Asianet Suvarna News Asianet Suvarna News

Chikkamagaluru ; ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆರೋಪ, ದಲಿತ ಸಂಘಟನೆಗಳ ತೀವ್ರ ಅಕ್ರೋಶ

ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆರೋಪ. ನಗರದ ಹನುಮಂತ ವೃತ್ತದಲ್ಲಿ ಹಾಕಿದ್ದ ಫ್ಲೆಕ್ಸ್. ದಲಿತ ಸಂಘಟನೆಗಳ ತೀವ್ರ ಅಕ್ರೋಶ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್. ಅಪಮಾನ ಮಾಡಿದವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ. 

Chikkaballapura Ambedkar portrait is accused of defamation Dalit organizations are furious gow
Author
First Published Sep 23, 2022, 8:06 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಸೆ.23): ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಚಿಕ್ಕಮಗಳೂರು ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಅಪಮಾನ ಮಾಡಿದವರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ಜನ ಪ್ರತಿನಿಧಿಗಳು ಹಾಗೂ ಪೌರಸೇವಾ ನೌಕರರ ಸಂಘಟನೆ ಪದಾಧಿಕಾರಿಗಳನ್ನೊಳಗೊಂಡಂತೆ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿ ಒತ್ತಾಯಿಸಿದರು.ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಅಂಬೇಡ್ಕರ್, ನಗರಸಭೆ ಅಧಿಕಾರಿ, ಜನಪ್ರತಿನಿಧಿಗಳು, ನೌಕರರನ್ನೊಳಗೊಂಡ ಫ್ಲೆಕ್ಸ್ನಲ್ಲಿದ್ದ ಅಂಬೇಡ್ಕರ್ ಪೋಟೋಗೆ ಹಾನಿ ಮಾಡಿದ್ದಾರೆ. ಮದ್ಯವ್ಯಸನಿಗಳು ಮಾಡಿರಬಹುದು ಎನ್ನಬಹುದು ಆದರೆ ಈ ಕೃತ್ಯವನ್ನು ಕಿಡಿಗೇಡಿಗಳು, ಜಾತಿವಾದಿಗಳು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎನಿಸುತ್ತಿದೆ. ಇದು ದೇಶಕ್ಕೆ ಅಪಮಾನ ಮಾಡುವಂತದ್ದು.ಕೆಟ್ಟ ಕೆಲಸಮಾಡಿ ಜೈಲಿಗೆ ಹೋಗಿ ಬಂದವರಿಗೆ ನಮ್ಮ ದೇಶದಲ್ಲಿ ಶಾಲು ಹೊದಿಸಿ ಹೂ ಕೊಟ್ಟು ಸನ್ಮಾನ ಮಾಡುವುದು ಇಂದಿನ ಸಮಾಜದ ಸ್ಥಿತಿಯಾಗಿದೆ. ಹಿಂದೆ ಹೀಗಿರಲಿಲ್ಲಾ ತಪ್ಪು ಮಾಡಿದರೆ ತಪ್ಪು ಎಂದು ಹೇಳುತ್ತಿದ್ದರು.

ಆದರೆ ಇಂದು ತಪ್ಪು ಮಾಡಿದವನಿಗೆ ಅನೇಕ ಪುರಸ್ಕಾರಗಳು ಸಿಗುತ್ತಿರುವುದು ದುರ್ದೈವ ಎಂದರು..ಪ್ರಗತಿಪರ ಸಂಘಟನೆ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಕೃತ್ಯ ಖಂಡನೀಯ, ಈ ರೀತಿ ಘಟನೆಗಳು ದೇಶದಲ್ಲಿ ನಡೆಯುತ್ತಲೆ ಇದ್ದು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಈ ಘಟನೆಗಳು ಮರುಕಳಿಸುವುದಕ್ಕೆ ಅಧಿಕಾರಿ, ಜನಪ್ರತಿನಿಧಿಗಳೆ ಕಾರಣ ಎಂದು ಆರೋಪಿಸಿದರು.ಪ್ರತಿಭಟನೆ ಹಿನ್ನಲೆಯಲ್ಲಿ ಮುಂಜ್ರಾಗತ ಕ್ರಮವಾಗಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು  ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ನಡೆಸಿ ಕೊಡಲೇ ತಪ್ಪಿತಸ್ಥರನ್ನು ವಶಕ್ಕೆ ಪಡೆಯುತ್ತೇವೆಂದು ವಾಗ್ದಾನ ಮಾಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.

ಉಳ್ಳೇರಹಳ್ಳಿ ಗ್ರಾಮದ ಸಂತ್ರಸ್ತ ದಲಿತ ಕುಟುಂಬಕ್ಕೆ ಸಾಂತ್ವನ
ಮಾಲೂರು ತಾಲೂಕು ಟೇಕಲ್‌ ಸಮೀಪ ಉಳ್ಳೇರಹಳ್ಳಿ ಗ್ರಾಮದಲ್ಲಿ ದಲಿತ ಬಾಲಕನ ಮೇಲೆ ಹಲ್ಲೆ, ದಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಜಿಲ್ಲಾಡಳಿತ ಹಾಗೂ ಸಂಸದರು ಭೇಟಿ ನೀಡಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಜಿಲ್ಲಾಧಿಕಾರಿ ವೆಂಕಟರಾಜು, ಎಸ್‌ಪಿ ದೇವರಾಜ್‌, ರಾಜ್ಯ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್‌ಕುಮಾರ್‌ ಸಂತ್ರಸ್ತ ದಲಿತ ಕುಟುಂಬಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

ಈ ವೇಳೇ ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಗೆ ಹೆಸರು ಪಡೆದಿದ್ದು ಯಾವುದೇ ರೀತಿ ಘಟನೆಗೆ ಆಸ್ಪದವೇ ಇಲ್ಲವಾಗಿತ್ತು. ಉಳ್ಳೇರಹಳ್ಳಿ ಘಟನೆಯಿಂದ ಬಹಳ ನೋವಾಗಿದ್ದು, ಈ ಪರಿಸ್ಥಿತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಎಲ್ಲವನ್ನು ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಲ್ಲರು ಎಚ್ಚರ ವಹಿಸಬೇಕು ಎಂದರು. ಇದೇ ವೇಳೆ ಎಲ್ಲಾ ಅಧಿಕಾರಿಗಳು ಭೂತಮ್ಮನ ದೇವಾಲಯಕ್ಕೆ ಭೇಟಿ ನೀಡಿದರು.

ಸ್ವಂತ ಮನೆಗೆ ಬೇಡಿಕೆ: ಕುಟುಂಬದವರು ಇರುವ ಮನೆಯು ಅರಣ್ಯ ಇಲಾಖೆಗೆ ಸೇರಿದ್ದು ಇರಲು ಮನೆ ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದಾಗ ತಕ್ಷಣವೇ ಸಂಸದರು, ಮಾಲೂರು ತಾ.ಪಂ.ಇಒ ಮುನಿರಾಜುರವರಿಗೆ ಪಂಚಾಯ್ತಿ ಗ್ರಾಮಠಾಣೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಈಗಲೇ ಸ್ಥಳ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪಿಡಿಒ ಮಂಜುಳರವರು ಈ ಬಗ್ಗೆ ಗ್ರಾಮದಲ್ಲಿ ಸ್ಥಳವನ್ನು ಹುಡುಕಿದಾಗ ಗ್ರಾಮದಲ್ಲಿರುವ ಒಬ್ಬರು ನಾನು ಅವರು ಮನೆ ಕಟ್ಟಿಕೊಳ್ಳಲು ಜಾಗ ನೀಡುತ್ತೇವೆ ಎಂದರು. ಅಷ್ಟರಲ್ಲಿ ಗ್ರಾಮಠಾಣೆ ವ್ಯಾಪ್ತಿಯಲ್ಲಿ ಸ್ಥಳವನ್ನು ನಿಗದಿಪಡಿಸಿ ಅವರಿಗೆ ಆ ಜಾಗವನ್ನು ತೋರಿಸಿ ನಂತರ ಅವರ ಹೆಸರಿಗೆ 9, 10ನ್ನು ಹಕ್ಕುಪತ್ರವನ್ನು ವಿತರಿಸಲಾಯಿತು.

ಸಂಸದ ಹಾಗೂ ಜಿಲ್ಲಾಡಳಿತದಿಂದ ಸಹಾಯಧನ: ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಧಿಕಾರಿ ವೆಂಕಟರಾಜುರವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ 25 ಸಾವಿರ ಚೆಕ್‌ ನೀಡಿದರು. ಸಂಸದ ಎಸ್‌.ಮುನಿಸ್ವಾಮಿರವರು 50 ಸಾವಿರ ಚೆಕ್‌ ನೀಡಿ ನೀವು ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದರು. ಇದೇ ವೇಳೆ ದಲಿತ ಬಾಲಕ ಚೇತನ್‌ ತಾಯಿ ಶೋಭಗೆ ಹಾಸ್ಟೆಲ್‌ನಲ್ಲಿ ಉದ್ಯೋಗ ಕಲ್ಪಿಸಿಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

Varanasi Rape: ಮಾರ್ಷಿಯಲ್‌ ಆರ್ಟ್ಸ್‌ ತರಬೇತುದಾರನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ..!

ಈ ಸಂದರ್ಭದಲ್ಲಿ ತಾ.ಪಂ.ಇಒ ಮುನಿರಾಜು, ತಹಸೀಲ್ದಾರ್‌ ಮಲ್ಲಿಕಾರ್ಜುನ್‌, ಪಿಡಿಒ ಮಂಜುಳ, ಪಂಚಾಯ್ತಿ ಅಧ್ಯಕ್ಷೆ ಅರುಣಮ್ಮ ಶ್ರೀನಿವಾಸ್‌, ಇಲಾಖಾ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.

ಉಡುಪಿ: ದಲಿತ ಬಾಲಕನಿಗೆ ಬಹಿಷ್ಕಾರ: ಪೇಜಾವರ ಶ್ರೀ ಕಳವಳ

ಇದಕ್ಕೂ ಮುಂಚೆ ಸಂತ್ರಸ್ತೆ ದಲಿತ ಕುಟುಂಬಕ್ಕೆ ಎಲ್ಲಾ ಸೌಕರ್ಯ ಕೊಡುವಲ್ಲಿ ತಾಲ್ಲೂಕು ಜಿಲ್ಲಾಡಳಿತವು ಗಮನಹರಿಸಿಲ್ಲವೆಂದು ದಲಿತ ಸಂಘಟನೆಗಳು ಗ್ರಾಮದಲ್ಲಿ ಧರಣಿ ನಡೆಸಿದರು. ಎಲ್ಲರಿಗೂ ಧಿಕ್ಕಾರ ಕೂಗಿದರು. ಇದೇ ವೇಳೆ ಸಮಯಕ್ಕೆ ಸರಿಯಾಗಿ ಸಂಸದರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Follow Us:
Download App:
  • android
  • ios