ಮುಂಬೈನಲ್ಲಿ, ಹಿಂದೂ ಮಹಿಳೆಯೊಬ್ಬರು ಮುಸ್ಲಿಂ ಮಹಿಳೆಯ ಆಧಾರ್ ಬಳಸಿ ಮಗುವಿಗೆ ಜನ್ಮ ನೀಡಿದ್ದರು. ಮಗು HIV ಪಾಸಿಟಿವ್ ಎಂದು ತಿಳಿದ ನಂತರ, ದತ್ತು ಪಡೆಯಲು ಮುಸ್ಲಿಂ ಮಹಿಳೆ ನಿರಾಕರಿಸಿದರು. ಇಬ್ಬರೂ ಮಹಿಳೆಯರ ನಡುವೆ ಮಗುವನ್ನು ದತ್ತು ನೀಡುವ ಒಪ್ಪಂದವಾಗಿತ್ತು. ಪ್ರಸ್ತುತ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುಂಬೈ : ಮಹಾರಾಷ್ಟ್ರದ ಮುಂಬೈನಿಂದ ಒಂದು ಹೃದಯವಿದ್ರಾವಕ ಸುದ್ದಿ ಬಂದಿದೆ. ಇಲ್ಲಿ 4 ತಿಂಗಳ ಮಗುವನ್ನ ಯಾರೂ ದತ್ತು ತೆಗೆದುಕೊಳ್ಳಲು ಸಿದ್ಧರಿಲ್ಲ. ನಾಲ್ಕು ತಿಂಗಳ ಹಿಂದೆ ಕೆಇಎಂ ಆಸ್ಪತ್ರೆಯಲ್ಲಿ ಹಿಂದೂ ಮಹಿಳೆಯೊಬ್ಬಳು ಆಕೆಗೆ ಜನ್ಮ ನೀಡಿದ್ದಳು, ಆದರೆ ಆಕೆ ತನ್ನ ಆಧಾರ್ ಕಾರ್ಡ್ ಬದಲಿಗೆ ಮುಸ್ಲಿಂ ಮಹಿಳೆಯ ಆಧಾರ್ ಕಾರ್ಡ್ ಬಳಸಿದ್ದಳು. ಯಾಕೆಂದರೆ ಆ ಮುಸ್ಲಿಂ ಮಹಿಳೆ ಮಗುವನ್ನ ದತ್ತು ತೆಗೆದುಕೊಳ್ಳಲು ಬಯಸಿದ್ದಳು.
ಮುಸ್ಲಿಂ ಮಹಿಳೆ ಎರಡನೇ ಮಗುವನ್ನ ಬಯಸಿದ್ದಳು. ಎರಡನೇ ಬಾರಿ ಗರ್ಭಿಣಿಯಾದ ನಂತರ ಆಕೆಯ ಗರ್ಭಪಾತವಾಗಿತ್ತು. ಮತ್ತೊಂದೆಡೆ ಹಿಂದೂ ಮಹಿಳೆ ಗರ್ಭಿಣಿಯಾಗಿದ್ದಳು, ಆದರೆ ಮಗುವನ್ನ ಹೆರಲು ಬಯಸುತ್ತಿರಲಿಲ್ಲ. ಆಕೆಯ ಗಂಡ ಡ್ರಗ್ ಅಡಿಕ್ಟ್ ಆಗಿದ್ದ. ಆದ್ದರಿಂದ ಇಬ್ಬರೂ ಮಹಿಳೆಯರ ನಡುವೆ ಒಪ್ಪಂದವಾಗಿತ್ತು, ಹಿಂದೂ ಮಹಿಳೆ ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಮುಸ್ಲಿಂ ಮಹಿಳೆಯ ಆಧಾರಗ ಗುರುತನ್ನು ಬಳಸುತ್ತಾಳೆ. ಇದರಿಂದ ಮುಸ್ಲಿಂ ಮಹಿಳೆಗೆ ಯಾವುದೇ ತೊಂದರೆ ಇಲ್ಲದೆ ಮಗುವನ್ನ ದತ್ತು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಟೆಕ್ ದೈತ್ಯ ಎಲಾನ್ ಮಸ್ಕ್‌ಗೆ 14ನೇ ಮಗು ಜನಿಸಿದ ಸಂಭ್ರಮ, ಮಗುವಿನ ತಾಯಿ ಯಾರು?
ಮಗು HIV ಪಾಸಿಟಿವ್, ದತ್ತು ಸ್ವೀಕರಿಸಲು ನಿರಾಕರಣೆ: ಮೊದಲೇ ನಿರ್ಧರಿಸಿದ ಒಪ್ಪಂದದ ಪ್ರಕಾರ ಹಿಂದೂ ಮಹಿಳೆ ಮಗುವಿಗೆ ಜನ್ಮ ನೀಡಿದಳು ಮತ್ತು ತನ್ನ ಗುರುತಿಗಾಗಿ ಮುಸ್ಲಿಂ ಮಹಿಳೆಯ ಆಧಾರ್ ಕಾರ್ಡ್ ಬಳಸಿದಳು. ಒಪ್ಪಂದದ ಪ್ರಕಾರ ಮಗು ಮುಸ್ಲಿಂ ಮಹಿಳೆಗೆ ಸಿಕ್ಕಿತು. ಮಗು ಅನಾರೋಗ್ಯಕ್ಕೆ ಒಳಗಾದಾಗ ಜನವರಿಯಲ್ಲಿ ಆಕೆಯನ್ನ ವಾಡಿಯಾ ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿ ಪರೀಕ್ಷೆ ನಡೆಸಿದಾಗ ಮಗುವಿಗೆ HIV ಪಾಸಿಟಿವ್ ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ತಿಳಿದ ನಂತರ ಮುಸ್ಲಿಂ ಮಹಿಳೆ ಹೆಣ್ಣು ಮಗುವನ್ನು ಸ್ವೀಕರಿಸಲು ನಿರಾಕರಿಸಿದಳು. ಇದೀಗ ಮಗುವಿಗೆ ಚಿಕಿತ್ಸೆ ನೀಡಲು ಕಲ್ವಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೂರಿನ ಮೇರೆಗೆ ಇಬ್ಬರೂ ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹಿಂದೂ ಮಹಿಳೆ ಮಗು ಬೇಡ: ಮಗುವಿನ ತಾಯಿ ಮತ್ತು ಮುಸ್ಲಿಂ ಮಹಿಳೆ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರ್ಭಿಣಿಯಾದ ಆರು ತಿಂಗಳ ನಂತರ ಮಹಿಳೆ ತನಗೆ ಮಗು ಬೇಡ ಎಂದು ಮುಸ್ಲಿಂ ಮಹಿಳೆಗೆ ಹೇಳಿದ್ದಳು. ನಂತರ ಮುಸ್ಲಿಂ ಮಹಿಳೆ ಮಗುವನ್ನ ದತ್ತು ತೆಗೆದುಕೊಳ್ಳಲು ಮುಂದಾದಳು. ಮುಸ್ಲಿಂ ಮಹಿಳೆಯ ಗುರುತಿನ ಚೀಟಿಯನ್ನ ಬಳಸಿ ಹಿಂದೂ ಮಹಿಳೆ ಅಕ್ಟೋಬರ್ 2024 ರಲ್ಲಿ ಕೆಇಎಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಮುಸ್ಲಿಂ ಹುಡುಗಿಯ ಹೆಸರಿನಲ್ಲಿ ಜನನ ಪ್ರಮಾಣಪತ್ರವನ್ನ ನೀಡಲಾಯಿತು. ಮುಸ್ಲಿಂ ಮಹಿಳೆಯನ್ನ ಆಕೆಯ ತಾಯಿ ಎಂದು ಹೇಳಲಾಗಿತ್ತು.
ಗರ್ಭಿಣಿಯಾಗಿರೋವಾಗ ಗಂಡ-ಹೆಂಡ್ತಿ ಜಗಳವಾಡಿದ್ರೆ… ಹುಟ್ಟಲಿರುವ ಮಕ್ಕಳಲ್ಲಿ ಸಮಸ್ಯೆ ಖಚಿತ!
ಆಸ್ಪತ್ರೆಯಿಂದ ಬಿಡುಗಡೆಯಾದ 5 ದಿನಗಳ ನಂತರ ಮುಸ್ಲಿಂ ಮಹಿಳೆ ಮಗುವನ್ನ ಮನೆಗೆ ಕರೆದುಕೊಂಡು ಹೋದಳು. ಈ ವರ್ಷದ ಜನವರಿಯಲ್ಲಿ ವಾಡಿಯಾ ಆಸ್ಪತ್ರೆಯಲ್ಲಿ ಮಗುವಿಗೆ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆ ನಡೆಯಿತು. ಆಕೆ HIV ಪಾಸಿಟಿವ್ ಎಂದು ತಿಳಿದುಬಂದಿದೆ. ನಂತರ ಮುಸ್ಲಿಂ ಮಹಿಳೆಯನ್ನ HIV ಪರೀಕ್ಷೆಗೆ ಕರೆದೊಯ್ಯಲಾಯಿತು. ಮಗು HIV ಸೋಂಕಿತ ಎಂದು ತಿಳಿದ ನಂತರ ಮುಸ್ಲಿಂ ಮಹಿಳೆ ಆಕೆಯನ್ನ ಸ್ವೀಕರಿಸಲು ನಿರಾಕರಿಸಿದಳು. ಮಗು ತನಗೆ ಹೇಗೆ ಸಿಕ್ಕಿತು ಎಂದು ಆಕೆ ವಿವರಿಸಿದಳು.
