ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ
- ಸಂತ್ರಸ್ತೆಯ 25 ವಾರಗಳ ಭ್ರೂಣದ ನಾಶಕ್ಕೆ ಹೈಕೋರ್ಟ್ ಅನುಮತಿ
- ವೈದ್ಯಕೀಯ ವರದಿಯ ಬಳಿಕ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಮುಂಬೈ(ಫೆ.5): ವಿಶೇಷ ಪ್ರಕರಣವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯೊಬ್ಬರಿಗೆ ಬಾಂಬೆ ಹೈಕೋರ್ಟ್ ಗರ್ಭಪಾತ ಮಾಡಿಸಲು ಅನುಮತಿ ನೀಡಿದೆ. ಬಾಲಕಿ ಅವಿವಾಹಿತಳಾಗಿರುವುದರಿಂದ ಗರ್ಭ ಧರಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಾಲಕಿಗೆ ತೊಂದರೆಯಾಗುತ್ತದೆ ಎಂಬ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಗಮನದಲ್ಲಿರಿಸಿ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.
ಬಾಂಬೆ ಹೈಕೋರ್ಟ್‌ನ ನಾಗ್ಪುರ (Nagpur) ಪೀಠವು ಶುಕ್ರವಾರ ಅತ್ಯಾಚಾರ ಸಂತ್ರಸ್ತ ಮಹಿಳೆಗೆ ತನ್ನ 25 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಅನುಮತಿ ನೀಡಿತು. ಅತ್ಯಾಚಾರದಿಂದಾದ ಗರ್ಭಧಾರಣೆಯಿಂದಾಗಿ ಬಾಲಕಿಯ ಮಾನಸಿಕ ಆರೋಗ್ಯಕ್ಕೆ ದುಃಖ ಮತ್ತು ಗಂಭೀರ ಆಘಾತವನ್ನು ಉಂಟುಮಾಡುತ್ತದೆ ಎಂಬುದನ್ನು ಗಮನದಲ್ಲಿರಿಸಿ ಈ ಅನುಮತಿ ನೀಡಲಾಗಿದೆ.
ಬಾಲಕಿಯಯ ಗರ್ಭಾವಸ್ಥೆಯ ಅವಧಿಯು ಗರ್ಭಾವಸ್ಥೆಯ ಮಧ್ಯಂತರದಲ್ಲಿ ಗರ್ಭವನ್ನು ಅಂತ್ಯಗೊಳಿಸಲು ಇರಬಹುದಾದ ಅವಧಿಯು ಮುಗಿದಿರುವುದರಿಂದ ಗರ್ಭಿಣಿ ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಪಾಯವನ್ನು ನಿರ್ಣಯಿಸಲು ನೋಂದಾಯಿತ ವೈದ್ಯಕೀಯ ತಂಡದ ಅಭಿಪ್ರಾಯವನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿದೆ.
ಮ್ಯಾಟ್ರಿಮೋನಿ ಪರಿಚಯ-ದೈಹಿಕ ಸಂಪರ್ಕ : ಹೈಕೋರ್ಟ್‌ನಲ್ಲೊಂದು ಮಹತ್ವದ ತೀರ್ಪು
ನ್ಯಾಯಮೂರ್ತಿಗಳಾದ ಎಸ್‌ಬಿ ಶುಕ್ರೆ (SB Shukre) ಮತ್ತು ಎಎಲ್ ಪನ್ಸಾರೆ (AL Pansare) ಅವರ ಪೀಠವು ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ತನ್ನ ನಿರ್ಧಾರವನ್ನು ಕೈಗೊಂಡಿದೆ., ಹೆಣ್ಣು ಅವಿವಾಹಿತಳಾಗಿರುವುದರಿಂದ, ಗರ್ಭಾವಸ್ಥೆಯು ಹುಡುಗಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿ ಮಾಡುತ್ತದೆ ಹೀಗಾಗಿ ಆಕೆ ಮಗುವಿಗೆ ಜನ್ಮ ನೀಡಿದರೆ ಮಗುವಿಗೂ ಆಕೆಗೂ ಸರಿಯಾದ ಆರೈಕೆ ಸಿಗುವುದಿಲ್ಲ ಎಂದು ವೈದ್ಯಕೀಯ ತಂಡ ವರದಿ ನೀಡಿತ್ತು. ಬಾಲಕಿಯ ಪರ ವಾದ ಮಂಡಿಸಿದ ವಕೀಲ (Advocate) ಎಸ್‌ಎಚ್ ಭಾಟಿಯಾ (SH Bhatia), ಸಂತ್ರಸ್ತೆ ಅನೇಕ ಅತ್ಯಾಚಾರ ಕೃತ್ಯಗಳಿಗೆ ಬಲಿಯಾಗಿದ್ದರು ಇದರ ಪರಿಣಾಮವಾಗಿ ಆಕೆಯ ಗರ್ಭದ ಅವಧಿಯು 25 ರಿಂದ 26 ವಾರಗಳನ್ನು ತಲುಪಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ ಮತ್ತು ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎನ್) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದರು. ಗರ್ಭಾವಸ್ಥೆಯಲ್ಲಿ ಮುಂದುವರಿಯುವುರಿಂದ ಇದು ಆಕೆಗೆ ನಿರಂತರ ದುಃಖವನ್ನು ಉಂಟು ಮಾಡುತ್ತದೆ ಮತ್ತು ಅವಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಗರ್ಭಾವಸ್ಥೆಯು ಮಗುವಿನ ಜನನಕ್ಕೆ ಕಾರಣವಾದರೆ, ಅದು ಆಕೆ ಈಗಾಗಲೇ ಅನುಭವಿಸಿದ ಮಾನಸಿಕ ದುಃಖವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ವಕೀಲರು ವಾದಿಸಿದರು.
ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿಣಿ!
ಸಂತ್ರಸ್ತೆ ಪರ ವಕೀಲರ ವಾದ ಮಂಡನೆ ಬಳಿಕ ಎಂಟಿಪಿ ಕಾಯ್ದೆಯಡಿ ಕ್ರಮ ಅನುಸರಿಸಿರುವುದರಿಂದ ಅರ್ಜಿಗೆ ಅನುಮತಿ ನೀಡಬಹುದು ಎಂದು ಹೆಚ್ಚುವರಿ ಸರ್ಕಾರಿ ಪರ ವಕೀಲ ಎನ್.ಎಸ್.ರಾವ್ (NS Rao) ಇದೇ ವೇಳೆ ತಿಳಿಸಿದರು. ಅದರಂತೆ ಅರ್ಜಿಗೆ ಅನುಮತಿ ನೀಡಲಾಗಿದೆ. ಆದಾಗ್ಯೂ, ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ಮೊದಲು, ಹುಡುಗಿಯ ಲಿಖಿತ ಒಪ್ಪಿಗೆಯನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ನಿರ್ದೇಶಿಸಿತು. ಗರ್ಭಪಾತ ಮಾಡುವ ವೇಳೆ ಸ್ಥಳದಲ್ಲಿ ಹಾಜರಿರಲು ಮತ್ತು ಡಿಎನ್‌ಎ ಪರೀಕ್ಷೆ ಮತ್ತು ಪ್ರೊಫೈಲಿಂಗ್‌ಗಾಗಿ ಸೂಕ್ತ ಮಾದರಿಗಳನ್ನು ತೆಗೆದುಕೊಳ್ಳಲು ತನಿಖಾಧಿಕಾರಿಗೆ ಅನುಮತಿ ನೀಡಲಾಗಿದೆ.

