10 ದಿನ ರಜೆಗಾಗಿ ಯುವತಿ ಮೆಸೇಜ್, ಬಾಸ್ 2 ನಿಮಿಷದಲ್ಲಿ ಅನುಮತಿ ನೀಡಿದ ಪ್ರತಿಕ್ರಿಯೆ ವೈರಲ್!
ಕೆಲಸದ ನಡುವೆ ಒಂದೆರೆಡು ದಿನ ರಜೆ ಕೇಳಿದರೆ ಸಿಡಿಮಿಡಿಗೊಳ್ಳುವ ಅಧಿಕಾರಿಗಳು, ಬಾಸ್‌ಗಳೇ ಹೆಚ್ಚು. ಇದರ ನಡುವೆ ಯುವತಿಯೊಬ್ಬಳು 10 ದಿನದ ರಜೆಗೆ ವ್ಯಾಟ್ಸ್ಆ್ಯಪ್ ಸಂದೇಶ ಮಾಡಿದ್ದಾಳೆ. 2 ನಿಮಿಷದಲ್ಲಿ ಬಾಸ್ 10 ದಿನ ರಜೆಗೆ ಅನುಮತಿ ನೀಡಿದ್ದಾರೆ. ಬಾಸ್ ಪ್ರತಿಕ್ರಿಯೆ ವೈರಲ್ ಆಗಿದೆ. ನಿಮಗೂ ರಜೆ ಬೇಕಿದ್ದರೆ ಈ ಮೆತಡ್ ಫಾಲೋ ಮಾಡಿ

ನವದೆಹಲಿ(ಸೆ.14) ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸದ ನಡುವೆ ರಜೆ ಪಡೆಯುವುದು ಹರಸಾಹಸ. ರಜೆ ಕೊಡಲಿಲ್ಲ ಎಂದು ಗುಂಡಿಕ್ಕಿ ಕೊಂದ, ಹಲ್ಲೆ ಮಾಡಿದ ಹಲವು ಘಟನೆಗಳಿವೆ. ಇನ್ನು ಟಾರ್ಗೆಟ್, ಕೆಲಸದ ಒತ್ತಡ, ಉದ್ಯೋಗಿಗಳ ಕೊರತೆ, ಜವಾಬ್ದಾರಿ ಸೇರಿದಂತೆ ಹಲವು ಕಾರಣಗಳಿಂದ ಕೆಲಸದ ನಡುವೆ ಒಂದರೆಡು ದಿನ ರಜೆ ಪಡೆಯುವುದು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಯುವತಿ ತನಗೆ 10 ದಿನ ರಜೆ ಬೇಕು ಎಂದು ಬಾಸ್‌ಗೆ ವ್ಯಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದಾಳೆ. 2 ನಿಮಿಷದಲ್ಲಿ ಬಾಸ್‌ನಿಂದ ಪ್ರತಿಕ್ರಿಯೆ ಬಂದಿದೆ. 10 ದಿನ ರಜೆ ತೆಗೆದುಕೊಳ್ಳಲು ಅನುಮತಿ ನೀಡಿದ್ದಾರೆ. ಈ ವ್ಯಾಟ್ಸ್ಆ್ಯಪ್ ಚಾಟ್ ಇದೀಗ ವೈರಲ್ ಆಗಿದೆ. ನಿಮಗೂ ರಜೆ ಬೇಕಿದ್ದರೆ ಇದೇ ವಿಧಾನ ಅನುಸರಿಸವುದು ಉತ್ತಮ.
ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಆಕಾಂಶ ದುಗಾಡ್ ಇದೀಗ 10 ದಿನ ಪಡೆದು ಹಾಯಾಗಿ ಸುತ್ತಾಡುತ್ತಿದ್ದಾಳೆ. ಇದರ ನಡುವೆ ಆಕಾಂಶ ಬಾಸ್ ಜೊತೆಗಿನ ವ್ಯಾಟ್ಸ್ಆ್ಯಪ್ ಚಾಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಕ್ಷಣಾರ್ಧದಲ್ಲೇ ಈ ಚಾಟ್ ವೈರಲ್ ಆಗಿದೆ. ಇಷ್ಟೇ ಅಲ್ಲ ಅನುಮತಿ ಸಿಕ್ಕ ಬಳಿಕ ಎರಡು ಸಂದೇಶಗಳನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಭಾರಿ ಚರ್ಚೆಯಾಗುತ್ತಿದೆ.
30 ಪೇಯ್ಡ್ ಲೀವ್ ಬಳಕೆಯಾಗದಿದ್ದರೆ ರಜೆಯ ಪಾವತಿ ಕಡ್ಡಾಯ, ಹೊಸ ಕಾರ್ಮಿಕ ನೀತಿ!
ಆಕಾಂಶಾ ದುಗಾಡ್ ತನ್ನ ಸೂಪರ್‌ವೈರಸ್ ಬಳಿ 10 ದಿನ ರಜೆಗೆ ಬೇಡಿಕೆ ಇಟ್ಟು ಇದೀಗ ಸುದ್ದಿಯಾಗಿದ್ದಾಳೆ. ಒಂದೆರೆಡು ದಿನದ ರಜೆಗೆ ನೂರು ಪ್ರಶ್ನೆ ಕೇಳುವ ಹಿರಿಯ ಅಧಿಕಾರಿಗಳು, ಬಾಸ್ ಯಾವುದೇ ಮರುಮಾತಿಲ್ಲದೆ ಅಕಾಂಶಾ ದುಗಾಡ್‌ಗೆ ರಜೆ ನೀಡಿದ್ದು ಹೇಗೆ ಅನ್ನೋದು ಇದೀ ಚರ್ಚೆಯಾಗುತ್ತಿದೆ. ಅಕಾಂಶ ವ್ಯಾಟ್ಸ್ಆ್ಯಪ್ ಮೂಲಕ ಸೂಪರ್‌ವೈಸರ್‌ಗೆ ಕಳುಹಿಸಿದ ಸಂದೇಶ ಹೀಗಿದೆ.
ಹಾಯ್ ಪೂಜಾ, ನಾನು ಈ ತಿಂಗಳ 15 ರಂದು ಎಲ್ಲೋ ಒಂದು ಪ್ರವಾಸ ಹೋಗುತ್ತಿದ್ದೇನೆ. ಹೀಗಾಗಿ 15 ರಿಂದ 15 ದಿನದವರೆಗೆ ರಜೆ ತೆಗೆದುಕೊಳ್ಳಬಹುದೆ? ಎಂದು ಅಕಾಂಶಾ ಗುಗಾಡ್ ವ್ಯಾಟ್ಸ್ಆ್ಯಪ್ ಮೆಸೇಜ್ ಮಾಡಿದ್ದಾಳೆ. ಮಧ್ಯಾಹ್ನ 12.22ಕ್ಕೆ ಅಕಾಂಶಾ ದುಗಾಡ್ ಈ ಸಂದೇಶ ಕಳುಹಿಸಿದ್ದಾಳೆ. 12.24ಕ್ಕೆ ಸೂಪರ್‌ವೈಸರ್ ಪ್ರತಿಕ್ರಿಯೆ ನೀಡಿದ್ದಾರೆ. ಯೆಸ್, ರಜಾ ಸವಿ ಅನುಭವಿಸಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಸ್ 2 ನಿಮಿಷದಲ್ಲಿ 10 ದಿನಕ್ಕೆ ಅನುಮತಿ ನೀಡಿದ್ದು ಹೇಗೆ ಅನ್ನೋದು ಇದೀಗ ಹಲವರು ಕಮೆಂಟ್ ಮಾಡಿದ್ದಾರೆ. ಅನುಮತಿ ಸಂದೇಶ ಕಳುಹಿಸಿದ ಬಳಿಕ ಕಳುಹಿಸಿದ 2 ಸಂದೇಶ ಡಿಲೀಟ್ ಮಾಡಲಾಗಿದೆ. ಇದು ರಜೆ ಅನುಭವಿಸಿ ಸಂದೇಶದ ಬಳಿಕ ಸೂಪರ್‌ವೈಸರ್ ಹಾಗೇ ಮನೆಯಲ್ಲೇ ಇರಿ ಎಂದು ಕಳುಹಿಸಿದ ಸಂದೇಶ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಆರ್‌ಟಿಐ ಮಾಹಿತಿ, ಕಳೆದ 9 ವರ್ಷಗಳಿಂದ ಒಂದೇ ಒಂದು ರಜೆ ತೆಗೆದುಕೊಳ್ಳದ ಪ್ರಧಾನಿ ನರೇಂದ್ರ ಮೋದಿ!
10 ರಜೆ ತೆಗೆದುಕೊಳ್ಳಿ, ಹಾಗಯೇ ರಾಜೀನಾಮೆ ಪತ್ರ ಮೇಲ್ ಮಾಡಿ ಎಂದು ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡಿದ್ದಾರೆ. ಕೆಲಸ ತೊರೆದ ಕಾರಣ ಧೈರ್ಯದಿಂದ ಕಂಪನಿಯ ಆಂತರಿಕ ಚಾಟ್ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅಕಾಂಶ ತಾನೂ ಪ್ರವಾಸ ಹೋಗುತ್ತಿದ್ದೇನೆ. ಇದಕ್ಕಾಗಿ 10 ದಿನ ರಜೆ ಬೇಕು ಎಂದು ಸತ್ಯವನ್ನು ಹೇಳಿದ್ದಾಳೆ. ಕೆಲವರು 2 ದಿನ ಪಡೆದು, ಮತ್ತೆ ಒಂದು ವಾರ ಹುಷಾರಿಲ್ಲ ಎಂದು ಸುಳ್ಳು ಹೇಳಿಲ್ಲ. ಆಕೆ ಸತ್ಯ ಹೇಳಿದ್ದಾಳೆ. ಹೀಗಾಗಿ 2 ನಿಮಿಷದಲ್ಲಿ ರಜೆ ಸಿಕ್ಕಿದೆ ಎಂದು ಕಮೆಂಟ್ ಮಾಡಿದ್ದಾರೆ.