Asianet Suvarna News Asianet Suvarna News

ಆರ್‌ಟಿಐ ಮಾಹಿತಿ, ಕಳೆದ 9 ವರ್ಷಗಳಿಂದ ಒಂದೇ ಒಂದು ರಜೆ ತೆಗೆದುಕೊಳ್ಳದ ಪ್ರಧಾನಿ ನರೇಂದ್ರ ಮೋದಿ!


ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಲ್ಲಿಯವರೆಗೂ ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ ಎನ್ನುವುದು ಅರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
 

His 9 Year Work Streak  PM Narendra Modi Has Not Taken Any Leave Since Assuming Office san
Author
First Published Sep 4, 2023, 3:38 PM IST

ನವದೆಹಲಿ (ಸೆ.4): ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡು 9 ವರ್ಷಗಳಾಗಿವೆ. ಅಂದಿನಿಂದ ಇಲ್ಲಿಯವರೆಗೂ ಅವರು ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ ಎನ್ನುವ ಅಚ್ಚರಿಯ ಸಂಗತಿಯನ್ನು ಪ್ರಧಾನಮಂತ್ರಿಗಳ ಕಚೇರಿ (ಪಿಎಂಓ) ಖಚಿತಪಡಿಸಿದೆ. 2023ರ ಜುಲೈ 31 ರಂದು ಪ್ರಫುಲ್ ಪಿ ಸರ್ದಾ ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಮೂಲಕ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಿಎಂಒ, ಮೇ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪ್ರಧಾನಿ ನರೇಂದ್ರ ಮೋದಿ ಅವರು 3,000 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ದಣಿವಿಲ್ಲದೆ ದೇಶ ಸೇವೆಯಲ್ಲಿ ಸಪರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಈ ಆರ್‌ಟಿಐ ಅರ್ಜಿ ಹಾಗೂ ಅದರ ಉತ್ತರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನೆಟಿಜನ್‌ಗಳು ಆರ್‌ಟಿಐ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಮಾತನಾಡಿದ್ದರು. ಎಷ್ಟು ಶಿಸ್ತಿನಿಂದ ಅವರ ಕೆಲಸ ಕೂಡಿರುತ್ತದೆ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದ ಅವರು, 2001ರಲ್ಲಿ ಗುಜರಾತ್‌ನಲ್ಲಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಲ್ಲಿಯವರೆಗೂ ಒಂದೇ ಒಂದು ದಿನವನ್ನು ಅವರು ರಜೆ ಎಂದು ತೆಗೆದುಕೊಂಡಿಲ್ಲ. ತಾವು ಇರುವ ಸ್ಥಳಕ್ಕೆ ಅಪ್ರತಿಮವಾಗಿ ಅವರು ಸಮರ್ಪಣಾ ಭಾವವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದರು.

ಪುಣೆ ಮೂಲದ ವಾಣಿಜ್ಯೋದ್ಯಮಿ ಪ್ರಫುಲ್ ಪಿ ಸರ್ದಾ ತಾವು ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಿದ್ದರು. 2014ರಲ್ಲಿ ಭಾರತದ ಪ್ರಧಾನಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು ಎನ್ನುವುದು ಮೊದಲ ಪ್ರಶ್ನೆಯಾಗಿದೆ. ಅದಕ್ಕೆ ಪಿಎಂಓ ಉತ್ತರ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಸದಾಕಾಲ ಕರ್ತವ್ಯದಲ್ಲಿಯೇ ಇದ್ದಾರೆ. ಪ್ರಧಾನಿ ಹುದ್ದೆಗೆ ಏರಿದ ಬಳಿಕ ನರೇಂದ್ರ ಮೋದಿ ಅವರು ಯಾವುದೇ ರೀತಿಯ ರಜೆಯನ್ನು ಪಡೆದಿಲ್ಲ ಎಂದು ಉತ್ತರ ನೀಡಿದೆ.

ಇನ್ನು 2ನೇ ಪ್ರಶ್ನೆಯಲ್ಲಿ ಸರ್ದಾ ಅವರು, ಭಾರತದ ಪ್ರಧಾನಮಂತ್ರಿಯಾದ ನಂತರ ಇಲ್ಲಿಯವರಗೆ ನರೇಂದ್ರ ಮೋದಿಯವರು ಎಷ್ಟು ದಿನಗಳ ಹಾಜರಾತಿ ಹಾಕಿದ್ದಾರೆ ಹಾಗ ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎನ್ನುವ ವಿವರಗಳನ್ನು ಕೇಳಿದ್ದರು. ಇದಕ್ಕೆ ವೆಬ್‌ಸೈಟ್‌ ಲಿಂಕ್‌ಅನ್ನೂ ಉತ್ತರದಲ್ಲಿ ನೀಡಿರುವ ಪಿಎಂ, ಮೇ 2014ರಲ್ಲಿ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ದೇಶ ಹಾಗೂ ವಿದೇಶಗಳಲ್ಲಿ 3 ಸಾವಿರಕ್ಕೂ ಅಧಿಕ ಕಾರ್ಯಕ್ರಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

100 ಕೋಟಿ ಹಸಿದ ಹೊಟ್ಟೆಗಳ ದೇಶ ಈಗ ಬಲಶಾಲಿ: ಪ್ರಧಾನಿ ಮೋದಿ

ಇನ್ನು ಆರ್‌ಟಿಐ ಪ್ರಶ್ನೆಗೆ ಪಿಎಂಓ ನೀಡಿದ ಉತ್ತರಗಳು ಅಂತರ್ಜಾಲದಲ್ಲಿ ವೈರಲ್‌ ಆಗಿವೆ. ಇಂಟರ್ನೆಟ್‌ನಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಬ್ಬ ಶ್ರೇಷ್ಠ ಮತ್ತು ಆದರ್ಶ ಪ್ರಧಾನಿ ನರೇಂದ್ರ ಮೋದಿಜೀ ಸರ್. ರಾಷ್ಟ್ರದ ಕಡೆಗೆ ಅವರ ಸಹಕಾರ, ಸಮರ್ಪಣೆ ಮತ್ತು ಜವಾಬ್ದಾರಿಗಾಗಿ ನಾವು ಯಾವಾಗಲೂ ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಿಮ್ಮ ಕೊಡುಗೆಗಾಗಿ ತುಂಬಾ ಧನ್ಯವಾದಗಳು ಸರ್,” ಎಂದು ಎಕ್ಸ್ ಬಳಕೆದಾರರಲ್ಲಿ ಒಬ್ಬರು ಬರೆದಿದ್ದಾರೆ.

ಮೋದಿ ದೇಶದ ಐರನ್‌ ಲೆಗ್‌ ರಾಜಕಾರಣಿ, ಅವರು ಕಾಲಿಟ್ಟಲ್ಲೆಲ್ಲಾ ಬಿಜೆಪಿಗೆ ಸೋಲು: ಉಗ್ರಪ್ಪ

 

 

Follow Us:
Download App:
  • android
  • ios