Asianet Suvarna News Asianet Suvarna News

ಬಜೆಟ್ ಅಧಿವೇಶನಕ್ಕೂ ಮೊದಲು 11 ವಿಪಕ್ಷ ಸಂಸದರ ಅಮಾನತು ಹಿಂಪಡೆದ ರಾಜ್ಯಸಭಾ ಅಧ್ಯಕ್ಷ!

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ವಿಶೇಷ ಅಧಿಕಾರ ಬಳಸಿ ವಿರೋಧ ಪಕ್ಷದ 11 ಸಂಸದರ ಅಮಾನತನ್ನು ಹಿಂಪಡೆದಿದ್ದಾರೆ. ಈ ಮೂಲಕ ಅಮಾನತುಗೊಂಡಿದ್ದ 11 ಸಂಸದರು ಇದೀಗ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

Budget session 2024 Rajya sabha chairman revoke 11 opposition MP suspension ckm
Author
First Published Jan 30, 2024, 8:42 PM IST

ನವದೆಹಲಿ(ಜ.30) ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ದಿನ ಮಾತ್ರ ಬಾಕಿ. ಇದಕ್ಕೂ ಮುನ್ನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನವನ್ನುದ್ದೇಶಿ ಮಾತನಾಡಲಿದ್ದಾರೆ. ಬಜೆಟ್ ಅಧಿವೇಶನಕ್ಕೆ ಅಮಾನತುಗೊಂಡಿರುವ ವಿಪಕ್ಷಗಳ 11 ಸಂಸದರು ಪಾಲ್ಗೊಳ್ಳಲು ಇದೀಗ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವಕಾಶ ಮಾಡಿಕೊಟ್ಟಿದ್ದಾರೆ.  ರಾಜ್ಯಸಭಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಗೌರವ ಹಾಗೂ ಅಶಿಸ್ತಿನ ನಡವಳಿಕೆ ಪ್ರದರ್ಶಿಸಿದ 11 ಸಂಸದರನ್ನು ಅಮಾನತು ಮಾಡಲಾಗಿತ್ತು. ಇವರ ಅಮಾನತನ್ನು ಹಿಂಪಡೆಯಲಾಗಿದೆ. 

ಸದನ ಸಮಿತಿಯಿಂದ ಹಕ್ಕು ಉಲ್ಲಂಘನೆ ಮಾಡಿ ತಪ್ಪಿತಸ್ಥರಾದ 11 ಸಂಸದರ ಮೇಲಿನ ಅಮಾನತು ಶಿಕ್ಷೆಯನ್ನು ಹಿಂಪಡೆಯುವಂತೆ ವಿಶೇಷಾಧಿಕಾರ ಸಮಿತಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್‌ಗೆ ಶಿಫಾರಸು ಮಾಡಿತ್ತು. ಈ ಶಿಫಾರಸು ಅಂಗೀಕರಿಸಿದ ಜಗದೀಪ್ ಧನ್ಕರ್ ಅಮಾನತು ಹಿಂಪಡೆದಿದ್ದಾರೆ. ಸದಸ್ಯರು ಆಗಾಗಲೇ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ತಮ್ಮ ನಿಯಮ ಉಲ್ಲಂಘನೆಯಿಂದ ಸಾಕಷ್ಟು ಶಿಕ್ಷೆ ಅನುಭವಿಸಿರುವ ಸಂಸದರ ಮೇಲಿನ ಅಮಾತನನ್ನು ಹಿಂಪಡೆಯುವಂತೆ ಶಿಫಾಸರು ಮಾಡಲಾಗಿತ್ತು.

Union Budget 2024: ಪಿಎಂ ಕಿಸಾನ್ ಯೋಜನೆ ಸಹಾಯಧನ 9,000ರೂಪಾಯಿಗೆ ಏರಿಕೆ ಸಾಧ್ಯತೆ,ರೈತರಲ್ಲಿ ಹೆಚ್ಚಿದ ನಿರೀಕ್ಷೆ

ಜನವರಿ 31ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ಸರ್ವಪಕ್ಷಗಳ ಸಭೆ ಕರೆದಿತ್ತು. ಅಧಿವೇಶನದಲ್ಲಿ ಚರ್ಚೆಯಾಗಲಿರುವ ಪ್ರಮುಖ ವಿಷಯಗಳನ್ನು ಈ ಸಭೆಯಲ್ಲಿ ಪ್ರಸ್ತಾಪಿಸಿ ಪ್ರಮುಖ ವಿಷಯಗಳ ಪಟ್ಟಿ ಮಾಡಲಾಗಿದೆ. ಅಧಿವೇಶನ ಆರಂಭವಾದ ಮಾರನೇ ದಿನ ಫೆ.1 ರಂದು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸದ್ದಾರೆ. ಬಳಿಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಚನೆಯಾಗುವ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ. ಇದು ಕಡಿಮೆ ಅವಧಿಯ ಅಧಿವೇಶನವಾಗಿದ್ದು ಜ.31 ರಿಂದ ಫೆ.9ರ ವರೆಗೆ ನಡೆಯಲಿದೆ.

 ಸತತ 5 ಪೂರ್ಣ ಬಜೆಟ್‌ ಮಂಡಿಸಿದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ದಾಖಲೆ ನಿರ್ಮಿಸಿರುವ ನಿರ್ಮಾಲಾ ಸೀತಾರಾಮನ್ ಇದೀಗ 6ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ದಾಗಿದ್ದಾರೆ.

 

Union Budget 2024: ಪ್ಯಾರಿಸ್‌ ಒಲಿಂಪಿಕ್ಸ್‌ ಟಾರ್ಗೆಟ್‌, ಭಾರೀ ಬಜೆಟ್‌ ನಿರೀಕ್ಷೆಯಲ್ಲಿದೆ ಕ್ರೀಡಾಕ್ಷೇತ್ರ!

Follow Us:
Download App:
  • android
  • ios