ಗಡಿಗೆ ಬಂತು ಬ್ರಹ್ಮೋಸ್, ಆಕಾಶ್ ಕ್ಷಿಪಣಿ| ಕ್ಷಿಪಣಿ ನಿಯೋಜಿಸಿದ ಚೀನಾಕ್ಕೆ ಭಾರತದಿಂದ ತಿರುಗೇಟು, ದಾಳಿಗೆ ಸಜ್ಜು
ನವದೆಹಲಿ(ಸೆ.29): ಪೂರ್ವ ಲಡಾಖ್ ಸಂಘರ್ಷದ ಹಿನ್ನೆಲೆಯಲ್ಲಿ ಗಡಿಯುದ್ದಕ್ಕೂ ಕ್ಷಿಪಣಿಗಳನ್ನು ಜಮಾವಣೆ ಮಾಡಿರುವ ಚೀನಾಕ್ಕೆ ಭಾರತ ತಕ್ಕ ತಿರುಗೇಟು ಕೊಟ್ಟಿದೆ. 500 ಕಿ.ಮೀ. ದೂರದವರೆಗಿನ ಗುರಿಯನ್ನು ಶಬ್ದಕ್ಕಿಂತ ವೇಗವಾಗಿ ಸಾಗಿ ಧ್ವಂಸಗೊಳಿಸುವ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ, 800 ಕಿ.ಮೀ. ದೂರದ ಗುರಿಯನ್ನು ನಾಶಗೊಳಿಸುವ ನಿರ್ಭಯ್ ಕ್ರೂಸ್ ಕ್ಷಿಪಣಿ ಹಾಗೂ ನೆಲದಿಂದ ಚಿಮ್ಮಿ ಆಗಸದಲ್ಲಿನ ದಾಳಿಗಳನ್ನು 40 ಕಿ.ಮೀ. ಪರಿಧಿಯಲ್ಲಿ ಶತ್ರುಗಳನ್ನು ನಾಶ ಮಾಡುವ ಆಕಾಶ್ ಕ್ಷಿಪಣಿಗಳನ್ನು ಗಡಿಯಲ್ಲಿ ನಿಯೋಜನೆ ಮಾಡಿದೆ.
ಹೆಮ್ಮೆ ಪಡಬೇಕು, ಅಟಲ್ ಟನಲ್ ವಿಶೇಷಗಳೇನು?
ಲಡಾಖ್ ಸಂಘರ್ಷ ಆರಂಭವಾದ ಬಳಿಕ ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್ ಪ್ರಾಂತ್ಯಗಳಲ್ಲಿ 2000 ಕಿ.ಮೀ. ದೂರದವರೆಗೆ ಚಲಿಸುವ, ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಚೀನಾ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಉಪಯೋಗಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಭಾರತವೂ ತನ್ನ ಮೂರು ಕ್ಷಿಪಣಿಗಳನ್ನು ಗಡಿಗೆ ತಂದಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಯುದ್ಧ ಸದೃಶ ವಾತಾವರಣ ಮುಂದುವರಿದಿದೆ.
ಅಕ್ಸಾಯ್ ಚಿನ್‌ನಿಂದ ಹಿಡಿದು ಭಾರತ- ಚೀನಾ ನಡುವಣ 3488 ಕಿ.ಮೀ. ಉದ್ದದ ನೈಜ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬರುವ ಕಾಶ್ಗಾರ್, ಹೊಟಾನ್, ಲ್ಹಾಸಾ, ನೈಯಿಂಗ್ಚಿಯಲ್ಲಿ ಚೀನಾದ ಕ್ಷಿಪಣಿಗಳು ಸಿದ್ಧವಾಗಿವೆ.
ರಾಫೆಲ್ ಯುದ್ಧ ವಿಮಾನದ ತಂತ್ರಜ್ಞಾನ, ಎಂಜಿನ್ ನೆರವಿಗೆ HAL ಜೊತೆ ಫ್ರಾನ್ಸ್ ಒಪ್ಪಂದ!
ಭಾರತ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿ 300 ಕಿ.ಮೀ. ಸಿಡಿತಲೆ ಒಯ್ಯಬಲ್ಲದು. ಚೀನಾದ ಟಿಬೆಟ್, ಕ್ಸಿನ್‌ಜಿಯಾಂಗ್ ಸೇನಾ ನೆಲೆಗಳನ್ನು ಇದು ಧ್ವಂಸಗೊಳಿಸಬಲ್ಲದು. ಅಲ್ಲದೆ ಇದನ್ನು ಸುಖೋಯ್ ಯುದ್ಧ ವಿಮಾನದಲ್ಲಿ ಇಟ್ಟು ಕೂಡ ಉಡಾಯಿಸಬಹುದು ಎಂದು ಮೂಲಗಳು ತಿಳಿಸಿವೆ.
