ಮನಾಲಿ (ಹಿಮಾಚಲ ಪ್ರದೇಶ)(ಸೆ. 25)   ಗಡಿಯಿಂದ ಶುಭ ಸುದ್ದಿಯೊಂದು ಬಂದಿದೆ.  ಹಿಮಾಲಯದಲ್ಲಿ ವಿಶ್ವದ ಅತ್ಯಂತ ಸವಾಲಿನ ಮತ್ತು ಎಂಜಿನಿಯರಿಂಗ್ ಮೋಟಾರು ಮಾರ್ಗಗಳಾದ ರೋಹ್ಟಾಂಗ್ ಪಾಸ್ ಹೆದ್ದಾರಿ ಸುರಂಗವು  ಟಿ -90 ಟ್ಯಾಂಕ್‌ಗಳು ಮತ್ತು ಸೇನೆ ಸಂಚರಿಸಲು ಅನುವಾಗಿದೆ.

ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ  ಈ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. 9.2 ಕಿ.ಮೀ ಉದ್ದದ ಕುದುರೆ ಲಾಳದ ಆಕಾರದ ಸಿಂಗಲ್-ಟ್ಯೂಬ್, ಎರಡು ಪಥದ ಸುರಂಗ - ಸಮುದ್ರ ಮಟ್ಟದಿಂದ 3,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿ ನಿರ್ಮಾಣ ಆಗಿದೆ.  

ಎಲ್ಲ ಬಗೆಯ ವಾತಾವರಣ ಚಳಿ, ಮಳೆ , ಹವಾಮಾನ ವೈಪರೀತ್ಯ ತಡೆದುಕೊಳಳುವಂತೆ ಇದನ್ನು ನಿರ್ಮಾಣ ಮಾಡಲಾಗಿದೆ. ಆದಾಗ್ಯೂ, ಲಡಾಖ್‌ನ ಫಾರ್ವರ್ಡ್ ಪ್ರದೇಶಗಳಿಗೆ ಎಲ್ಲಾ ಹವಾಮಾನ ರಸ್ತೆಗೆ ಹೆಚ್ಚಿನ ಸುರಂಗಗಳು ಬೇಕಾಗುತ್ತವೆ, ಶಿಕುನ್ಲಾದಲ್ಲಿ ಅಥವಾ 475 ಕಿ.ಮೀ.ನ ಮನಾಲಿ-ಲೇಹ್ ರಸ್ತೆಯಲ್ಲಿರುವ ಹೈ ಪಾಸ್‌ಗಳಲ್ಲಿ ವರ್ಷಪೂರ್ತಿ ಸಂಪರ್ಕಕ್ಕಾಗಿ ಬೇಕಾಗಿದೆ.

 ಈ ಟನಲ್ ಮಾರ್ಗಕ್ಕೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ಒ) 10 ವರ್ಷಗಳ ಸಂಪೂರ್ಣ ಪರಿಶ್ರಮದ ನಂತರ ಪೂರ್ಣಗೊಳ್ಳುತ್ತಿದ್ದ 4,000 ಕೋಟಿ ರೂ. ವೆಚ್ಚ ಮಾಡಲಾಗಿದೆ.


ಸುರಂಗ ನಿರ್ಮಾಣದ ವೇಳೆ ತಾಪಮಾನವು 55 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದನ್ನು ಕಾಣಲಾಗಿದೆ. ಭೂಕಂಪ ನಿರೋಧಕವಾಗಿ ಮಾರ್ಗ ಸಿದ್ಧಮಾಡಲಾಗಿದೆ. ಸುರಂಗ ನಿರ್ಮಾಣಕ್ಕೆ 12,252 ಮೆಟ್ರಿಕ್ ಟನ್ ಸ್ಟೀಲ್, 1,69,426 ಮೆಟ್ರಿಕ್ ಟನ್ ಸಿಮೆಂಟ್ ಮತ್ತು 1,01,336 ಮೆಟ್ರಿಕ್ ಟನ್ ಕಾಂಕ್ರೀಟ್ ಅನ್ನು ಬಳಸಲಾಗಿದೆ. ನಿರ್ಮಾಣದ ವೇಳೆ  5,05,264 ಮೆಟ್ರಿಕ್ ಟನ್ ಮಣ್ಣು ಮತ್ತು ಬಂಡೆ ಹೊರತೆರೆಗೆಯಲಾಗಿದೆ.

ಒಟ್ಟಿನಲ್ಲಿ ಭಾರತದ ಇತಿಹಾಸ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಈ ಸುರಂಗ ತನ್ನದೆ ಆತ ದಾಖಲೆ ಸ್ಥಾಪಿಲಿದ್ದು ಲೋಕಾರ್ಪಣೆಗೆ ಸಿದಗ್ಧವಾಗಿ ನಿಂತಿದೆ.