ತಗ್ಗದ ಹುಸಿ ಬಾಂಬ್‌ ಹಾವಳಿ: ಮತ್ತೆ 24 ವಿಮಾನಕ್ಕೆ ಬೆದರಿಕೆ

ವಿಮಾನಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 24 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ. 
 

Bomb threats continue to disrupt Indian airlines 24 flights affected gvd

ನವದೆಹಲಿ (ಅ.21): ವಿಮಾನಗಳಿಗೆ ಬಾಂಬ್‌ ಸ್ಫೋಟದ ಬೆದರಿಕೆ ಹಾಕುವ ಘಟನೆಗಳು ಭಾನುವಾರವೂ ಮುಂದುವರೆದಿದ್ದು, 24 ವಿಮಾನಗಳಿಗೆ ಇಂಥ ಸಂದೇಶ ರವಾನಿಸಲಾಗಿದೆ. ಶಿಷ್ಟಾಚಾರದ ಅನ್ವಯ ಎಲ್ಲಾ ವಿಮಾನಗಳನ್ನೂ ನಿಲ್ದಾಣಗಳಲ್ಲಿ ಇಳಿದ ಬಳಿಕ ಪ್ರತ್ಯೇಕ ಸ್ಥಳದಲ್ಲಿ ಇರಿಸಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಎಲ್ಲವೂ ಹುಸಿ ಬೆದರಿಕೆ ಕರೆ ಎಂದು ಖಚಿತಪಟ್ಟಿದೆ. 

ಇದೇ ವೇಳೆ, ಕರ್ನಾಟಕದ ಬೆಳಗಾವಿ ವಿಮಾನ ನಿಲ್ದಾಣಕ್ಕೂ ಶನಿವಾರ ಮತ್ತು ಭಾನುವಾರ ಬೆದರಿಕೆ ಇ-ಮೇಲ್‌ ರವಾನಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೂಡ ‘6 ಇಂಡಿಗೋ ವಿಮಾನದಲ್ಲಿ 12 ಬಾಂಬರ್‌ ಇದ್ದಾರೆ’ ಎಂಬ ಬೆದರಿಕೆ ಬಂದಿದೆ. ಇದರೊಂದಿಗೆ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಕಳೆದ 1 ವಾರದಲ್ಲಿ ರವಾನಿಸಲಾದ ಹುಸಿ ಬಾಂಬ್‌ ಸ್ಫೋಟ ಪ್ರಕರಣಗಳ ಸಂಖ್ಯೆ 90 ದಾಟಿದೆ. ಭಾನುವಾರ ಏರ್‌ ಇಂಡಿಯಾ, ಇಂಡಿಗೋ, ಅಕಾಸ, ವಿಸ್ತಾರ ಸಂಸ್ಥೆಯ ವಿಮಾನಗಳಿಗೆ ಬೆದರಿಕೆ ರವಾನಿಸಲಾಗಿದೆ. 

ಈ ವಿಮಾನಗಳು ಜೆಡ್ಡಾ- ಮುಂಬೈ, ದೆಹಲಿ- ಇಸ್ತಾಂಬುಲ್‌, ಕಲ್ಲಿಕೋಟೆ-ದಮ್ಮಮ್‌, ಮುಂಬೈ- ಇಸ್ತಾಂಬುಲ್‌, ಪುಣೆ-ಜೋಧಪುರ, ಗೋವಾ- ಅಹಮದಾಬಾದ್‌, ದೆಹಲಿ- ಫ್ರಾಂಕ್‌ಫರ್ಟ್‌, ಸಿಂಗಾಪುರ-ಮುಂಬೈ, ಬಾಲಿ-ದೆಹಲಿ, ಸಿಂಗಾಪುರ- ದೆಹಲಿ, ಸಿಂಗಾಪುರ-ಪುಣೆ, ಲಖನೌ-ಮುಂಬೈ, ಮುಂಬೈ-ಸಿಂಗಾಪುರ ನಡುವೆ ಸಂಚರಿಸುವ ವಿಮಾನಗಳಾಗಿದ್ದವು. ಕಳೆದೊಂದು ವಾರದಿಂದ ಈ ರೀತಿಯ ಸಂದೇಶಗಳನ್ನು ಜಾಲತಾಣಗಳ ಮೂಲಕ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂದೇಶ ರವಾನಿಸಿದ ಜಾಲತಾಣಗಳ ಖಾತೆಗಳನ್ನು ಕೇಂದ್ರ ಸರ್ಕಾರ, ಅಳಿಸಿ ಹಾಕಿದ್ದರೂ, ಹೊಸ ಹೊಸ ಖಾತೆಗಳಿಂದ ಸಂದೇಶಗಳನ್ನು ರವಾನಿಸಲಾಗುತ್ತಿದೆ.

ದೇಶದಾದ್ಯಂತ ಒಂದೇ ದಿನ 30 ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶ!

ಟ್ವೀಟರ್ ಸಹಾಯ ಕೇಳಿದ ದಿಲ್ಲಿ ಪೊಲೀಸ್‌: ಶನಿವಾರ ರಾತ್ರಿವರೆಗೆ 6 ದಿನದಲ್ಲಿ 70 ಬೆದರಿಕೆಗಳು ಬಂದಿದ್ದವು. ಈ 70ರ ಪೈಕಿ ಟ್ವೀಟರ್‌ ಮೂಲಕ ಬಂದ ಬೆದರಿಕೆಗಳ ಸಂಖ್ಯೆ 46. ಹೀಗಾಗಿ ಈ ಸಂದೇಶವಾಹಕರ ಮೂಲ ಪತ್ತೆ ಮಾಡಿ ಎಂದು ಎಲಾನ್‌ ಮಸ್ಕ್‌ ಮಾಲೀಕತ್ವದ ಟ್ವೀಟರ್‌ಗೆ ದಿಲ್ಲಿ ಪೊಲೀಸರು ಕೋರಿದ್ದಾರೆ ಹಾಗೂ ಅಂಥ ಸಂದೇಶಗಳನ್ನು ಅಳಿಸಿ ಹಾಕುವಂತೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios