ಬೋರ್‌ವೆಲ್‌ ಕೊರೆದರೆ ನದಿ ಉಕ್ಕಿತು: ಸ್ಥಳಕ್ಕಾಗಮಿಸಿ ನಮಿಸಿದ ಜನ

ಕೃಷಿ ಭೂಮಿಗೆ ನೀರುಣಿಸಲು ರೈತರೊಬ್ಬರು ಬೋರ್‌ವೆಲ್‌ ಕೊರೆಸಿದ ವೇಳೆ, ಅದರಿಂದ ನದಿಯಂತೆ ನೀರು ಉಕ್ಕಿ ಹರಿದ ಅಚ್ಚರಿಯ ಘಟನೆ ರಾಜಸ್ಥಾನದ ಮರುಭೂಮಿ ಪ್ರದೇಶವಾದ ಜೈಸಲ್ಮೇರ್‌ನಲ್ಲಿ ನಡೆದಿದೆ. ಬೋರ್‌ವೆಲ್‌ ಸುತ್ತಲೂ ನೀರು ನಿಂತು ಕೆರೆ ನಿರ್ಮಾಣವಾಗಿದೆ. 
 

Borewell was drilled and the river gushed People who reached the spot and bowed down gvd

ಜೈಸಲ್ಮೇರ್‌ (ಜ.01): ಕೃಷಿ ಭೂಮಿಗೆ ನೀರುಣಿಸಲು ರೈತರೊಬ್ಬರು ಬೋರ್‌ವೆಲ್‌ ಕೊರೆಸಿದ ವೇಳೆ, ಅದರಿಂದ ನದಿಯಂತೆ ನೀರು ಉಕ್ಕಿ ಹರಿದ ಅಚ್ಚರಿಯ ಘಟನೆ ರಾಜಸ್ಥಾನದ ಮರುಭೂಮಿ ಪ್ರದೇಶವಾದ ಜೈಸಲ್ಮೇರ್‌ನಲ್ಲಿ ನಡೆದಿದೆ. ಬೋರ್‌ವೆಲ್‌ ಸುತ್ತಲೂ ನೀರು ನಿಂತು ಕೆರೆ ನಿರ್ಮಾಣವಾಗಿದೆ. ಇದನ್ನು ನೋಡಿ 5000 ವರ್ಷಗಳ ಹಿಂದೆ ಭೂಸಮಾಧಿ ಆಯ್ತು ಎನ್ನಲಾದ, ಪುರಾಣಗಳಲ್ಲಿ ಬರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬೆಲ್ಲಾ ಸುದ್ದಿ ಹರಡಿದೆ.

ಜಸಲ್ಮೇರ್‌ನ ಮೋಹನ್‌ಗಢ ಕಾಲುವೆ ಪ್ರದೇಶದಲ್ಲಿ ರೈತರೊಬ್ಬರು ಬೋರ್‌ ಕೊರೆಸಿದ ವೇಳೆ ಅದರೊಳಗಿಂದ ಭಾರೀ ಪ್ರಮಾಣದ ಅನಿಲ ಮತ್ತು ನೀರು ಹೊರಚಿಮ್ಮಿದೆ. ಈ ಸದ್ದು ಕೇಳಿ ರೈತರು ಆತಂಕಗೊಂಡರೂ, ಬಳಿಕ ನೀರು ಹರಿದು ರೀತಿ ನೀಡಿ ಸಂಭ್ರಮಿಸಿದ್ದಾರೆ.ವಿಜ್ಞಾನಿಗಳು ಹೇಳಿದ್ದೇನು?:ಅಂತರ್ಜಲ ವಿಜ್ಞಾನಿ ಡಾ. ನಾರಾಯಣ ದಾಸ್‌ ಪ್ರಕಾರ, ನೀರು ಮೇಲ್ಮುಖವಾಗಿ ಚಲಿಸುವಾಗ ಉಂಟಾದ ಒತ್ತಡದಿಂದ ಹೀಗಾಗಿರಬಹುದು ಎಂದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಆ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163 ಹೇರಲಾಗಿದ್ದು, 500 ಮೀಟರ್‌ ಅಂತರದಲ್ಲಿ ಯಾರೂ ಸುಳಿಯದಂತೆ ಸೂಚಿಸಲಾಗಿದೆ. 

ಇಸ್ರೋ ಮಹಾ ಸಾಹಸ: ಬಾಹ್ಯಾಕಾಶದಲ್ಲಿ 2 ಉಪಗ್ರಹಗಳನ್ನು ಪರಸ್ಪರ ಕೂಡಿಸಿ, ಬೇರ್ಪಡಿಸುವ ಭರ್ಜರಿ ಕಸರತ್ತು

ಸರಸ್ವತಿ ನದಿ ಎಲ್ಲಿತ್ತು?: ಋಗ್ವೇದ ಸೇರಿ ಹಲವು ಪುರಾಣಗಳಲ್ಲಿ ಸರಸ್ವತಿ ನದಿಯ ಉಲ್ಲೇಖವನ್ನು ಕಾಣಬಹುದು. ಇದು ಸುಮಾರು 5000 ವರ್ಷಗಳ ಹಿಂದೆ ಹವಾಮಾನ ಹಾಗೂ ಟೆಕ್ಟಾನಿಕ್‌ ಪದರಗಳ ಚಲನೆಯಿಂದ ಒಣಗಿಹೋಗಿರಬಹುದು ಎಂಬ ನಂಬಿಕೆಯಿದೆ.

ಸಿಂಗ್‌ ಅವರ ಸ್ಮಾರಕ ನಿರ್ಮಾಣ?: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆದಿದ್ದು, ಅದಕ್ಕಾಗಿ ಯಮುನಾ ನದಿಯ ಸಮೀಪವಿರುವ ಕಿಸಾನ್‌ ಘಾಟ್‌ ಹಾಗೂ ರಾಷ್ಟ್ರೀಯ ಸ್ಮೃತಿ ಸ್ಥಳಗಳನ್ನು ಪರಿಗಣಿಸಲಾಗಿದೆ. ಕಿಸಾನ್‌ ಘಾಟ್‌ ಎಂಬುದು ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರ ಸ್ಮಾರಕ ಇರುವ ಸ್ಥಳವಾಗಿದೆ. ರಾಷ್ಟ್ರೀಯ ಸ್ಮೃತಿ ಸ್ಥಳವು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಸ್ಮಾರಕ ನಿರ್ಮಾಣಕ್ಕೆ ಮೀಸಲಿರುವ ಜಾಗ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 20 ತಾಸು: ಕಾರಣವೇನು?

ಅತ್ತ ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ, ‘ಈಗಾಗಲೇ 4 ರಾಷ್ಟ್ರಪತಿಗಳು ಹಾಗೂ 3 ಪ್ರಧಾನಿಗಳ ಸ್ಮಾರಕಗಳಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಇಬ್ಬರಿಗಷ್ಟೇ ಜಾಗವಿದೆ. ಇನ್ನೂ ಅನೇಕರ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸುವಂತೆ ಕಾಂಗ್ರೆಸ್‌ ಕೋರಿದ್ದು, ಅದನ್ನು ಸ್ವೀಕರಿಸಿದ್ದೇವೆ’ ಎಂದಿದ್ದಾರೆ. ದೇಶದ ಪ್ರಮುಖ ನಾಯಕರ ಸ್ಮಾರಕ ನಿರ್ಮಾಣಕ್ಕೆ ರಾಜ್‌ ಘಾಟ್‌, ಶಾಂತಿ ವನ, ಶಕ್ತಿ ಸ್ಥಳ, ವೀರ ಭೂಮಿ, ಏಕತಾ ಸ್ಥಳ ಸೇರಿದಂತೆ ದೆಹಲಿಯಲ್ಲಿ 245 ಎಕರೆ ಜಾಗವನ್ನು ಮೀಸಲಿಡಲಾಗಿದೆ.

Latest Videos
Follow Us:
Download App:
  • android
  • ios