ಲಕ್ನೋ(ಮಾ.06): ಆಸ್ಪತ್ರೆಗಳಲ್ಲಿ ಬಿಲ್ ಕಟ್ಟದಿದ್ದಾಗ ವೈದ್ಯರು ತೋರಿಸುವ ಅಮಾನವೀಯತೆ ವೈದ್ಯರು ಅಂದರೆ ಭಯ ಹುಟ್ಟಿಸುವಂತೆ ಮಾಡುತ್ತದೆ. ಇದಕ್ಕೆ ಸಾಕ್ಷಿಯಾಗುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ 3 ವರ್ಷದ ಮಗುವಿಗೆ ವೈದ್ಯರು ಹೊಟ್ಟೆ ಕುಯ್ದು ಆಪರೇಷನ್ ಮಾಡಿದ್ದಾರೆ. ಆದರೆ ಬಿಲ್ ಕಟ್ಟದ್ದಕ್ಕೆ ಸ್ಟಿಚ್ ಹಾಕದೇ ಕಳುಹಿಸಿಕೊಟ್ಟಿದ್ದಾರೆ. ಪರಿಣಾಮ ಮೂರು ವರ್ಷ ಹಸುಗೂಸು ಸಮೃತಪಟ್ಟಿದೆ.

ಡ್ರಗ್ಸ್‌ ಡೀಲ್ಸ್‌ಗೆ ಫಂಡ್ ಮಾಡ್ತಿದ್ದ ಬಾಲಿವುಡ್ ಸುಂದರಿ: ರಿಯಾಗೆ 20 ವರ್ಷ ಜೈಲು..?

ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣುಮಗುವಿನ ಹೊಟ್ಟೆಗೆ ಸ್ಟಿಚ್ ಹಾಕದೆ ಕಳುಹಿಸಲಾಗಿದೆ. ಆಕೆಯ ಕುಟುಂಬ ಚಿಕಿತ್ಸೆಗೆ 5 ಲಕ್ಷ ಪಾವತಿಸದ ಹಿನ್ನೆಲೆಯಲ್ಲಿ ಈ ಅಮಾನುಷ ಕೃತ್ಯ ಎಸಗಿದ್ದಾರೆ ವೈದ್ಯರು.

ಪ್ರಯಾಗ್ರಾಜ್ನ ಡಿಎಂ ಭಾನು ಚಂದ್ರ ಘಟನೆಯ ಬಗ್ಗೆ ವಿಸ್ತ್ರತ ತನಿಖೆ ನಡೆಸಲು ಎರಡು ಸಮಿತಿಗಳನ್ನು ರಚಿಸಿದ್ದಾರೆ. ಎನ್ಸಿಬಿಪಿಸಿಆರ್  ಘಟನೆ ಸಂಬಂಧ ಎಫ್ಐಆರ್ ದಾಖಲಿಸಲು ಆಗ್ರಹಿಸಿದೆ.