ರಾಷ್ಟ್ರೀಯ ಕೈಮಗ್ಗ ದಿನ/ ಪ್ರಧಾನಿ ಮೋದಿ ಅವರಿಂದ ಆತ್ಮನಿರ್ಭರ ಭಾರತ ಸಂದೇಶ/ ಕೈಮಗ್ಗದ ಮಾಸ್ಕ್ ಧರಿಸಿ ಟ್ವಿಟ್ ಮಾಡಿದ ಕೇಂದ್ರ ಜವಳಿ ಸಚಿವೆ

ನವದೆಹಲಿ(ಆ. 07) ಕೈಮಗ್ಗದ ಉತ್ಪನ್ನಗಳನ್ನು ಮನೆಗೆ ತಂದು ಭಾರತೀಯರು ಭಾರತೀಯತೆಯನ್ನು ಸಂಭ್ರಮಿಸಬೇಕು ಎಂದು ಜವಳಿ ಸಚಿವೆ ಸ್ಮೃತಿ ಇರಾನಿ ಸಂದೇಶ ನೀಡಿದ್ದಾರೆ. 

ಕೈಮಗ್ಗ ನಮ್ಮ ದೈನಂದಿನ ಜೀವನವನ್ನು ಮತ್ತಷ್ಟು ಆಹ್ಲಾದಕರ ಮಾಡುತ್ತದೆ. ಕೊರೋನಾಕ್ಕೆ ಬಳಸಿವ ಮಾಸ್ಕ್ ಕೂಡ ಕೈಮಗ್ಗದಿಂದ ತಯಾರು ಮಾಡಿದ್ದು ಆಗಿದ್ದರೆ ಎಂಥ ಚೆನ್ನ ಅಲ್ಲವೇ! ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಕೆಲಸವಿಲ್ಲದ ಬ್ರಿಟನ್ ಸಂಸದೆಯಿಂದ ಕಾಶ್ಮೀರ ವಿಚಾರದಲ್ಲಿ ಕ್ಯಾತೆ

ಸ್ವದೇಶಿ ಆಂದೋಲನದ ಪ್ರತಿಬಿಂಬ ಎಂಬಂತೆ ಆಗಸ್ಟ್ 7 ನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇತಿಹಾಸ ನಮ್ಮನ್ನು 1905 ರ ಸ್ವದೇಶಿ ಆಂದೋಲನಕ್ಕೆ ಕರೆದೊಯ್ಯುತ್ತದೆ. ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ಎಂಬಂತೆ ಕೈಮಗ್ಗ ನಿಂತಿದೆ. 

ಪ್ರಧಾನಿ ನರೇಂದ್ರ ಮೋದಿ ಸಹ ಸಂದೇಶ ನೀಡಿದದ್ದು ಜನರು ಕೈಮಗ್ಗ ಉತ್ಪನ್ನಗಳ ದನಿಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ನಮ್ಮ ನೇಕಾರರು ಮತ್ತು ಕೈಮಗ್ಗಕ್ಕೆ ಎಷ್ಟು ನಮಸ್ಕಾರ ಸಲ್ಲಿಸಿದರೂ ಸಾಲದು. ಕೈಮಗ್ಗ ಅಭಿವೃದ್ಧಿ ಆತ್ಮ ನಿರ್ಭರ ಭಾರತದ ಹೊಸ ಅರ್ಥ ಎಂದು ಹೇಳಿದ್ದಾರೆ. 

Scroll to load tweet…
Scroll to load tweet…