Asianet Suvarna News Asianet Suvarna News

ಶ್ರೀಶೈಲಂ ದೇವಸ್ಥಾನ ಪ್ರಸಾದದಲ್ಲಿ ಮೂಳೆ ಪತ್ತೆ, ಆಂಧ್ರ ಸರ್ಕಾರದ ವಿರುದ್ಧ ಭಕ್ತರು ಗರಂ!

ಆಂಧ್ರ ಪ್ರದೇಶ ಸರ್ಕಾರ ಹಿಂದೂ ದೇಗುಲಗಳ ನಿರ್ವಹಣೆಯಲ್ಲಿ ಅಸಡ್ಡೆ ತೋರುತ್ತಿದೆ ಅನ್ನೋ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಿದೆ. ಇದೀಗ ಶ್ರೀಶೈಲಂ ದೇವಸ್ಥಾನ ಅಧಿಕಾರಿ ಹಾಗೂ ಆಂಧ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಾರಣ ಪವಿತ್ರ ಶ್ರೀಶೈಲಂ ಪ್ರಸಾದಲ್ಲಿ ಮೂಳೆಯೊಂದು ಪತ್ತೆಯಾಗಿದೆ.
 

Bone pieces found in Srisailam Mallikarjuna Temple Prasadam devotee lodge complaint against Administration ckm
Author
First Published Feb 11, 2024, 5:35 PM IST

ಶ್ರೀಶೈಲಂ(ಫೆ.11) ಶ್ರೀ ಬ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಅಥವಾ ಶ್ರೀಶೈಲಂ ದೇವಸ್ಥಾನ ದಕ್ಷಿಣದ ಕಾಶಿ ಎಂದೇ ಗುರುತಿಸಿಕೊಂಡಿದೆ. ಜನಪ್ರಿಯ ತೀರ್ಥ ಕ್ಷೇತ್ರಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಭೇಟಿ ನೀಡಿ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಾರೆ.  ದೇಶದ 12 ಜ್ಯೋತೀರ್ಲಿಂಗಗಳ ಬೈಕಿ ಶ್ರೀಶೈಲಂ ಕೂಡ ಒಂದು. ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ ಇದಾಗಿದೆ. ಆದರೆ ಈ ದೇವಸ್ಥಾನದ ಪ್ರಸಾದದಲ್ಲಿ ಚಿಕನ್ ಮೂಳೆಯೊಂದು ಪತ್ತೆಯಾಗಿದೆ. ಹೈದರಾಬಾದ್‌ನಿಂದ ದೇವರ ದರ್ಶನಕ್ಕೆ ತೆರಳಿದ ಹರೀಶ್ ರೆಡ್ಡಿ ಪಡೆದ ಪ್ರಸಾದದಲ್ಲಿ ಚಿಕನ್ ಮೂಳೆ ಪತ್ತೆಯಾಗಿದೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಹಿಂದೂ ದೇವಸ್ಥಾನದ ಪಾವಿತ್ರ್ಯತೆ ಉಳಿಸುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿ ವಿರುದ್ದ ಆಕ್ರೋಶ ಹೆಚ್ಚಾಗಿದೆ.

ಶ್ರೀಶೈಲಂಗೆ ಭೇಟಿ ನೀಡಿ ಮಲ್ಲಿಕಾರ್ಜುನನ ದರ್ಶನ ಪಡೆದ ಹರೀಶ್ ರೆಡ್ಡಿ, ಪ್ರಸಾದ ಸ್ವೀಕರಿಸಿದ್ದಾರೆ. ಆದರೆ ಪ್ರಸಾದವನ್ನು ಸೇವಿಸುವ ವೇಳೆ ಮೂಳೆ ಪತ್ತೆಯಾಗಿದೆ. ಎರಡು ಸಣ್ಣ ಮೂಳೆಗಳು ಪ್ರಸಾದಲ್ಲಿ ಸಿಕ್ಕವೆ. ಇದು ಹರೀಶ್ ರೆಡ್ಡಿ ಹಾಗೂ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಲಿಖಿತ ದೂರು ನೀಡಿದ್ದಾರೆ. ಇಷ್ಟೇ ಅಲ್ಲ ಹಿಂದೂ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಆಗ್ರಹಿಸಿದ್ದಾರೆ.

ಸೋಮೇಶ್ವರ ದೇವಾಲಯ ಶಿವಲಿಂಗದ ಮೇಲೆ ವಿಕೃತಿ ಮೆರೆದ ಕಿಡಿಗೇಡಿಗಳು; ಕರಾವಳಿಯಲ್ಲಿ ಕೋಮುಗಲಭೆ ಸಂಶಯ

ದೂರು ಸ್ವೀಕರಿಸಿರುವ ದೇವಸ್ಥಾನ ಆಡಳಿತ ಮಂಡಳಿ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ. ಆದರೆ ಶ್ರೀಶೈಲಂ ಭಕ್ತರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ದೇವಸ್ಥಾನದ ಪದ್ಧತೆ, ಆಚರಣೆ, ಪೂಜೆ, ಪ್ರಸಾದ ಸೇರಿದಂತೆ ಇತರ ಕೆಲ ವಿಚಾರಗಳಲ್ಲಿ ತಪ್ಪನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ಕೋಟಿ ಕೋಟಿ ಆದಾಯದ ಮೇಲೆ ಮಾತ್ರ ಕಣ್ಣಿಟ್ಟಿದೆ. ಆದರೆ ಪೂಜಾ ಸ್ಥಳ, ತೀರ್ಥ ಕ್ಷೇತ್ರದ ಪಾವಿತ್ರ್ಯತೆ ಕುರಿತು ನಿರ್ಲಕ್ಷ್ಯವಹಿಸಿದೆ ಅನ್ನೋ ಆರೋಪ ಕೇಳಿಬಂದಿದೆ.

ಆಂಧ್ರ ಪ್ರದೇಶದ ಹಿಂದೂ ದೇವಸ್ಥಾನಗಳ ಪ್ರಸಾದ ಸೇರಿದಂತೆ ಇತರ  ಬಹುತೇಕ ಕೆಲಸಗಳ ಟೆಂಡರ್‌ಗಳನ್ನು ಹಿಂದುಯೇತರರಿಗೆ ನೀಡಲಾಗುತ್ತಿದೆ. ಹಿಂದೂಯೇತರಿಗೆ ಹಿಂದೂಗಳ ಶ್ರದ್ಧಾ ಕೇಂದ್ರದ ಪಾವಿತ್ರ್ಯತೆ ಉಳಿಸಲು ಸಾಧ್ಯವಿಲ್ಲ. ಟೆಂಡರ್ ಪಡೆಯುವರು ವಹಿವಾಟಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿರುತ್ತಾರೆ. ಹೀಗಾಗಿ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ಜ್ಞಾನವ್ಯಾಪಿ ಪ್ರಕರಣ ಮಾದರಿಯಲ್ಲೇ ಮಂಗಳೂರಲ್ಲೂ ಮಸೀದಿ ವಿವಾದ: ಹಿಂದೂ ಮಂದಿರದ ಕುರುಹು ಪತ್ತೆ!

ಈ ಘಟನೆ ಬೆನ್ನಲ್ಲೇ ಹಿಂದೂಗಳ ತೀರ್ಥ ಕ್ಷೇತ್ರದಲ್ಲಿನ ಪಾವಿತ್ರ್ಯತೆ ಉಳಿಸಲು ಆಂಧ್ರ ಪ್ರದೇಶದಲ್ಲಿ ಇದೀಗ ಅಭಿಯಾನ ಆರಂಭಗೊಂಡಿದೆ. ಸರ್ಕಾರ ಆದಾಯಕ್ಕಿಂತ ಧಾರ್ಮಿಕ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ದೇವಸ್ಥಾನ ಆಡಳಿತ ಮಂಡಳಿಗಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು. ಒಂದು ದೇವಸ್ಥಾನ, ಧರ್ಮದ ಬಗ್ಗೆ ಶ್ರದ್ಧೆ, ಭಕ್ತಿ ಇಲ್ಲದವರು ಆಡಳಿತ ಮಂಡಳಿಯಲ್ಲಿದ್ದರೆ ಇದಕ್ಕಿಂತ ಹೆಚ್ಚೇನು ನಿರೀಕ್ಷಿಸಲು ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

Follow Us:
Download App:
  • android
  • ios