ಮೋದಿ @ 9: 1 ತಿಂಗಳು ಬಿಜೆಪಿ ಪ್ರಚಾರ, 51 ನಾಯಕರಿಂದ ದೇಶದ ವಿವಿಧೆಡೆ ರ‍್ಯಾಲಿ, 2024 ಲೋಕಸಭೆ ಚುನಾವಣೆ ಟಾರ್ಗೆಟ್

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಹಾಗೂ 2ನೇ ಬಾರಿ ಪ್ರಧಾನಿಯಾಗಿ ಮೇ 30ರಂದು ಅಧಿಕಾರ ಸ್ವೀಕರಿಸಿದರು. ಈ ನಿಮಿತ್ತ 30ರಿಂದ ಜೂನ್‌ 30ರವರೆಗೆ ಬಿಜೆಪಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದೆ.

bjp to hold massive month long campaign to mark 9 years of pm modi led government ash

ನವದೆಹಲಿ (ಮೇ 30, 2023): ನರೇಂದ್ರ ಮೋದಿ ಸರ್ಕಾರಕ್ಕೆ ಸರ್ಕಾರಕ್ಕೆ 9 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮೇ 30ರಿಂದ ಬಿಜೆಪಿ 1 ತಿಂಗಳ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಂಡಿದೆ. 51 ಬಿಜೆಪಿ ನಾಯಕರು ದೇಶಾದ್ಯಂತ ಸಭೆ ನಡೆಸಿ, ಸರ್ಕಾರದ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡುವ ಯತ್ನ ಮಾಡಲಿದ್ದರೆ. ವಿವಿಧ ವಲಯದ 1 ಲಕ್ಷ ಪ್ರಸಿದ್ಧ ವ್ಯಕ್ತಿಗಳು ಸರ್ಕಾರದ ಪರ ಆಭಿಯಾನ ನಡೆಸಲಿದ್ದಾರೆ.

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಹಾಗೂ 2ನೇ ಬಾರಿ ಪ್ರಧಾನಿಯಾಗಿ ಮೇ 30ರಂದು ಅಧಿಕಾರ ಸ್ವೀಕರಿಸಿದರು. ಈ ನಿಮಿತ್ತ 30ರಿಂದ ಜೂನ್‌ 30ರವರೆಗೆ ಬಿಜೆಪಿ ವಿವಿಧ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದೆ. ಅಭಿಯಾನದ ಆರಂಭದಲ್ಲಿ ಮೋದಿ ಅವರು ಭಾಷಣ ಮಾಡುವ ನಿರೀಕ್ಷೆಯಿದೆ.

ಇದನ್ನು ಓದಿ: ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್‌ ಹೀಗಿದೆ..

ಅಭಿಯಾನಕ್ಕೆ ಪೂರ್ವಭಾವಿಯಾಗಿ ಸೋಮವಾರವೇ ದೇಶದ ವಿವಿಧ ಕಡೆ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ರಾಜ್ಯಗಳಲ್ಲಿ ಕೇಂದ್ರ ಸಚಿವರು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಇದೇ ವೇಳೆ, ಪ್ರತಿ ಲೋಕಸಭೆ ಕ್ಷೇತ್ರದಲ್ಲಿ 250 ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಮೋದಿ ಅವರ ಕೊಡುಗೆಗಳನ್ನು ವಿವರಿಸುವ ಆಂದೋಲನವನ್ನು ಪಕ್ಷ ರೂಪಿಸಿದೆ. ಇನ್ನು ಬುದ್ಧಿಜೀವಿಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ವ್ಯಾಪಾರಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜತೆ ಬಿಜೆಪಿ ನಾಯಕರು ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: ಈಶಾನ್ಯ ಭಾರತಕ್ಕೂ ಸಿಕ್ತು ವಂದೇ ಭಾರತ್‌ ರೈಲು: ದೇಶದ 18ನೇ ಸೆಮಿ ಹೈ ಸ್ಪೀಡ್‌ ಟ್ರೈನಿಗೆ ಪ್ರಧಾನಿ ಮೋದಿ ಚಾಲನೆ

2024ರ ಮೇನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚಿನ ಕೊನೆಯ ವರ್ಷಾಚರಣೆ ಇದಾಗಿದೆ. ಹೀಗಾಗಿ 3ನೇ ಬಾರಿ ಅಧಿಕಾರ ಹಿಡಿವ ಯೋಚನೆಯಲ್ಲಿರುವ ಮೋದಿ ಅವರ ಪಾಲಿಗೆ ಈ 30 ದಿನದ ಆಂದೋಲನ ಮಹತ್ವದ್ದಾಗಿದೆ. ಈವರೆಗೆ ಹ್ಯಾಟ್ರಿಕ್‌ ಗೆಲುವು ಕಂಡ ಸಾಧನೆಯನ್ನು ಪಂಡಿತ್‌ ಜವಾಹರಲಾಲ್‌ ನೆಹರು ಮಾತ್ರ ಮಾಡಿದ್ದಾರೆ.

ಇದನ್ನೂ ಓದಿ:  ಸಂಸತ್ ಭವನ ಉದ್ಘಾಟನೆ ವೇಳೆ ಶೃಂಗೇರಿ ಪುರೋಹಿತರಿಂದ ಪೂಜಾ ಕೈಂಕರ್ಯ: ರಾಜದಂಡ ಪ್ರತಿಷ್ಠಾಪನೆಯ ಹೈಲೈಟ್ಸ್‌.. 

Latest Videos
Follow Us:
Download App:
  • android
  • ios