Asianet Suvarna News Asianet Suvarna News

ಕೆಲಸವಿಲ್ಲದ ಬ್ರಿಟನ್ ಸಂಸದೆ ಪತ್ರ ಬರೆದು' ಭಾರತ ಆಕ್ರಮಿತ ಕಾಶ್ಮೀರ' ಎಂದ್ಲು!

ಮಾಡಲು ಕೆಲಸವಿಲ್ಲದಿದ್ದರೆ ಹೀಗೆ ಆಗುತ್ತದೆ/ ವಿನಾ ಕಾರಣ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಬ್ರಿಟನ್ ಸಂಸದೆ/ ಇಂಗ್ಲೆಂಡ್ ಮಧ್ಯಪ್ರವೇಶ ಮಾಡಿ ಕಾಸ್ಮೀರವನ್ನು ವಿವಾದಿತ ಪ್ರದೇಶ ಎಂದು ಗುರುತಿಸಬೇಕಂತೆ!

British Labour MP writes to UK govt urges to intervene on Kashmir issue India
Author
Bengaluru, First Published Aug 7, 2020, 3:13 PM IST

ಲಂಡನ್(ಆ.  07)   ಬ್ರಿಟನ್ ನ ಲೇಬರ್ ಪಾರ್ಟಿಯ ಸಂಸದೆಯೊಬ್ಬರು ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅರೆ, ಇಂಗ್ಲೆಂಡ್ ನಲ್ಲಿ ಪತ್ರ ಬರೆದರೆ ನಮಗೇನು ಸಂಬಂಧ ಅಂದುಕೊಂಡ್ರಾ? ಇದೆ..

ಭಾರತದ ಜಮ್ಮು-ಕಾಶ್ಮೀರ ವಿಚಾರದಲ್ಲಿ ಸಂಸದೆ ಕ್ಯಾತೆ ತೆಗೆದಿದ್ದಾಳೆ.  ಕಾಶ್ಮೀರದ ಜನರಿಗೆ ನ್ಯಾಯ ಕೊಡಿಸಬೇಕು ಎಂದು ದೊಡ್ಡದಾಗಿ ಮಾತನಾಡಿದ್ದಾಳೆ.  ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು  ಭಾರತ ಹಿಂಪಡೆದಿದ್ದು, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಗೆ ವಹಿಸಲು ಬ್ರಿಟನ್ ಬಾಧ್ಯತೆ ಹೊಂದಿದೆ. ಕಾಶ್ಮೀರವನ್ನು ವಿವಾದಿತ ಪ್ರದೇಶವೆಂದು ಗುರುತಿಸಬೇಕು ಎಂದು ಮನಸಿಗೆ ಬಂದಂತೆ ಹಲುಬಿದ್ದಾಳೆ.#

370ನೇ ವಿಧಿ ರದ್ದು, ಪೂರ್ಣ ವಿವರ

ಭಾರತ ಆಕ್ರಮಿತ ಕಾಶ್ಮೀರ ಎಂದು ತನ್ನ ಪತ್ರದಲ್ಲಿ ಕರೆದಿದ್ದು 370 ಮತ್ತು  35ಎ ವಿಧಿ ರದ್ದು ಮಾಡಿ ಹಕ್ಕು ಕಸಿದುಕೊಳ್ಳಲಾಗಿದ್ದು ಬ್ರಿಟನ್ ಮಧ್ಯ ಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿರುವುದು ದೊಡ್ಡ ಸುದ್ದಿಯಾಗಿದೆ.

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಬ್ರಿಟನ್‌ ಸಂಸದರು ರಚಿಸಿಕೊಂಡಿದ್ದ ಸರ್ವಪಕ್ಷೀಯ ಸಂಸದೀಯ ಕಾಶ್ಮೀರ ನಿಯೋಗ (ಎಪಿಪಿಜಿಕೆ) ಭಾರತದ ವಿರುದ್ಧ ಅಪಪ್ರಚಾರ ನಡೆಸಲು ಪಾಕಿಸ್ತಾನದಿಂದ ಹಣ ಪಡೆದುಕೊಂಡಿತ್ತು ಎಂಬ ವಿಚಾರವೂ ಕೆಲ ದಿನಗಳ ಹಿಂದೆ ಚರ್ಚೆಯಾಗಿತ್ತ

 

Follow Us:
Download App:
  • android
  • ios