Asianet Suvarna News Asianet Suvarna News

ಅರೆಸ್ಟ್ ಆದ ನಟಿಯರ ಪರ ಪಾರುಲ್ ಬ್ಯಾಟಿಂಗ್, ಸರ್ಕಾರ, ಪೊಲೀಸರ ವಿರುದ್ಧ ಬಹಿರಂಗ ಪತ್ರ

ಡ್ರಗ್ಸ್ ವಿಚಾರವಾಗಿ ಮಾತನಾಡಿ ನಿಂದನೆಗೊಳಗಾಗಿದ್ದ ಪಾರುಲ್ ಪತ್ರವೊಂದನ್ನ ಬರೆದಿದ್ದಾರೆ. ಡ್ರಗ್ಸ್ ದಂಧೆ ವಿಚಾರದಲ್ಲಿ ಅರೆಸ್ಟ್ ಆಗಿರೋ ನಟಿಯರ ಪರವಾಗಿ ಪಾರುಲ್ ಬ್ಯಾಟಿಂಗ್ ಮಾಡಿದ್ದಾರೆ.

Actress Parul yadav writes a open letter support actress who arrested under drugs mafia slams govt for targeting women dpl
Author
Bangalore, First Published Sep 21, 2020, 7:08 PM IST

ಸಂಜನಾ ,ರಿಯಾ , ರಾಗಿಣಿ  ಬಂಧನದ ಬಗ್ಗೆ ಪ್ರಶ್ನೆ ಮಾಡಿದ್ದ ಪಾರುಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಡ್ರಗ್ಸ್ ವಿಚಾರವಾಗಿ ಮಾತನಾಡಿ ನಿಂದನೆಗೊಳಗಾಗಿದ್ದ ಪಾರುಲ್ ಪತ್ರವೊಂದನ್ನ ಬರೆದಿದ್ದಾರೆ.

ಪತ್ರದಲ್ಲಿ ಸರ್ಕಾರದ ಪರಿಸ್ಥಿತಿ, ಕೊರೋನಾ ಹಾಗೂ ಆರ್ಥಿಕತೆ ಬಗ್ಗೆ ಬರೆಯಲಾಗಿದೆ. ಡ್ರಗ್ಸ್ ದಂಧೆ ವಿಚಾರದಲ್ಲಿ ಅರೆಸ್ಟ್ ಆಗಿರೋ ನಟಿಯರ ಪರವಾಗಿ ಪಾರುಲ್ ಬ್ಯಾಟಿಂಗ್ ಮಾಡಿದ್ದಾರೆ.

ನಟಿಯರಿಗೆ ಮುಗಿಯದ ಜೈಲುವಾಸ; ಗುರುವಾರದ ಕತೆ ಏನು?

ಪೊಲೀಸರು ರಾಗಿಣಿ, ರಿಯಾ, ಸಂಜನಾ ಅವ್ರ ವೈಯಕ್ತಿಕ ವಿಡಿಯೋ ರಿಲೀಸ್ ಮಾಡ್ತಿದ್ದಾರೆ. ರಾಗಿಣಿ, ರಿಯಾ, ಸಂಜನಾಗೆ ಸಂಬಂಧಿಸಿದ ವಿಡಿಯೋ ರಿಲೀಸ್ ಆಗಿದೆ. ಪೊಲೀಸರೇ ಲೀಕ್‌ ಮಾಡುತ್ತಿರುವುದು ಅಹಸ್ಯದ ಸಂಗತಿ. ಡ್ರಗ್ಸ್ ವಿಚಾರದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಎಂದಿದ್ದಾರೆ.

ದೊಡ್ಡ ರಾಜಕಾರಣಿಗಳು ಮತ್ತು ನಟರ ಹೆಸರು ಆಗಾಗ ಕೇಳಿಬರುತ್ತಿದೆ. ಆದರೆ ಅವರನ್ನು ಬಂಧಿಸಲು ಪೊಲೀಸರು ಯಾವುದೇ ಉತ್ಸಾಹ ತೋರಿಸಿಲ್ಲ. ರಾಜಕೀಯ ಮತ್ತು ಆರ್ಥಿಕವಾಗಿ ನಾವು ಬಲಿಷ್ಠ ಆಗುವುದು ಹೇಗೆ ಎಂಬ ಚರ್ಚೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಹೊರಬಿತ್ತು ಸಂಜನಾ ಕುರಿತ ಮತ್ತೊಂದು ಶಾಕಿಂಗ್ ವಿಷಯ

ಈ ಮೂವರು ನಟಿಯರ ಬಂಧನದ ಹಿಂದೆ ದೊಡ್ಡ ಉದ್ದೇಶ ಇದೆ. ಮಾದಕ ವಸ್ತು ಸೇವನೆ ಎಂಬುದು ಇಡೀ ಸಮಾಜದಲ್ಲಿ ಹರಡಿದೆ. ತಪ್ಪು ಸಾಬೀತು ಆಗುವವರೆಗೂ ಅವರು ನಿರಪರಾಧಿಗಳು ಎಂದಿದ್ದಾರೆ.

ಮಾದಕ ವಸ್ತು ಸೇವನೆ ಎಂಬುದು ಗಂಭೀರ ಸಮಸ್ಯೆ ಅಂತ ನನಗೆ ತಿಳಿದಿದೆ. ಈ ಪಿಡುಗನ್ನು ನಿರ್ಮೂಲನೆ ಮಾಡಲು ಎಲ್ಲ ರೀತಿಯ ಪ್ರಯತ್ನವೂ ನಡೆಯಬೇಕು. ಡ್ರಗ್ಸ್ ಸೇವನೆಯನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಈ ಮೂವರು ಮಹಿಳೆಯರ ಮೇಲೆ ಕೇಂದ್ರೀಕರಿಸುತ್ತಿರುವುದರಲ್ಲಿ ಹೆಚ್ಚು ಅರ್ಥ ಇದೆ ಎಂದು ಅನಿಸುತ್ತಿಲ್ಲ.

ಡ್ರಗ್ಸ್ ಮಾಫಿಯಾ: ಕೂಲ್ ಆಗಿದ್ದ ದಿಗಂತ್ ಈಗ ಫುಲ್ ಟೆನ್ಶನ್

ಸರ್ಕಾರ ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ವಿಫಲ ಆಗಿದೆ. ಆರ್ಥಿಕತೆ ಹಳ್ಳ ಹಿಡಿದಿದೆ. ಅತ್ತ, ಚೀನಾದಿಂದ ಅಪಾಯ ಕೂಡ ಎದುರಾಗಿದೆ. ಈ ವಿಚಾರಗಳ ಮೇಲಿದ್ದ ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರಕ್ಕೆ ಇಂಥದ್ದೇನೋ ಬೇಕಾಗಿತ್ತು ಎಂದೆನಿಸುತ್ತದೆ.

ಚೀನಾದವರು ಮಾಡುತ್ತಿರುವ 'ಒನ್ ಬೆಲ್ಟ್‌ ಒನ್‌ ರೋಡ್‌' ಪ್ರಾಜೆಕ್ಟ್‌ ಬಗ್ಗೆ ನಾನು ಓದುತ್ತಿದ್ದೇನೆ. ಅದು ನಮ್ಮ ದೇಶಕ್ಕೆ ನಿಜವಾಗಿ ಮಾರಕ ಆಗಿದೆ. ನಮ್ಮ ದೇಶದ ಸುತ್ತ ಚೀನಾದ ಸೈನಿಕರು ನಿಯಂತ್ರಣ ಹೊಂದಬಹುದು. ಚೀನಾದಿಂದ ಪಾಕಿಸ್ತಾನ ಸಹಾಯ ಪಡೆಯುತ್ತಿದೆ. ಮುಂದೊಂದು ದಿನ ಪಾಕಿಸ್ತಾನ ಕೂಡ ಚೀನಾದ ವಸಾಹತು ಆಗುವಂತಿದೆ. ಚೀನಾದವರ ಹಣದಿಂದಾಗಿ ಶ್ರೀಲಂಕಾ ಹಂಬಂಟೋಟ ಬಂದರು ನಿರ್ಮಿಸಿದೆ. ಅದನ್ನು ಚೀನಾದವರು 99 ವರ್ಷಗಳ ಕಾಲ ಲೀಸ್‌ಗೆ ಪಡೆದಿದ್ದಾರೆ. ಈ ಬೆಳವಣಿಗೆಗಳೆಲ್ಲ ತೀವ್ರ ಭಯಾನಕವಾಗಿವೆ. ರಾಜಕೀಯ ಮತ್ತು ಆರ್ಥಿಕವಾಗಿ ನಾವು ಬಲಿಷ್ಠ ಆಗುವುದು ಹೇಗೆ ಎಂಬ ಬಗ್ಗೆ ದೇಶದಲ್ಲಿ ಯಾಕೆ ಚರ್ಚೆ ಆಗುತ್ತಿಲ್ಲ..?

 

ಈ ಡ್ರಗ್ಸ್‌ ಪ್ರಕರಣವನ್ನು ಸೆನ್ಸೇಷನ್‌ ಮಾಡಬೇಕು ಮತ್ತು ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಬೇಕು ಎಂಬ ಉದ್ದೇಶ ಈ ಮೂವರ ಬಂಧನದ ಹಿಂದೆ ಇತ್ತು. ಅದೇ ರೀತಿಯಲ್ಲಿ ತನಿಖೆಯನ್ನು ಪ್ಲ್ಯಾನ್‌ ಮಾಡಲಾಗಿದೆ. ಮಾದಕ ವಸ್ತು ಸೇವನೆ ಎಂಬುದು ಇಡೀ ಸಮಾಜದಲ್ಲಿ ಹರಡಿದೆ. ಯಾವುದೋ ಐಟಿ ಇಂಜಿನಿಯರ್‌ಗಳನ್ನು ಬಂಧಿಸಿದರೆ ಅಷ್ಟು ಸುದ್ದಿ ಆಗುವುದಿಲ್ಲ. ಈ ಮಹಿಳೆಯರಿಗೆ ಅನ್ಯಾಯ ಆಗಿದೆ. ದೊಡ್ಡ ರಾಜಕಾರಣಿಗಳು ಮತ್ತು ನಟರ ಹೆಸರು ಆಗಾಗ ಕೇಳಿಬರುತ್ತಿದ್ದರೂ ಕೂಡ ಅವರನ್ನು ಬಂಧಿಸಲು ಪೊಲೀಸರು ಯಾವುದೇ ಉತ್ಸಾಹ ತೋರಿಸಿಲ್ಲ. ರಾಗಿಣಿ, ರಿಯಾ ಮತ್ತು ಸಂಜನಾಗೆ ಸಂಬಂಧಿಸಿದ ಕೆಲವು ಖಾಸಗಿ ವಿಡಿಯೋ ಮತ್ತು ಮಾಹಿತಿಯನ್ನು ಪೊಲೀಸರು ಲೀಕ್‌ ಮಾಡುತ್ತಿರುವುದು ಅಹಸ್ಯದ ಸಂಗತಿ.

ತಪ್ಪು ಸಾಬೀತು ಆಗುವವರೆಗೂ ಅವರು ನಿರಪರಾಧಿಗಳು. ತನಿಖೆಯ ವಿಡಿಯೋಗಳು ಹರಿದಾಡುತ್ತಿರುವುದನ್ನು ನೋಡಲು ತುಂಬ ನೋವಾಗುತ್ತದೆ. ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ನ್ಯೂಸ್‌ ಚಾನೆಲ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರಾ? ಮಹಿಳಾ ಪೊಲೀಸ್‌ ಒಬ್ಬರು ಮೊಬೈಲ್‌ನಲ್ಲಿ ಸಂಜನಾರನ್ನು ಸೆರೆ ಹಿಡಿಯುತ್ತಿರುವುದು ಒಂದು ವಿಡಿಯೋದಲ್ಲಿ ಗೊತ್ತಾಗುತ್ತಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಸಂಸ್ಥೆ ಆಗಿರಬೇಕು. ಯೆಲ್ಲೋ ಜರ್ನಲಿಸಂ ಮಾಡುವವರಿಗೆ ಮಾಹಿತಿದಾರರಾಗಿ ಪೊಲೀಸರು ಕೆಲಸ ಮಾಡಬಾರದು. ಒಬ್ಬರ ಘನತೆಯನ್ನು ಹಾಳುಮಾಡುವ ಅಧಿಕಾರ ಯಾರಿಗೂ ಇಲ್ಲ. ಇದು ನಾಚಿಕೆಗೇಡು. ಜೈ ಹಿಂದ್‌'

Follow Us:
Download App:
  • android
  • ios