೊಂದಿಲ್ಲದ ಜನರಿಗೆ ಕೇಂದ್ರ ಸರ್ಕಾರದಿಂದ ಸೂರಿನ ಸೌಲಭ್ಯ
- 390 ವಿವಿ: ಕಳೆದ 9 ವರ್ಷ ಅವಧಿಯಲ್ಲಿ ದೇಶಾದ್ಯಂತ ಸ್ಥಾಪನೆಯಾದ ಹೊಸ ವಿಶ್ವವಿದ್ಯಾಲಯ
- 11 ಕೋಟಿ ಟಾಯ್ಲೆಟ್: ಸ್ವಚ್ಛ ಭಾರತ್ ಮಿಷನ್‌ನಡಿ ಕ್ರಾಂತಿ. ದಾಖಲೆ ಶೌಚಾಲಯ ನಿರ್ಮಾಣ
ಇದನ್ನೂ ಓದಿ: ಸಂಸತ್ ಭವನ ಉದ್ಘಾಟನೆ ವೇಳೆ ಶೃಂಗೇರಿ ಪುರೋಹಿತರಿಂದ ಪೂಜಾ ಕೈಂಕರ್ಯ: ರಾಜದಂಡ ಪ್ರತಿಷ್ಠಾಪನೆಯ ಹೈಲೈಟ್ಸ್..