Asianet Suvarna News Asianet Suvarna News

ಪಕ್ಷ ವಿರೋಧಿ ಚಟುವಟಿಕೆ ಆರೋಪ: ದಾನಿಶ್‌ ಅಲಿ ಬಿಎಸ್ಪಿಯಿಂದ ಅಮಾನತು

ಪಕ್ಷದ ನೀತಿ, ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳಿಕೆ ನೀಡದಂತೆ ಮತ್ತು ಆ ರೀತಿಯಲ್ಲಿ ನಡೆದುಕೊಳ್ಳದಂತೆ ಹಾಗೂ ಪಕ್ಷದ ಶಿಸ್ತನ್ನು ಉಲ್ಲಂಘಿಸದಂತೆ ಹಲವು ಬಾರಿ ನಿಮಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ನೀವು ಸತತವಾಗಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಹೀಗಾಗಿ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ ಎಂದು ಬಿಎಸ್ಪಿ ಹೇಳಿಕೆಯಲ್ಲಿ ತಿಳಿಸಿದೆ.

bsp suspends mp danish ali for indulging in anti party activities ash
Author
First Published Dec 10, 2023, 9:40 AM IST

ನವದೆಹಲಿ (ಡಿಸೆಂಬರ್ 10, 2023): ಇತ್ತೀಚೆಗೆ ಬಿಜೆಪಿ ಸಂಸದರೊಬ್ಬರಿಂದ ಲೋಕಸಭೆಯಲ್ಲಿ ‘ಉಗ್ರವಾದಿ’ ಎಂದು ನಿಂದಿಸಿಕೊಂಡು ಸುದ್ದಿ ಆಗಿದ್ದ ಲೋಕಸಭಾ ಸದಸ್ಯ ದಾನಿಶ್‌ ಅಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಬಿಎಸ್‌ಪಿ ಅಮಾನತು ಮಾಡಲಾಗಿದೆ.

‘ಪಕ್ಷದ ನೀತಿ, ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳಿಕೆ ನೀಡದಂತೆ ಮತ್ತು ಆ ರೀತಿಯಲ್ಲಿ ನಡೆದುಕೊಳ್ಳದಂತೆ ಹಾಗೂ ಪಕ್ಷದ ಶಿಸ್ತನ್ನು ಉಲ್ಲಂಘಿಸದಂತೆ ಹಲವು ಬಾರಿ ನಿಮಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ನೀವು ಸತತವಾಗಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ. ಹೀಗಾಗಿ ನಿಮ್ಮನ್ನು ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ’ ಎಂದು ಬಿಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಸದನದ ಹೊರಗೆ ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ : ಬಿಎಸ್ಪಿ ಸಂಸದ

ಇತ್ತೀಚೆಗಷ್ಟೇ ದಾನಿಶ್‌ ಅಲಿ ವಿರುದ್ಧ ಬಿಜೆಪಿ ನಾಯಕ ರಮೇಶ್‌ ಬಿಧೂರಿ ಉಗ್ರವಾದಿ ಎಂದು ಹೇಳಿಕೆ ನೀಡಿದ್ದರು. ಆ ವಿಷಯ ಲೋಕಸಭೆಯ ಶಿಸ್ತುಸಮಿತಿಯ ಮೆಟ್ಟಿಲೇರಿತ್ತು. ಅಲ್ಲಿ ಘಟನೆಯ ಕುರಿತು ಬಿಧೂರಿ ವಿಷಾದ ವ್ಯಕ್ತಪಡಿಸಿದ್ದರು. ಈ ನಡುವೆ, ದಾನಿಶ್‌ ಅಲಿ ಬಿಜೆಪಿ ವಿರುದ್ಧ ಕಠಿಣ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು. ಈ ನಡುವೆಯೇ ದಾನಿಶ್‌ ಅಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಅಮಾನತು ಮಾಡಲಾಗಿದೆ.

ದಾನಿಶ್‌ ಅಲಿಗೆ ‘ಉಗ್ರವಾದಿ’ ಎಂದಿದ್ದ ಬಿಜೆಪಿ ಸಂಸದ ರಮೇಶ್‌ ಬಿಧೂರಿ ವಿಷಾದ
ಬಿಎಸ್‌ಪಿ ಸಂಸದ ದಾನಿಶ್‌ ಅಲಿ ‘ಉಗ್ರವಾದಿ’ ಎಂದು ತಾವು ಆಡಿದ್ದ ಆಕ್ಷೇಪಾರ್ಹ ಮಾತುಗಳಿಗೆ ಬಿಜೆಪಿ ಸಂಸದ ರಮೇಶ್‌ ಬಿಧೂರಿ ವಿಷಾದ ವ್ಯಕ್ತಪಡಿಸಿದ್ದಾರೆ. ದಾನಿಶ್‌ ಅಲಿ ನೀಡಿದ್ದ ದೂರಿನ ಅನ್ವಯ ಲೋಕಸಭೆಯ ಹಕ್ಕುಚ್ಯುತಿ ಸಮಿತಿ ನಡೆಸಿದ ಸಭೆಗೆ ಹಾಜರಾಗಿದ್ದ ರಮೇಶ್‌ ಬಿಧೂರಿ ಅಲ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರವೇ ಸಮಿತಿ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿ ಸ್ಪೀಕರ್‌ಗೆ ವರದಿ ಸಲ್ಲಿಸಲಿದೆ ಎನ್ನಲಾಗಿದೆ. 

ದಾನಿಶ್‌ ಅಲಿ ಉಗ್ರ: ಬಿಎಸ್‌ಪಿ ಸಂಸದನ ವಿರುದ್ಧ ಲೋಕಸಭೆಯಲ್ಲೇ ಬಿಜೆಪಿ ಸಂಸದನ ಕೀಳು ಹೇಳಿಕೆ

ಈ ನಡುವೆ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಕೂಡಾ ರಮೇಶ್‌ ಬಿಧೂರಿ ಹೇಳಿಕೆ ಕುರಿತು ಲೋಕಸಭೆಯಲ್ಲಿ ವಿಪಕ್ಷ ಸದಸ್ಯರ ಎದುರು ವಿಷಾದ ವ್ಯಕ್ತಪಡಿಸಿದ್ದಾರೆ. ಚರ್ಚೆಯೊಂದರ ವೇಳೆ ದಾನಿಶ್‌ ಅಲಿ ಅವರನ್ನು ಉದ್ದೇಶಿಸಿ ಉಗ್ರವಾದಿ ಎಂಬುದೂ ಸೇರಿದಂತೆ ಹಲವು ಆಕ್ಷೇಪಾರ್ಹ ಪದ ಬಳಕೆ ಮಾಡಿ ಟೀಕಿಸಿದ್ದರು.
 

Follow Us:
Download App:
  • android
  • ios