Zojila Pass ದಾಖಲೆಯ 73 ದಿನದಲ್ಲಿ ಶ್ರೀನಗರ-ಲೇಹ್‌ ಹೈವೇ ಸಂಚಾರಕ್ಕೆ ಮುಕ್ತ!

  • ಕಳೆದ ಜನವರಿಯಿಂದ ರಸ್ತೆಯಲ್ಲಿ ವಾಹನ ಸಂಚಾರ ಬಂದ್
  • ಕೇವಲ 73 ದಿನದಲ್ಲಿ ಕಾಮಗಾರಿ ಪೂರ್ತಿಗೊಳಿಸಿದ ಬಿಆರ್‌ಓ
  • ಜೊಜಿಲಾ ಪಾಸ್‌ನಲ್ಲಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತ
Border Roads Organisation reopened Srinagar Leh Highway in record 73 days ckm

ಶೀನಗರ(ಮಾ.20): ಶ್ರೀನಗರದಿಂದ-ಲೇಹ್‌ ವರೆಗಿನ 434 ಕಿ.ಮೀ ದೂರದ ಅತ್ಯಂತ ಆಯಕಟ್ಟಿನ ರಾಷ್ಟ್ರೀಯ ಹೆದ್ದಾರಿಯು ದಾಖಲೆಯ 73 ದಿನಗಳ ನಂತರ ಶನಿವಾರದಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಈ ಮುನ್ನ ಮುಕ್ತಗೊಳ್ಳಲು 110 ದಿನ ಬೇಕಾಗುತ್ತಿತ್ತು.

ತೀವ್ರ ಹಿಮಪಾತದ ಕಾರಣ ಕಳೆದ ಜನವರಿಯಿಂದ ರಸ್ತೆಯಲ್ಲಿ ವಾಹನ ಸಂಚಾರನ್ನು ನಿಲ್ಲಿಸಲಾಗಿತ್ತು. ನಾಗರಿಕ ಆಡಳಿತದ ಜಂಟಿ ಪರಿಶೀಲನೆ ನಂತರ ಪ್ರಾಯೋಗಿಕವಾಗಿ ವಾಹನ ಸಂಚಾರ ಕೈಗೊಂಡು ಬಳಿಕ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಆರ್‌ಒ ಲೆಫ್ಟಿನೆಂಟ್‌ ಜ ರಾಜೀವ್‌ ಚೌಧರಿ ಅವರು ಸಮುದ್ರಮಟ್ಟದಿಂದ 11,650 ಅಡಿ ಎತ್ತರದಲ್ಲಿರುವ ಜೊಜಿಲಾ ಪಾಸ್‌ನಲ್ಲಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಜೊಜಿಲಾ ಕಾಶ್ಮೀರ ಕಣಿವೆ ಮತ್ತು ಲಡಾಖ್‌ ನಡುವೆ ಸಂಪರ್ಕ ಒದಗಿಸುವ ಅತ್ಯಂತ ಆಯಕಟ್ಟಿನ ಜಾಗವಾಗಿದೆ. ಇದು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಗೆ ಪ್ರದೇಶವಾಗಿದೆ. ಭಾರೀ ಹಿಮಪಾತದಿಂದಾಗಿ ಈ ರಸ್ತೆಯು ಸುಮಾರು ಆರು ತಿಂಗಳವರೆಗೆ ಮುಚ್ಚಿರುತ್ತದೆ. ಆದರೆ ಈ ವರ್ಷ ದಾಖಲೆ ಸಮಯದಲ್ಲಿ ಹಿಮದಿಂದ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.

 

 

ಉತ್ತರಖಂಡ ಹಿಮಸ್ಫೋಟ; ಕೊಚ್ಚಿ ಹೋದ ಸೇತವೆಯನ್ನು 8 ದಿನದಲ್ಲಿ ನಿರ್ಮಿಸಿದ ಸೇನೆ!

ಭೂಸೇನಾ ಯೋಧರ ಮೋಟಾರ್‌ ಸೈಕಲ್‌ ರಾರ‍ಯಲಿಗೆ ಚಾಲನೆ
ಭಾರತೀಯ ಭೂ ಸೇನೆಯ ಬಾರ್ಡರ್‌ ರೋಡ್‌ ಆರ್ಗನೈಜೇಶನ್‌ ( ಬಿಆರ್‌ಒ) ಸಂಸ್ಥೆ ಹಮ್ಮಿಕೊಂಡಿರುವ ‘ಇಂಡಿಯಾ ಃ 75 ಬಿಆರ್‌ಒ ಮೋಟಾರ್‌ ಸೈಕಲ್‌ ಎಕ್ಸೆ$್ಪಡಿಷನ್‌ 2021 ಮೋಟರ್‌ ಬೈಕ್‌ ರಾರ‍ಯಲಿ’ ಶನಿವಾರ ಸಂಜೆ ತಲಪಾಡಿ ಮೂಲಕ ಮಂಗಳೂರು ಪ್ರವೇಶಿಸಲಿದೆ. ಭಾನುವಾರ ಬೆಳಗ್ಗೆ ಮುಂದಿನ ಪ್ರಯಾಣಕ್ಕೆ ಮಂಗಳೂರಿನಲ್ಲಿ ಹಸಿರು ನಿಶಾನೆ ದೊರೆಯಲಿದೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ, ಜನ ಜಾಗೃತಿಯೊಂದಿಗೆ ದೇಶ ಭಕ್ತಿ ಮತ್ತು ರಾಷ್ಟ್ರ ಪ್ರೇಮ ಉದ್ದೀಪನಗೊಳಿಸಲು ಈ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತ-ಚೀನಾ ಬಾರ್ಡರ್ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತ ದಿಟ್ಟ ಮಹಿಳಾ ಅಧಿಕಾರಿ

ದೆಹಲಿ-ಜೈಪುರ ಎಲೆಕ್ಟ್ರಿಕ್‌ ಹೆದ್ದಾರಿ ನನ್ನ ಕನಸು :ಗಡ್ಕರಿ
ದೆಹಲಿ ಮತ್ತು ಜೈಪುರದಲ್ಲಿ ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್‌ ಹೆದ್ದಾರಿ ನಿರ್ಮಾಣ ಮಾಡುವುದು ನನ್ನ ಕನಸು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ  ಹೇಳಿದ್ದಾರೆ. ವಿದ್ಯುತ್‌ ಹೆದ್ದಾರಿ ಎಂದರೆ ವಿದ್ಯುತ್‌ ಚಾಲಿತ ವಾಹನಗಳು ಸಂಚರಿಸುತ್ತಲೇ ಚಾಜ್‌ರ್‍ ಆಗುವ ವ್ಯವಸ್ಥೆ ಇರುವ ರಸ್ತೆ. ಅಂಥ ಚಾರ್ಜಿಂಗ್‌ ಸಾಧನಗಳನ್ನು ರಸ್ತೆಯಲ್ಲೇ ಅಳವಡಿಸಿರಲಾಗುತ್ತದೆ. ಸ್ವೀಡನ್‌ನಲ್ಲಿ ಇಂಥ ರಸ್ತೆಗಳು ಈಗಾಗಲೇ ಇವೆ. ಅದನ್ನೇ ಮಾದರಿಯಾಗಿ ಇರಿಸಿಕೊಂಡು ಅಲ್ಲಿನ ಕಂಪನಿಗಳಿಂದ ಸಲಹೆ ಪಡೆದುಕೊಂಡು ಇಂಥ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಕಳೆದ ವರ್ಷ ಗಡ್ಕರಿ ಹೇಳಿದ್ದರು. ಮಂಗಳವಾರವೂ ತಮ್ಮ ಮಾತನ್ನು ಅವರು ಪುನರುಚ್ಚರಿಸಿದ್ದಾರೆ. ಈ ನಡುವೆ, ‘ಸಚಿವಾಲಯದ ಬಜೆಟ್‌ ಉತ್ತಮವಾಗಿದೆ. ಮಾರುಕಟ್ಟೆಸಹ ಅದಕ್ಕೆ ಪೂರಕವಾಗಿದೆ’ ಎಂದೂ ಅವರು ಹೇಳಿದರು. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರು. ಅನುದಾನ ಮೀಸಲಿಡಲಾಗಿದೆ.

024ರಲ್ಲಿ ರಾಜ್ಯದಲ್ಲಿ ಅಮೆರಿಕ ಮಾದರಿ ರಸ್ತೆ: ಗಡ್ಕರಿ
ಭಾರತದ ರಸ್ತೆಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಗುರಿ ಹೊಂದಿದ್ದು 2024ರೊಳಗೆ ಕರ್ನಾಟಕದ ಎಲ್ಲ ರಸ್ತೆಗಳ ಗುಣಮಟ್ಟವನ್ನು ಅಮೆರಿಕ ಮಾದರಿಗೆ ಎತ್ತರಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಘೋಷಿಸಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರುಗಳಲ್ಲಿ ಸೋಮವಾರ ಒಂದೇ ದಿನದಲ್ಲಿ ನಡೆದ ಪ್ರತ್ಯೇಕ ಸಮಾರಂಭಗಳಲ್ಲಿ ಅವರು ಒಟ್ಟಾರೆ ರಾಜ್ಯದ ವಿವಿಧೆಡೆ ನಡೆಯಲಿರುವ .19,930 ಕೋಟಿ ವೆಚ್ಚದ 46 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.2024ರ ಅಂತ್ಯದೊಳಗೆ ಕರ್ನಾಟಕದ ರಸ್ತೆಗಳನ್ನು ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆ ಪೂರಕವೆಂಬಂತೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ ಅವರು, ಅರಣ್ಯ ಹಾಗೂ ಪರಿಸರ ಇಲಾಖೆಗಳ ಕ್ಲಿಯರೆನ್ಸ್‌ ಪಡೆಯುವ ಕಾರ್ಯಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ನುಡಿದರು.

Latest Videos
Follow Us:
Download App:
  • android
  • ios