Asianet Suvarna News Asianet Suvarna News

ಸೋಮೇಶ್ವರ ದೇವಾಲಯ ಶಿವಲಿಂಗದ ಮೇಲೆ ವಿಕೃತಿ ಮೆರೆದ ಕಿಡಿಗೇಡಿಗಳು; ಕರಾವಳಿಯಲ್ಲಿ ಕೋಮುಗಲಭೆ ಸಂಶಯ

ಲೋಕಸಭಾ ಚುನಾವಣೆಗೂ ಮುನ್ನ ಕರಾವಳಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲೆಂದೇ ಕೆಲವು ಕಿಡಿಗೇಡಿಗಳು ಸೋಮೇಶ್ವರ ದೇವಾಲಯಕ್ಕೆ ನುಗ್ಗಿ ಶಿವಲಿಂಗದ ಮೇಲೆ ಬರೆದು ವಿರೂಪಗೊಳಿಸಿದ್ದಾರೆ. 

Coastal Miscreants defaced Someshwara Temple Shivlinga Suspected communal riots in karwar sat
Author
First Published Feb 4, 2024, 7:54 PM IST

ಉತ್ತರ ಕನ್ನಡ (ಫೆ.04): ಲೋಕಸಭಾ ಚುನಾವಣೆಗೂ ಮುನ್ನ ಕರಾವಳಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲೆಂದೇ ಕೆಲವು ಕಿಡಿಗೇಡಿಗಳು ಸೋಮೇಶ್ವರ ದೇವಾಲಯಕ್ಕೆ ನುಗ್ಗಿ ಶಿವಲಿಂಗದ ಮೇಲೆ ಬರೆದು ವಿರೂಪಗೊಳಿಸಿದ್ದಾರೆ. 

ರಾಜ್ಯದ ಕರಾವಳಿ ತೀರದಲ್ಲಿ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಆಗಿಂದಾಗ್ಗೆ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ನೈತಿಕ ಪೊಲೀಸ್‌ಗಿರಿ ಕೂಡ ಹೆಚ್ಚಾಗಿ ನಡೆಯತ್ತದೆ. ಹೀಗಿರುವಾಗ ಕೆಲವು ಕಿಡಿಗೇಡಿಗಳು ಈಶ್ವರ ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಮೇಲೆ ಚಾಕ್‌ಪೀಸ್‌ನಿಂದ ಬರೆದು ವಿಕೃತಿ ಮೆರೆದಿದ್ದಾರೆ. ಶಿವಲಿಂಗದ ಮೇಲೆ ಬಳಪದಿಂದ ಕಿಡಿಗೇಡಿಗಳು ಇಂಗ್ಲೀಷ್ ಅಕ್ಷರ ಬರೆದು ವಿಕೃತಿ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನರಬೈಲ್ ನಲ್ಲಿ ನಡೆದಿದೆ. ನರಬೈಲ್ ಗ್ರಾಮದ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಕಿಡಿಗೇಡಿಗಳು ಬರೆದಿದ್ದಾರೆ. ಶಿವಲಿಂಗದ ಮೇಲೆ ಜೆ.ಇ.ಇ, ಐಐಟಿ, ಮ್ಯಾಥ್ಸ್‌ 2024 ಹಾಗೂ 2026 ಎಂದು ಇಂಗ್ಲೀಷ್‌ನಲ್ಲಿ ಬರೆದಿದ್ದಾರೆ. ಬೆಳಗ್ಗೆ ಪೂಜೆಗೆ ಬಂದ ಪುರೋಹಿತರಿಂದ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ.

ಟೊಪ್ಪಿಗೆ, ಪೇಟವಿಲ್ಲದ ಸದ್ಗುರು ವಾಸುದೇವ್ ನೋಡಿದ್ದೀರಾ? ಇಲ್ಲಿವೆ ನೋಡಿ ಸರಳತೆಯ ಫೊಟೋಗಳು

ಸೋಮೇಶ್ವರ ದೇವಾಲಯದ ಗರ್ಭಗುಡಿಯ ಬಾಗಿಲು ದೂಡಿ, ಗರ್ಭಗುಡಿಯೊಳಗೆ ಪ್ರವೇಶ ಮಾಡಿದ್ದೂ ಅಲ್ಲದೇ ಚಾಕ್ ಪೀಸ್ ನಿಂದ ಬರೆದು ಶಿವಲಿಂಗ ಮೂರ್ತಿಯನ್ನು ಅಶುದ್ಧಗೊಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಕಿಡಿಗೇಡಿಗಳ ಕೃತ್ಯವು ಪೊಲೀಸರಿಗೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಜೆ.ಇ.ಇ, ಐಐಟಿ, ಮ್ಯಾಥ್ಸ್ 2024, 2026 ಬರಹವನ್ನು ಕೋಮು ಗಲಭೆ ಸೃಷ್ಟಿಸಲೆಂದೇ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬಾಬರಿ ಮಸೀದಿಯನ್ನ ಮರೆಯೊಲ್ಲ, ಎಷ್ಟೇ ಸಮಯವಾದರೂ ಅದೇ ಜಾಗದಲ್ಲಿ ಮಸೀದಿ ಕಟ್ತೇವೆಂದ ಸೈಯದ್

ಕರಾವಳಿ ಶಾಂತಿಯನ್ನು ಕದಡುವ ಉದ್ದೇಶದಿಂದ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ವೇಓಳೆ ಬಕೋಮುಗಲಭೆ ಸೃಷ್ಠಿಸಲು ದುಷ್ಕೃತ್ಯವನ್ನು ಮಾಡಲಾಗಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿನ್ನೆಯಲ್ಲಿ ಕಿಡಿಗೇಡಿಗಳು ಕೋಮು ಗಲಭೆ ಸೃಷ್ಟಿಸಲು ಈ ರೀತಿ ಮಾಡಿದ್ದಾರೆಯೇ ಎಂಬ ಸಂಶಯದಿಂದಲೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ಯಾವುದಾದರೂ ವಿದ್ಯಾರ್ಥಿಗಳು ಐಐಟಿ, ಜೆಇಇ ಉತ್ತೀರ್ಣರಾಗಲು ಹರಕೆ ಮಾಡಿಕೊಂಡು ಈ ರೀತಿ ಬರೆದಿದ್ದಾರೆಯೇ ಎಂಬ ಅನುಮಾನಗಳೂ ಕೂಡ ಕಂಡುಬರುತ್ತಿವೆ. ಎಲ್ಲ ಅನುಮಾನಗಳಿಗೂ ಪೊಲೀಸರ ತನಿಖೆಯ ನಂತರವೇ ಸ್ಪಷ್ಟ ಉತ್ತರ ಸಿಗಲಿದೆ.

Follow Us:
Download App:
  • android
  • ios