ಪ್ರಯಾಗ್‌ರಾಜ್‌ನ ಕರ್ಚನಾದಲ್ಲಿ ಮದುವೆಯಾದ ಎರಡೇ ದಿನಕ್ಕೆ ವಧು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಆಘಾತಗೊಂಡ ಗಂಡ, ಮಗು ತನ್ನದಲ್ಲ ಎಂದು ಹೆಂಡತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಫೆಬ್ರವರಿ 24 ರಂದು ಮದುವೆ ನಡೆದಿದ್ದು, ಮರುದಿನ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಎರಡೂ ಕುಟುಂಬಗಳಲ್ಲಿ ಜಗಳ ಶುರುವಾಗಿದೆ.

ಯುಪಿ ಸುದ್ದಿ: ಪ್ರಯಾಗ್‌ರಾಜ್‌ನ ಕರ್ಚನಾ ತಹಸಿಲ್‌ನಿಂದ ಒಂದು ಆಶ್ಚರ್ಯಕರ ಘಟನೆ ವರದಿಯಾಗಿದೆ. ಇಲ್ಲಿ ಮದುವೆಯಾದ ಎರಡನೇ ದಿನವೇ ಮದುಮಗಳು ಮಗುವಿಗೆ ತಾಯಿಯಾಗಿದ್ದಾಳೆ. ಈ ಸುದ್ದಿ ಕೇಳಿ ಮನೆಯವರೆಲ್ಲಾ ಬೆಚ್ಚಿಬಿದ್ದಿದ್ದಾರೆ. ಗಂಡ ಮಗು ತನ್ನದಲ್ಲ ಎಂದು ಹೇಳಿ ಹೆಂಡತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಈ ಘಟನೆಯ ನಂತರ ಎರಡೂ ಕುಟುಂಬಗಳಲ್ಲಿ ಜಗಳ ಶುರುವಾಗಿದೆ.

ಮದುವೆಯಾದ ಎರಡನೇ ದಿನ ತಾಯಿಯಾದ ಮಹಿಳೆ:
ಫೆಬ್ರವರಿ 24 ರಂದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ನಡೆಯಿತು ಮತ್ತು ಮರುದಿನ ವಧುವನ್ನು ಗಂಡನ ಮನೆಗೆ ಕಳುಹಿಸಿಕೊಡಲಾಯ್ತು. ಆದರೆ ಫೆಬ್ರವರಿ 25 ರ ರಾತ್ರಿ ವಧುವಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಮನೆಯವರು ಗಾಬರಿಯಾದರು. ತಕ್ಷಣ ಆಕೆಯನ್ನು ಕರ್ಚನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಅಲ್ಲಿಗೆ ತಲುಪಿದ ನಂತರ ವೈದ್ಯರು ಆಕೆಗೆ ಹೆರಿಗೆ ಸಮಯ ಹತ್ತಿರವಾಗಿದೆ ಎಂದು ಹೇಳಿದರು. ಇದನ್ನು ಕೇಳಿದ ಗಂಡ ಮತ್ತು ಅವನ ಕುಟುಂಬ ಶಾಕ್ ಆದರು.

ಇದನ್ನೂ ಓದಿ: ಹೆತ್ತವಳು ಹಿಂದೂ, ದತ್ತು ಪಡೆದಾಕೆ ಮುಸ್ಲಿಂ, HIV ಎಂದಾಕ್ಷಣ ಇಬ್ಬರಿಗೂ ಬೇಡವಾಯ್ತು, ಕಂದಮ್ಮ ಈಗ ಅನಾಥೆ!

ಮಗುವನ್ನು ಸ್ವೀಕರಿಸಲು ನಿರಾಕರಿಸಿದ ವರ:
ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವಧುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ವಧು ಒಂಬತ್ತು ತಿಂಗಳ ಗರ್ಭಿಣಿ ಎಂದು ಹೇಳಿದರು ಮತ್ತು ಆಕೆಗೆ ಯಾವುದೇ ಸಮಯದಲ್ಲಿ ಹೆರಿಗೆ ಆಗಬಹುದು ಎಂದು ತಿಳಿಸಿದರು. ಇದನ್ನು ಕೇಳಿದ ತಕ್ಷಣ ವರನಿಗೆ ದಿಗ್ಭ್ರಮೆ ಆಯಿತು. ಹುಡುಗ ತಕ್ಷಣಕ್ಕೆ ತನ್ನ ಹೆಂಡತಿಯ ಕಡೆಯವರಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ಹೇಳಿದನು. ಮಗು ಹುಟ್ಟಿದ ಸುದ್ದಿ ತಿಳಿದ ತಕ್ಷಣ ಗಂಡ ಇದು ತನ್ನ ಮಗುವಲ್ಲ ಮತ್ತು ತಾನು ಹೆಂಡತಿಯನ್ನೂ ಮಗುವನ್ನೂ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದನು.

ಇದನ್ನೂ ಓದಿ: ನಾಯಿ ಜೊತೆ ಮಗುವಿಗೆ ಮದುವೆ! ಕುಟುಂಬಸ್ಥರ ಕಾರಣ ತಿಳಿದ್ರೆ ಬೆಚ್ಚಿ ಬೀಳ್ತೀರಿ!