ಬಜೆಟ್ ಅಧಿವೇಶನ: ನೂತನ ಸಂಸತ್ತಲ್ಲಿ ರಾಷ್ಟ್ರಪತಿ ಭಾಷಣ..?
ಬಜೆಟ್ ಅಧಿವೇಶನದ ವೇಳೆ ಹೊಸ ಸಂಸತ್‌ನಲ್ಲಿ ರಾಷ್ಟ್ರಪತಿ ಭಾಷಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಜೆಟ್ ಅಧಿವೇಶನದ ಉಳಿದ ಕಲಾಪಗಳು ಹಳೆಯ ಭವನದಲ್ಲೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಜನವರಿ 31ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಧಿವೇಶನ ಹಳೆಯ ಸಂಸತ್ ಭವನದಲ್ಲೇ ನಡೆಯಲಿದ್ದರೂ, ಇನ್ನೂ ನಿರ್ಮಾಣ ಪೂರ್ಣಗೊಳ್ಳದ ಹೊಸ ಸಂಸತ್ ಭವನದಲ್ಲಿ ಜನವರಿ 31ರಂದು ಜಂಟಿ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ವರ್ಷದ ಮೊದಲ ಕಲಾಪದಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡುವುದು ವಾಡಿಕೆ. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣವು ಹೊಸ ಸಂಸತ್ತಿನಲ್ಲಿ ನಡೆವ ಸಾಧ್ಯತೆಯಿದೆ. ಆದರೆ ಬಜೆಚ್ ಅಧಿವೇಶನದ ಮೊದಲ ಭಾಗದ ಉಳಿದ ಭಾಗವು ಹಳೆಯ ಸಂಸತ್ತಿನಲ್ಲಿ ಮುಂದುವರಿಯಬಹುದು ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಬಜೆಟ್ ಅಧಿವೇಶನವು (Parliament’s Budget Session) ಜನವರಿ 31ರಿಂದ ಫೆಬ್ರವರಿ 10ರವರೆಗೆ ಮೊದಲ ಹಂತದಲ್ಲಿ (First Stage) ನಡೆಯಲಿದೆ. ಬಳಿಕ 2ನೇ ಹಂತವು ಮಾರ್ಚ್ 13ರಿಂದ ಏಪ್ರಿಲ್ 6ರವರೆಗೆ ನಡೆಯಲಿದೆ. ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಸಂಸತ್ತಲ್ಲಿ (Parliament) ಮಾಡುವ ಮೊದಲ ಭಾಷಣ (Speech) ಇದಾಗಿದೆ. ಇದಲ್ಲದೆ, ನಿರ್ಮಾಣ ಹಂತದಲ್ಲಿರುವ ಸಂಸತ್ತಿನ ಕಟ್ಟಡದಲ್ಲಿ (New Parliament Building) ಮೊದಲ ಸಭೆ (Meeting) ಇದಾಗಲಿದೆ.
ಇದನ್ನು ಓದಿ: ಮಾರ್ಚ್‌ನಲ್ಲಿ ಹೊಸ ಸಂಸತ್ ಭವನ ಉದ್ಘಾಟನೆ: ಹಳೆಯ ಸಂಸತ್ ಭವನದಲ್ಲೇ ಬಜೆಟ್ ಮಂಡನೆ..!
ಮೂಲಗಳ ಪ್ರಕಾರ ಲೋಕಸಭೆಯ ಸಭಾಂಗಣದಲ್ಲಿ ಅಧಿವೇಶನ ನಡೆಯಲಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಹೊಸ ಕಟ್ಟಡವು ಜಂಟಿ ಸಮಾವೇಶ ನಡೆಯುವ ಸೆಂಟ್ರಲ್ ಹಾಲ್ ಹೊಂದಿಲ್ಲ. ಆದರೆ, ಲೋಕಸಭೆಯ ಸಭಾಂಗಣವು ಉಭಯ ಸದನಗಳ ಸದಸ್ಯರಿಗೆ ಅವಕಾಶ ಕಲ್ಪಿಸುವಷ್ಟು ಸಾಮರ್ಥ್ಯ ಹೊಂದಿದೆ.
ಈ ಮಧ್ಯೆ, ಲೋಕಸಭೆಯ ಸೆಕ್ರೆಟರಿಯೇಟ್ ನೂತನ ಸಂಸತ್ ಭವನಕ್ಕಾಗಿ ಸಂಸದರಿಗೆ ಹೊಸ "ಸ್ಮಾರ್ಟ್ ಐಡೆಂಟಿಟಿ ಕಾರ್ಡ್"ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ. ಜನವರಿ 11 ರಂದು ಬಿಡುಗಡೆ ಮಾಡಲಾದ ಲೋಕಸಭೆಯ ಬುಲೆಟಿನ್ ಪ್ರಕಾರ, ಸಿಸ್ಟಮ್‌ನಲ್ಲಿ ಅಳವಡಿಸಲಾಗಿರುವ ಹಲವಾರು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಕಾರ್ಡ್ ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಮಾಹಿತಿ ನೀಡಲಾಗಿದೆ. ಹೊಸ ಕಟ್ಟಡವು ಸದಸ್ಯರಿಗೆ ಸುಲಭವಾಗಿ ಪ್ರವೇಶಿಸಲು ಮುಖ ಗುರುತಿಸುವ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್ ವಿಸ್ತಾ ಯೋಜನೆಯ ಕಾರ್ಮಿಕರಿಗೆ ಆಹ್ವಾನ: ಪ್ರಧಾನಿ ಮೋದಿ!
ಇನ್ನೂ ಕೆಲವು ಕೆಲಸಗಳು ಬಾಕಿ ಉಳಿದಿವೆ. ಆದ್ದರಿಂದ ನಾವು ಸಂಪೂರ್ಣ ಬಜೆಟ್ ಅಧಿವೇಶನವನ್ನು ಅಲ್ಲಿ ನಡೆಸುವುದು ಅಸಂಭವವಾಗಿದೆ. ಮಾರ್ಚ್ 12 ರಂದು ವಿರಾಮದ ನಂತರ ಸಂಸತ್ತು ಸಭೆ ಸೇರಿದಾಗ, ಸದಸ್ಯರನ್ನು ಸ್ವೀಕರಿಸಲು ಕಟ್ಟಡವು ಸಿದ್ಧವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟಾರೆ ಕಟ್ಟಡವು ಮಾರ್ಚ್‌ನಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಳೆಯ ಭವನಕ್ಕೆ 96 ವರ್ಷ:
ಈ ನಡುವೆ ಹಳೆಯ ಸಂಸತ್ ಭವನ ನಿರ್ಮಾಣವಾಗಿ ಬುಧವಾರ 96 ವರ್ಷ ಸಂದಿದೆ. 1927ರ ಜನವರಿ 18ರಂದು ಬ್ರಿಟನ್ ವೈಸ್‌ರಾಯಿ ಲಾರ್ಡ್ ಇರ್ವಿನ್‌ನಿಂದ ಭವನ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಹಳೆಯ ಸಂಸತ್ ಭವನ ಇನ್ನು ಇತಿಹಾಸ ಪುಟಕ್ಕೆ? ಚಳಿಗಾಲದ ಕಲಾಪಕ್ಕೆ ಮುನ್ನ ಹೊಸ ಕಟ್ಟಡ ಸಿದ್ಧ?