Asianet Suvarna News Asianet Suvarna News

ಅಂಬೇಡ್ಕರ್‌ ಉಡುಪಿಗೆ ಕೇಸರಿ ಬಣ್ಣ, ತಿಲಕ ಇಟ್ಟ ಪೋಸ್ಟರ್‌ಗಳು ವೈರಲ್‌: ತಮಿಳುನಾಡಿನಲ್ಲಿ ವಿವಾದ..!

ತಮಿಳುನಾಡಿನಲ್ಲಿ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡುವ ವಿಸಿಕೆ, ರಾಷ್ಟ್ರೀಯ ನಾಯಕನ ಕೇಸರಿಕರಣವನ್ನು ಖಂಡಿಸಿದೆ. ಅಲ್ಲದೆ, ತಂಜಾವೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಾಕಲಾಗಿದ್ದ ಪೋಸ್ಟರ್‌ಗಳನ್ನು ವಿಸಿಕೆ ಕಾರ್ಯಕರ್ತರು ಹರಿದು ಹಾಕಿದ್ದಾರೆ.

br ambedkar saffronised on death anniversary by tamil pro hindu group ash
Author
First Published Dec 6, 2022, 6:55 PM IST

'ಭಾರತೀಯ ಸಂವಿಧಾನದ ಪಿತಾಮಹ' (Father of Indian Constitution) ಡಾ. ಬಿ.ಆರ್.ಅಂಬೇಡ್ಕರ್ (Dr B.R. Ambedkar) ಅವರ ಪುಣ್ಯತಿಥಿಯ (Death Anniversary) ಸಂದರ್ಭದಲ್ಲಿ ತಮಿಳುನಾಡಿನಲ್ಲಿ (Tamil Nadu) ವಿವಾದ ಸೃಷ್ಟಿಯಾಗಿದೆ. ಬಲಪಂಥೀಯ ಗುಂಪು (Right Wing Group) ಹಿಂದೂ ಮುನ್ನಾನಿ ಹಾಕಿರುವ ಪೋಸ್ಟರ್‌ಗಳಲ್ಲಿ ಸಂವಿಧಾನ ಶಿಲ್ಪಿಯನ್ನು ಕೇಸರಿ ಉಡುಪಿನಲ್ಲಿ (Saffron Dress) ಚಿತ್ರಿಸಿರುವ ಕುರಿತು ತಮಿಳುನಾಡಿನಲ್ಲಿ ಗದ್ದಲ ಎದ್ದಿದೆ. ಕೇಸರಿ ನಾಯಕನನ್ನು ವೈಭವೀಕರಿಸೋಣ ಎಂಬ ಅಡಿ ಬರಹದೊಂದಿಗೆ ಅಂಬೇಡ್ಕರ್ ಅವರ ಹಣೆಯಲ್ಲಿ ‘ತಿಲಕ’ ಇಟ್ಟಿರುವ ಹಾಗೂ ಕೇಸರಿ ಶರ್ಟ್‌ ಧರಿಸಿರುವ ಪೋಸ್ಟರ್‌ಗಳು ತಮಿಳುನಾಡಿನ ತಂಜಾವೂರು ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿವೆ.

ಇನ್ನು, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಯ ಸ್ಥಳೀಯ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ, ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಕುಂಭಕೋಣಂ ಪೊಲೀಸರು ಗುರುಮೂರ್ತಿ ಎಂಬ ಹಿಂದೂ ಮುನ್ನಾನಿ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡುವ ವಿಸಿಕೆ, ರಾಷ್ಟ್ರೀಯ ನಾಯಕನ ಕೇಸರಿಕರಣವನ್ನು ಖಂಡಿಸಿದೆ. ಅಲ್ಲದೆ, ತಂಜಾವೂರು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಾಕಲಾಗಿದ್ದ ಪೋಸ್ಟರ್‌ಗಳನ್ನು ವಿಸಿಕೆ ಕಾರ್ಯಕರ್ತರು ಹರಿದು ಹಾಕಿದ್ದಾರೆ. ಹಿಂದೂ ಮುನ್ನಾನಿಯು ಈ ಹಿಂದೆಯೂ ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದು, ಪೂಜ್ಯ ಸಂತ ಕವಿ ತಿರುವಳ್ಳುವರ್ ಕೊಯಮತ್ತೂರಿನಲ್ಲಿ ನಡೆದ ಪುಸ್ತಕ ಮೇಳದಲ್ಲಿ ಸಾಮಾನ್ಯ ಬಿಳಿಯ ಬದಲಿಗೆ ಕೇಸರಿ ನಿಲುವಂಗಿಯನ್ನು ತೋರಿಸಿದ್ದರು. ಇದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಕೇಸರಿಕರಣದ ಆರೋಪಗಳೊಂದಿಗೆ ಗದ್ದಲ ಉಂಟುಮಾಡಿತ್ತು.

ವಿದುತಲೈ ಚಿರುತೈಗಲ್ ಕಚ್ಚಿ ನಾಯಕ ಮತ್ತು ಸಂಸದ ತೊಲ್ಕಪ್ಪಿಯನ್ ತಿರುಮಾವಳವನ್ ಅವರು ಕೇಸರಿ ಶರ್ಟ್‌ನಲ್ಲಿ ಹಣೆಯ ಮೇಲೆ ಪವಿತ್ರ ತಿಲಕ ಇರುವ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್ ಅಂಬೇಡ್ಕರ್ ಅವರನ್ನು ಕೀಳಾಗಿ ಮಾಡುವ ಮಾರ್ಗವಾಗಿದೆ ಎಂದೂ ಸಂಸದ  ಬಣ್ಣಿಸಿದ್ದಾರೆ. 

ಇದನ್ನು ಓದಿ: ಹುಮನಾಬಾದ್‌: ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿದ ಕಿಡಿಗೇಡಿಗಳು

ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ ಎಂಬ ಹಿಂದೂ ಪರ ಸಂಘಟನೆ ಈ ಪೋಸ್ಟರ್ ಅನ್ನು ಹಾಕಿದೆ ಎಂದು ತಿಳಿದುಬಂದಿದೆ. ಇನ್ನು, ಈ ಪೋಸ್ಟರ್‌ಗಳನ್ನು ಖಂಡಿಸಿರುವ ತಿರುಮಾವಳವನ್, ವಿಷ್ಣು ಅಥವಾ ಬ್ರಹ್ಮನನ್ನು ಪ್ರಾರ್ಥಿಸಲು ನಿರಾಕರಿಸಿದ ಅಂಬೇಡ್ಕರ್‌ರನ್ನು ಈ ಮೂಲಕ ಕೇಸರಿಮಯಗೊಳಿಸಿದೆ ಎಂದು ಕಿಡಿ ಕಾರಿದ್ದಾರೆ. ಅಂಬೇಡ್ಕರ್ ಅವರನ್ನು ಕೇಸರಿ ಅಂಗಿ ಮತ್ತು ಹಣೆಯ ಮೇಲೆ ಪವಿತ್ರ ತಿಲಕವನ್ನು ಚಿತ್ರಿಸಿದ ಇಂತಹ ಧಾರ್ಮಿಕ ಮತಾಂಧರನ್ನು ತಕ್ಷಣವೇ ಬಂಧಿಸಬೇಕು ಎಂದು ತಿರುಮಾವಲವನ್ ಟ್ವೀಟ್‌ ಮಾಡಿದ್ದಾರೆ. 

ಇನ್ನೊಂದೆಡೆ, ಈ ವಿವಾದದ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ ಹಿಂದೂ ಮಕ್ಕಳ್ ಕಚ್ಚಿ ಮುಖಂಡ ಅರ್ಜುನ್ ಸಂಪತ್, ಜಾಗೃತಿ ಮೂಡಿಸಲು ಬಿ.ಆರ್ ಅಂಬೇಡ್ಕರ್ ಅವರಿಗೆ ಕೇಸರಿ ಬಣ್ಣ ಹಚ್ಚಲಾಗಿದೆ. ತಿರುಮಾವಳವನ್ ಅವರು ಸ್ವಂತ ಅಭಿಪ್ರಾಯಗಳನ್ನು ಹೊಂದಿದ್ದಾರೆ, ಆದರೆ ಅಂಬೇಡ್ಕರ್ ಅವರು ಕೇಸರಿ ಪ್ರೇಮಿಯಾಗಿದ್ದರು. ಏಕೆಂದರೆ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು, ಅದರ ಸಂಕೇತ ಕೇಸರಿಯಾಗಿದೆ. ಅವರು ತಿರುವಳ್ಳುವರ್ ಮತ್ತು ವಲ್ಲಲಾರ್ ಅವರನ್ನು ಹಿಂದೂಗಳಲ್ಲ ಎಂದು ಸ್ಥಾಪಿಸಲು ಪ್ರಯತ್ನಿಸಿದರು.

ಇದನ್ನೂ ಓದಿ: Chikkamagaluru ; ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆರೋಪ, ದಲಿತ ಸಂಘಟನೆಗಳ ತೀವ್ರ ಅಕ್ರೋಶ

ಅಂಬೇಡ್ಕರ್ ಅವರನ್ನು ಪೆರಿಯಾರ್‌ಗೆ ಹೋಲಿಕೆ ಮಾಡಲು ಯತ್ನಿಸುತ್ತಿರುವ ತಿರುಮಾವಲವನ್ ವಿರುದ್ಧ ಜಾಗೃತಿ ಮೂಡಿಸಲು ನಾವು ಅಂಬೇಡ್ಕರ್ ಅವರನ್ನು ಕೇಸರಿಮಯಗೊಳಿಸಿದ್ದೇವೆ ಎಂದು ಅರ್ಜುನ್‌ ಸಂಪತ್ ಅಂಬೇಡ್ಕರ್‌ ಉಡುಪಿಗೆ ಕೇಸರಿ ಬಣ್ಣ ಬಳಿದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. 

Follow Us:
Download App:
  • android
  • ios