ಪುಷ್ಪಾ ಸಿನಿಮಾದ ಊ ಅಂಟಾವಾ ಹಾಡಿಗೆ ಸಖತ್ ಸ್ಟೆಪ್ ನವಜೋಡಿಯ ಡಾನ್ಸ್‌ಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಮನೆ ಮಂದಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ವಧು ಹಾಗೂ ವರ ಮದುವೆ ದಿನ ಪುಷ್ಪಾ ಸಿನಿಮಾದ ಊ ಅಂಟಾವಾ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಯಾವುದೇ ಅಂಜಿಕೆ ಇಲ್ಲದೇ ವಧು ಹಾಗೂ ವರ ಇಬ್ಬರು ಸಂಪ್ರದಾಯಿಕ ಮದುವೆ ಧಿರಿಸಿನಲ್ಲೇ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. 

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದ ಹಾಡುಗಳು ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸುತ್ತಿದ್ದು, ಈ ಹಾಡನ್ನು ಬಳಸಿಕೊಂಡು ಡಾನ್ಸ್ ಮಾಡಿರುವ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್‌ , ಶೇರ್‌ಚಾಟ್‌, ಫೇಸ್ಬುಕ್‌ ಯೂಟ್ಯೂಬ್‌ಗಳಲ್ಲಿ ಕಾಣ ಸಿಗುತ್ತಿವೆ. ಜನರು ಶ್ರೀವಲ್ಲಿ, ಊ ಅಂಟಾವಾ ಮತ್ತು ಸಾಮಿ ಎಂಬ ಹಾಡುಗಳ ಮೇಲೆ ಡ್ಯಾನ್ಸ್ ರೀಲ್‌ಗಳನ್ನು ರಚಿಸುತ್ತಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್ ಅವರ ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡುತ್ತಿದ್ದಾರೆ. ಇದೀಗ ದೇಸಿ ಜೋಡಿಯೊಂದು ಊ ಅಂಟಾವ ಹಡಿಗೆ ಸಖತ್‌ ಆಗಿ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

View post on Instagram

ವೀಡಿಯೊದಲ್ಲಿರುವ ವಧು ಮತ್ತು ವರನನ್ನು ಪ್ರಾಚಿ ಮೋರೆ (Prachi More) ಮತ್ತು ರೋನಕ್ ಶಿಂಧೆ ( Ronak Shinde) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಯನ್ನುಇವರು ಧರಿಸಿದ್ದಾರೆ. ತಮ್ಮದೇ ಮದುವೆಯಲ್ಲಿ ಈ ಜೋಡಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಊ ಅಂಟಾವಾ ಹಾಡಿಗೆ ಆಕರ್ಷಕವಾಗಿ ಹೆಜ್ಜೆ ಹಾಕುತ್ತಿದ್ದಾರೆ. ವೀಡಿಯೊ ವೈರಲ್ ಆಗಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಅಕ್ಕನ ಮದುವೆಲಿ ತಂಗಿ ಹಾಗೂ ಸ್ನೇಹಿತರ ಜಬರ್‌ದಸ್ತ್‌ ಡಾನ್ಸ್‌

ಇದೇ ಹಾಡಿಗೆ ಅಮರಿಕನ್ ಡ್ಯಾಡ್ ಎಂದೇ ಖ್ಯಾತಿ ಗಳಿಸಿರುವ ರಿಕಿ ಪಾಂಡ್‌ ( Ricky Pond)ಕೂಡ ಕೆಲ ದಿನಗಳ ಹಿಂದೆ ಸಖತ್‌ ಸ್ಟೆಪ್‌ ಹಾಕಿದ್ದರು. ಸ್ವತಃ ಪುಷ್ಪಾ ಸಿನಿಮಾದಲ್ಲಿ ಡಾನ್ಸ್‌ ಮಾಡಿದ್ದ ನಟಿ ಸಮಂತಾಳೇ ನಾಚುವಂತೆ ರಿಕಿ ಪಾಂಡ್‌ ಕುಣಿದಿದ್ದರು. ಈ ವಿಡಿಯೋ ಕೆಲ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ರಿಕಿ ಪಾಂಡ್‌ ಡಾನ್ಸ್‌ಗೆ ಫಿದಾ ಆಗಿದ್ದರು.

ಸಿನಿಮಾ ಸ್ಟೈಲ್‌ನಲ್ಲಿ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ವಧು..

ಜನವರಿ 4ರಂದು ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಚೆಕ್ಸ್ ಶರ್ಟ್‌ ಹಾಗೂ ಪ್ಯಾಂಟ್ ಧರಿಸಿ ಊ ಅಂಟಾವಾ ಹಾಡಿಗೆ ಸಖತ್‌ ಆಗಿ ಕುಣಿದಿರುವ ರಿಕಿ ಪಾಂಡ್‌ ತಮ್ಮ ಕುಣಿತದಿಂದ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಅನೇಕರು ರಿಕಿ ಡಾನ್ಸ್‌ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ನಾಲ್ಕು ಮಕ್ಕಳ ತಂದೆಯಾಗಿರುವ ರಿಕಿ ಪಾಂಡ್‌ ಇನ್ಸ್ಟಾಗ್ರಾಮ್‌ ಖಾತೆ ಪೂರ್ತಿ ಅವರು ವಿವಿಧ ಹಾಡುಗಳಿಗೆ ಕುಣಿದಿರುವ ವಿಡಿಯೋಗಳಿವೆ.