ಅಕ್ಕನ ಮದುವೆಲಿ ತಂಗಿ ಹಾಗೂ ಸ್ನೇಹಿತರ ಜಬರ್‌ದಸ್ತ್‌ ಡಾನ್ಸ್‌

 

  • ವಧುವಿನ ಸಹೋದರಿಯ ಸಖತ್ ಡಾನ್ಸ್‌
  • ಅಕ್ಕನ ಮದುವೆಲಿ ತಂಗಿಯ ಸಂಭ್ರಮ
  • ಬಾಲಿವುಡ್ ಹಾಡಿಗೆ ಜಬರ್‌ದಸ್ತ್‌ ಸ್ಟೆಪ್ಸ್‌
Brides Sister, Friends Surprise Guests With Amazing Dance akb

ಮನೆಯಲ್ಲಿ ಒಂದು ಮದುವೆ ನಡೆಯುತ್ತೆ ಅಂದ್ರೆ ಮದ್ವೆ ಆಗೋರಿಗಿಂತ ಜಾಸ್ತಿ ಖುಷಿ ಪಡುವವರು ಆಕೆಯ ಅಥವಾ ಆತನ  ಅಣ್ಣ ತಮ್ಮಂದಿರು ಅಕ್ಕ ತಂಗಿಯರು. ಅವರೆಲ್ಲರಿಗೂ  ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸಲು ಒಂದು ಸುಸಂದರ್ಭ. ಇನ್ನು ವಧುವಿನ ತಂಗಿಯರ ಸಂಭ್ರಮಕ್ಕಂತು ಎಲ್ಲೆಯೇ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಅಕ್ಕನ ಮದುವೆಯಲ್ಲಿ ತಂಗಿ ಹಾಗೂ ಆಕೆಯ ಸ್ನೇಹಿತರ ಜಬರ್ದಸ್ತ್‌ ಡಾನ್ಸ್‌ ಎಲ್ಲರ ಗಮನ ಸೆಳೆಯುತ್ತಿದೆ. 

ವಧುವಿನ ಸ್ನೇಹಿತರು ಮತ್ತು ಸಹೋದರಿ, ರಣವೀರ್ ಸಿಂಗ್‌ (Ranveer Singh) ಮತ್ತು ಅನುಷ್ಕಾ ಶರ್ಮಾ (Anushka Sharma) ಅಭಿನಯದ 2010 ರ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಿತ್ರದ ಸುನಿಧಿ ಚೌಹಾಣ್ (Sunidhi Chauhan) ಮತ್ತು ಮಾಸ್ಟರ್ ಸಲೀಂ (Saleem) ಅವರು ಹಾಡಿರುವ ಐನ್ವಯಿ ಐನ್ವಾಯಿ ಹಾಡಿಗೆ ಡಾನ್ಸ್‌ ಮಾಡಿದ್ದಾರೆ. 

 

ಈ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram)'theweddingministry' ಎಂಬ ಖಾತೆ ಹೊಂದಿರುವ ಬಳಕೆದಾರರು ಪೋಸ್ಟ್‌ ಮಾಡಿದ್ದು, 'ನಿಮ್ಮ ಸಹೋದರಿ ವಿವಾಹವಾಗುತ್ತಿರುವಾಗ ನಿಮ್ಮ ಎಕ್ಸೈಟ್‌ಮೆಂಟ್ ಲೆವೆಲ್‌' ಹೇಗಿರುತ್ತೆ ಎಂಬುದಾಗಿ ಬರೆಯಲಾಗಿದೆ. ಈ ಪೋಸ್ಟ್‌ನ್ನು 15,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ವಧುವಿನ ಮೆಹಂದಿ ದಿನ ಚಿತ್ರೀಕರಣಗೊಂಡ ವಿಡಿಯೋ ಇದಾಗಿದೆ. ವಿಡಿಯೋದಲ್ಲಿರುವ ಹೆಣ್ಣು ಮಕ್ಕಳೆಲ್ಲ ಸುಂದರವಾದ ಬಣ್ಣಗಳ ಭಾರತೀಯ ಶೈಲಿಯ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ಮದುವೆಗೆ ಮಾಡಿದ್ದ ಸುಂದರವಾದ ಅಲಂಕಾರ (decoration) ಕೂಡ ವಿಡಿಯೋದಲ್ಲಿ ಗಮನ ಸೆಳೆಯುತ್ತಿದೆ. ಇತ್ತ ಇವರ ಸರ್‌ಪ್ರೈಸ್ ಡಾನ್ಸ್‌ಗೆ ಕುಟುಂಬ ಹಾಗೂ ಸ್ನೇಹಿತರು ಪ್ರೋತ್ಸಾಹಿಸಿ ಚಪ್ಪಾಳೆ ತಟ್ಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇತ್ತ ಡಾನ್ಸ್‌ ಮಾಡುತ್ತಿರುವ ಹುಡುಗಿಯರು ಕೂಡ ಸಖತ್‌ ಆಗಿ ಸ್ಟೆಪ್‌ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಗೂಗಲ್‌ ಮೀಟ್‌ನಲ್ಲಿ ಅತಿಥಿ ಸತ್ಕಾರ, ಜೊಮೆಟೋದಿಂದ ಊಟ: ಕೋವಿಡ್‌ ಕಾಲದಲ್ಲೊಂದು ವಿಭಿನ್ನ ವಿವಾಹ

ಮದುವೆ ಸಂದರ್ಭದಲ್ಲಿ ವಧು ಡಾನ್ಸ್‌ ಮಾಡಿದ್ದಕ್ಕೆ ಕೋಪಗೊಂಡ ವರನೊಬ್ಬ ಅಲ್ಲೇ ಆಕೆಯ ಕೆನ್ನೆಗೆ ಬಾರಿಸಿದ್ದು, ಇದರಿಂದ ಮದುವೆಯೇ ನಿಂತು ಹೋದಂತಹ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಅಲ್ಲದೇ ಇದೇ ಮಂಟಪದಲ್ಲಿ ವಧುವನ್ನು ಸಂಬಂಧಿ ಯುವಕನಿಗೆ ವಿವಾಹ ಮಾಡಿ ಕೊಡಲಾಗಿದ್ದು, ಇತ್ತ ವರನ ಕಡೆಯವರು ತಮಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಕೆಲ ಮಾಧ್ಯಮಗಳ ವರದಿ ಪ್ರಕಾರ, ವರ ಚೆನ್ನೈನ ಕಂಪನಿಯೊಂದರಲ್ಲಿ ಸೀನಿಯರ್‌ ಇಂಜಿನಿಯರ್‌ ಆಗಿದ್ದು ಈ ವಧುವಿನೊಂದಿಗೆ ನವಂಬರ್‌ 6ರಂದು ವಿವಾಹ ನಿಶ್ಚಿತಾರ್ಥವಾಗಿತ್ತು.  ಜನವರಿ 20ರಂದು ಕಡಲೂರಿನ ಪನ್ರತಿಯಲ್ಲಿ ಇವರ ನಡೆಯಬೇಕಾಗಿತ್ತು. ಆ ದಿನ ವಧು ವರ ಇಬ್ಬರು ಜೊತೆಯಾಗಿ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ವಧುವಿನ ಸೋದರ ಸಂಬಂಧಿ ಕೂಡ ಅಲ್ಲಿಗೆ ಬಂದು ವಧು ಹಾಗೂ ವರನ ಭುಜದ ಮೇಲೆ ಕೈಯಿಟ್ಟು ಡಾನ್ಸ್‌ ಮಾಡಲು ಶುರು ಮಾಡಿದ್ದಾನೆ. ಆದರೆ ವರನಿಗೆ ಆತ ಬಂದಿದ್ದು ಇಷ್ಟವಾಗಿಲ್ಲ ಹಾಗೂ ಸೋದರ ಸಂಬಂಧಿ ಹೋಗಲೆಂದು ಕಾದ ಆತ ನಂತರ ಸಿಟ್ಟಿನಿಂದ  ವಧುವಿನ ಕೆನ್ನೆಗೆ ಬಾರಿಸಿದ್ದಾನೆ.

Cute Video: ಮೆರವಣಿಗೆ ಬರುತ್ತಿದ್ದ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್‌...

ಇದು ವಧು ಹಾಗೂ ಆಕೆಯ ಕುಟುಂಬಸ್ಥರನ್ನು ಆಕ್ರೋಶಕ್ಕೀಡು ಮಾಡಿದೆ. ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನೆಂಟರು ಸಂಬಂಧಿಕರು ಎಲ್ಲರ ಎದುರು ಆತ ವಧುವಿನ ಮೇಲೆ ಕೈ ಮಾಡಿದ್ದಕ್ಕೆ ಸಿಟ್ಟಿಗೆದ್ದ ವಧುವಿನ ಕುಟುಂಬಸ್ಥರು ಮದುವೆಯನ್ನೇ ಮುರಿದಿದ್ದಾರೆ. ಅಲ್ಲದೇ ತಮ್ಮ ಸಂಬಂಧಿಗಳಲ್ಲೇ ಇದ್ದ ಓರ್ವ ಹುಡುಗನೊಂದಿಗೆ ಅದೇ ಮಂಟಪದಲ್ಲಿ ತಮ್ಮ ಮಗಳ ಮದುವೆಯನ್ನು ಮಾಡಿದ್ದಾರೆ. ಇದರಿಂದ ಅವಮಾನಕ್ಕೊಳಗಾದ ವರ ತಾನು ಮದುವೆಯ ಎಲ್ಲಾ ವ್ಯವಸ್ಥೆಗಾಗಿ ಏಳು ಲಕ್ಷ ರೂ. ಖರ್ಚು ಮಾಡಿದ್ದು, ಅದನ್ನು ವಧುವಿನ ಕಡೆಯವರು ನನಗೆ ಪರಿಹಾರವಾಗಿ ನೀಡಬೇಕು ಎಂದು  ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇತ್ತ ವಧುವಿನ ಕಡೆಯವರು ಕೂಡ ವಧುವಿಗೆ ಆತ ಹೊಡೆದಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. 

Latest Videos
Follow Us:
Download App:
  • android
  • ios