ವೇತನ, 4G ಸೇರಿ BSNL ಉದ್ಯೋಗಿಗಳ ಹಲವು ಬೇಡಿಕೆ: ಈಡೇರದಿದ್ದರೆ ಹೋರಾಟ ಎಚ್ಚರಿಕೆ
ಬೇಡಿಕೆಗಳನ್ನು ಈಡೇರಿಸುವಲ್ಲಿ ಮ್ಯಾನೇಜ್‌ಮೆಂಟ್ ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಬಿಎಸ್‌ಎನ್‌ಎಲ್ ಸಿಬ್ಬಂದಿ ಎಚ್ಚರಿಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸುವಲ್ಲಿ ಮ್ಯಾನೇಜ್‌ಮೆಂಟ್ ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಬಿಎಸ್‌ಎನ್‌ಎಲ್ ಸಿಬ್ಬಂದಿ ಎಚ್ಚರಿಸಿದ್ದಾರೆ. ವೇತನ ಪಾವತಿಯಿಂದ ಆರಂಭಿಸಿದಂತೆ, ಬಿಎಸ್‌ಎನ್‌ಎಲ್ 4Gಯಿಂದ ಹೊರ ಬರುವುದರ ಬಗ್ಗೆಯೂ ಪ್ರತಿಭಟನೆಯಲ್ಲಿ ಬೇಡಿಕೆಗಳನ್ನು ಮುಂದಿಡಲಾಗಿದೆ.
ಕೊರೋನಾ ನಿರ್ಬಂಧಗಳ ನಡುವೆಯೇ ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಪ್ರತಿಭಟನೆ ನಡೆಸಿರುವುದಾಗಿ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಂಘ ತಿಳಿಸಿದೆ. ಕೊರೋನಾ ಹರಡುವಿಕೆ ಹೆಚ್ಚಿರುವುದರಿಂದ ಮೊದಲೇ ಅಗತ್ಯ ಎಚ್ಚರಿಕೆ ವಹಿಸಲು ಸೂಚಿಸಲಾಗಿತ್ತು.
ಲಡಾಖ್ ಲಡಾಯಿ; ಚೀನಾ ಟೆಲಿ ಗೇರ್ ಬಳಕೆ ನಿಷೇಧಿಸಿದ BSNL!
ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆ ಕಡ್ಡಾಯ ಮಾಸ್ಕ್ ಧರಿಸಲು ಸೂಚಿಸಲಾಗಿತ್ತು. ಪ್ರಮುಖ ನಗರಗಳಲ್ಲಿ 10 ಉದ್ಯೋಗಿಗಳು ಹಾಗೂ ಉಳಿದ ಕಡೆ 5 ಜನ ಭಾಗವಹಿಸಲು ಅವಕಾಶವಿತ್ತು.
2019ರ ಅಕ್ಟೋಬರ್‌ನಲ್ಲಿ ನೀಡಲಾದ ಪ್ಯಾಕೇಜ್‌ನಲ್ಲಿ ಹೇಳಲಾದ ಯಾವ ಯೋಜನೆಯನ್ನೂ ಸರ್ಕಾರ ಕಾರ್ಯಗತಗೊಳಿಸಿಲ್ಲ ಎಂದು ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
BSNL ಇಂಟರ್‌ನೆಟ್ ಅಯೋಮಯ! ಡಾಟಾ ಸ್ಪೀಡ್ ಇಲ್ಲದೆ, ನೆಟ್‌ವರ್ಕ್ ಬದಲು
ಸ್ವಯಂ ನಿವೃತ್ತಿಯೂ ಬಿಎಸ್‌ಎನ್‌ಎಲ್ ಪುನರುಜ್ಜೀವನ ಯೋಜನೆಯ ಭಾಗವಾಗಿತ್ತು. ಸರ್ಕಾರ ಸ್ವಯಂ ನಿವೃತ್ತಿಗೆ ಕೊಟ್ಟ ಅವಕಾಶವನ್ನು 79000 ಉದ್ಯೋಗಿಗಳನ್ನು ಬಳಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.