ತವರು ಬಿಡುವ ನೋವು: ಅಳು ಅತಿಯಾಗಿ ನವ ವಧು ಸಾವು
ತವರು ಮನೆ ಬಿಟ್ಟು ಹೋಗುವ ನೋವು | ವಧುವನ್ನು ಕಳುಹಿಸಿ ಕೊಡುವ ಶಾಸ್ತ್ರದಲ್ಲಿ ಅತಿಯಾದ ಅಳು | ನವ ವಧು ಸಾವು
ಭುವನೇಶ್ವರ(ಮಾ.07): ಒಡಿಶಾದ ಮದುವೆಯ ಮನೆಯ ಸಂಭ್ರಮ ಸಾವಿನ ನೋವಿನಲ್ಲಿ ಕೊನೆಯಾಗಿದೆ. ಕಳೆಗಟ್ಟಿದ್ದ ಮದುವೆ ಮನೆಗೆ ಹಠಾತ್ ಸೂತಕದ ಛಾಯೆ ತುಂಬಿದೆ.
ಆಗಷ್ಟೇ ಕುಂಕುಮವಿಟ್ಟು ಶ್ರೀಮತಿಯಾದ ನವ ವಧು ಅತಿಯಾಗಿ ಅತ್ತು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಒಡಿಶಾದ ಸೋನೆಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಖ್ಯಾತ ಸೀರಿಯಲ್ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ
ವಧುವನ್ನು ಗುಪ್ತೇಶ್ವರಿ ಸಹೂ ಯಾ ರೋಸಿ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ ವಧುವನ್ನು ಕಳುಹಿಸಿಕೊಡುವ ಕಾರ್ಯಕ್ರಮ ನಡೆದಿತ್ತು. ಆ ಹೊತ್ತಿನಲ್ಲಿ ವಧು ಲವಲವಿಕೆಯಿಂದಲೇ ಇದ್ದಳು.
ಮದುವೆ ವಿಧಿಗಳೆಲ್ಲ ನಡೆದು ವಧುವನ್ನು ಕಳುಹಿಸಿ ಕೊಡುವ ಶಾಸ್ತ್ರದ ಸಂದರ್ಭ ವಧು ಅಳುತ್ತಿದ್ದಳು. ಜೋರಾಗಿ ಅಳುತ್ತಿದ್ದ ವಧು ಸುಸ್ತಾಗಿ ಕುಸಿದು ಬಿದ್ದಿದ್ದಾಳೆ. ನೆರೆದಿದ್ದವರು ವಧುವನ್ನು ಎಚ್ಚರಿಸಲು ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ.
ಹೊಟ್ಟೆ ಆಪರೇಷನ್ ಮಾಡಿ ಸ್ಟಿಚ್ ಹಾಕದೆ ಬಿಟ್ಟ ವೈದ್ಯರು, 3 ವರ್ಷದ ಕಂದ ಸಾವು
ನಂತರ ರೋಸಿಯನ್ನು ದುಂಗುರಿಪಾಲಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆ ಸಾವನ್ನಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳಿದ್ದಾರೆ.
ಯುವತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ರೋಸಿ ಕೆಲವು ತಿಂಗಳ ಹಿಂದಷ್ಟೇ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
ಕರ್ನಾಟಕದ ಹುಡುಗ ತಮಿಳುನಾಡಿನಲ್ಲಿ ಶವವಾಗಿ ಪತ್ತೆ, ಏನಿದು ಮರ್ಡರ್ ಮಿಸ್ಟರಿ.?
ತಂದೆಯ ಸಾವಿನಿಂದ ಖಿನ್ನತೆಗೊಳಗಾಗಿದ್ದ ರೋಸಿಯ ವಿವಾಹವನ್ನು ಆಕೆಯ ಮಾವ ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರು ನಡೆಸಿದ್ದರು.