Asianet Suvarna News Asianet Suvarna News

Bollywood KhaasBaath: ಶಾರುಖ್‌ ಖಾನ್‌ ಅಣ್ಣ ಎಂದ ಬ್ಯಾಡ್ ಬಾಯ್ ಸಲ್ಮಾನ್ ಖಾನ್!

ಸ್ಪರ್ಧೆ ತೀವ್ರವಾಗಿರುವ ಸಿನಿಮಾರಂಗದಲ್ಲಿ ಗೆಳೆತನ ಹಾಗೂ ಶತ್ರುತ್ವ ಎರಡೂ ಶಾಶ್ವತವಲ್ಲ, ಒಂದೊಮ್ಮೆ ಗೆಳೆಯರಾಗಿದ್ದವರು, ಕೆಲ ಸಮಯದ ಬಳಿಕ ಪರಸ್ಪರ ಮುಖ ನೋಡಲಾರದಷ್ಟು ದೂರ ಸರಿದು ಬಿಟ್ಟಿರುತ್ತಾರೆ. ಮತ್ತೆ ಕೆಲವರು ಕಿತ್ತಾಡುತ್ತಿದ್ದವರು  ಗೆಳೆಯರೆಂದರೆ ಹೀಗಿರಬೇಕು ಎಂಬಂತೆ ಇರುತ್ತಾರೆ. 

Bollywood actor Salman Khan calls Shah Rukh Khan his brother akb
Author
Mumbai, First Published Nov 29, 2021, 7:19 PM IST
  • Facebook
  • Twitter
  • Whatsapp

ಮುಂಬೈ(ನ.29): ಬಾಲಿವುಡ್‌ ನಟ ಸಲ್ಮಾನ್‌ ಖಾನ್‌(Salman Khan) ಹಾಗೂ ಶಾರೂಕ್‌ ಖಾನ್‌ (Shah Rukh Khan)ಗೆಳೆತನ ಬಾಲಿವುಡ್‌ನಲ್ಲಿಯೇ ಸರಿಸಾಟಿ ಇಲ್ಲದು ಎಂಬ ವಿಚಾರದಲ್ಲಿ ಎರಡು ಮಾತಿಲ್ಲ. ಸದಾ ಒಬ್ಬರ ಮೇಲೊಬ್ಬರು ಸ್ಪರ್ಧೆಯಿಂದಲೇ ನೋಡುವ ಸಿನಿಮಾ ಜಗತ್ತಿನಲ್ಲಿ ಗೆಳೆತನವನ್ನು ಸಮಾಭಾವದಿಂದ ಸದಾಕಾಲ ಕಾಪಾಡುವುದು ಕಷ್ಟದ ವಿಚಾರ ಆದಾಗ್ಯೂ ಈ ನಟರಿಬ್ಬರು ತಮ್ಮ ವೃತ್ತಿಯ ಹೊರತಾಗಿಯೂ ಸ್ನೇಹವನ್ನು ಸುಂದರವಾಗಿ ನಿಭಾಯಿಸಿದ್ದಾರೆ.  ತಮ್ಮ ನಡುವಿನ ಸಣ್ಣ ಸಣ್ಣ ಅಸಮಾಧಾನಗಳ ಹೊರತಾಗಿಯೂ ಇವರಿಬ್ಬರು ತಮ್ಮ ಕಷ್ಟ ಸುಖ ಎರಡರಲ್ಲೂ ಪರಸ್ಪರ ಜೊತೆಯಾಗಿ ನಿಲ್ಲುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. 

ಇತ್ತೀಚೆಗೆ ಮುಂಬೈ(Mumbai)ನ  ಕ್ರೂಸ್‌ ಶಿಪ್‌ ಡ್ರಗ್‌ ಕೇಸ್‌(cruise ship drugs case)ನಲ್ಲಿ ಶಾರೂಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬಂಧನವಾದಾಗ ಶಾರೂಕ್‌ ಖಾನ್‌ ಮನೆ ಮನತ್‌ಗೆ ಮೊದಲು ಧಾವಿಸಿ ಬಂದಿದೆ ಭಾಯಿಜಾನ್‌ ಸಲ್ಮಾನ್ ಖಾನ್‌. ಈಗ ಮತ್ತೊಮ್ಮೆ ಸಲ್ಮಾನ್‌ ಖಾನ್‌ ಮತ್ತು ಒಂದು ಹೆಜ್ಜೆ  ಮುಂದೆ ಹೋಗಿ ತಾನು ಹಾಗೂ ಶಾರೂಕ್‌ ಉತ್ತಮ ಗೆಳೆಯರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 

Bollywood: ಸ್ಟಾರ್‌ಡಮ್‌ನ್ನು ಯುವ ಸ್ಟಾರ್‌ಗಳಿಗೆ ಬಿಟ್ಟುಕೊಡಲ್ಲವೆಂದ ಸಲ್ಮಾನ್‌ ಖಾನ್‌

ಹಿಂದಿ ಚಾನೆಲೊಂದರಲ್ಲಿ ಬರುವ ದಿ ಕಪಿಲ್ ಶರ್ಮಾ ಶೋ(The Kapil Sharma Show)ದ ಪ್ರೊಡ್ಯೂಸರ್‌ ಕೂಡ ಆಗಿರುವ ನಟ ಸಲ್ಮಾನ್‌ ಖಾನ್‌ ಈ ಕಾರ್ಯಕ್ರಮಕ್ಕೆ ತಮ್ಮ  ಸಿನಿಮಾ, ಅಂತಿಮ್ ದ ಫೈನಲ್ ಟ್ರುಥ್‌('Antim: The Final Truth)ನ ಪ್ರಚಾರಕ್ಕೆ ಆಗಮಿಸಿದ್ದರು. ಈ ಸಿನಿಮಾವನ್ನು ಮಂಜ್ರೇಕರ್‌ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್‌ಖಾನ್‌  ಸಿಖ್ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಇವರ ಭಾವ ಅಂದರೆ ತಂಗಿ ಅರ್ಪಿತಾಳ ಗಂಡ ಆಯೂಷ್‌ ಶರ್ಮಾ( Aayush Sharma) ಗ್ಯಾಂಗ್‌ಸ್ಟರ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.  

ಇತ್ತ ಕಪಿಲ್‌ ಶರ್ಮಾ ಶೋಗೆ ಬಂದಿದ್ದ ಸಲ್ಮಾನ್‌ ಅಲ್ಲಿ ವೀಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ನಾನು ನಿಮ್ಮ ದೊಡ್ಡ ಅಭಿಮಾನಿ ಹಾಗೂ ಸ್ವಲ್ಪ ಕಾಲದ ನಟ (small-time actor ಗ್ಯಾಲರಿಯಲ್ಲಿದ್ದ ವೀಕ್ಷಕರೊಬ್ಬರು ಪರಿಚಯಿಸಿಕೊಂಡಿದ್ದಾರೆ. ಈ ವೇಳೆ ಅವರೊಂದಿಗೆ ಮಾತನಾಡಿದ ಸಲ್ಮಾನ್, ಯಾವ ಕೆಲಸವೂ ಕೂಡ ಸಣ್ಣದಲ್ಲ, ಇದು ಶಾರೂಕ್‌ ಖಾನ್‌ ಸಾಹಬ್‌ನ ಡೈಲಾಗೋ ಹೇಗೆ ಎಂದು ಕೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ನನಗೆ ನಿಮ್ಮ ಹೊರತಾಗಿ ಬೇರೆ ಯಾರನ್ನು ಗೊತ್ತಿಲ್ಲ, ನನಗೆ ಗೊತ್ತಿರುವುದು ಒಬ್ಬನೇ ಒಬ್ಬ ಸಹೋದರ, ಆತ ಹಿಂದೂಸ್ತಾನಕ್ಕೂ ಸಹೋದರ ಆತನನ್ನು ಮಾತ್ರ ನನಗೆ ಗೊತ್ತಿರುವುದು ಎಂದು  ಹೇಳಿದರು. 

Fact Check : ಟಿಪ್ಪು ಜೀವನಾಧಾರಿತ ಸಿನಿಮಾಕ್ಕೆ ಶಾರುಕ್‌ ಹೀರೋ ಆಗ್ತಿದ್ದಾರಾ?

ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್‌ ಖಾನ್‌, ಆದರೆ ಆತ ನನ್ನ ಸಹೋದರ ಎಂದು ಶಾರೂಕ್‌ ಬಗ್ಗೆ ಹೇಳಿದರು. ನಿನ್ನ ಸಹೋದರನ ಸಹೋದರ ನಿನಗೆ ಏನಾಗಬೇಕು ಎಂದು ಆ ವೀಕ್ಷಕನ ಬಳಿ ಸಲ್ಮಾನ್‌ ಕೇಳಿದರು. ಈ ವೇಳೆ ವೀಕ್ಷಕ ಗ್ಯಾಲರಿಯಲ್ಲಿದ್ದ ಅಭಿಮಾನಿ ಶಾರೂಕ್ ಕೂಡ ನನಗೆ ಸಹೋದರ ಎಂದು ಹೇಳಿದರು. ಬಳಿಕ ಮಾತನಾಡಿದ ಸಲ್ಮಾನ್‌ ಇದು ಯಾವಾಗಲೂ ಗಮನದಲ್ಲಿರಲಿ ಎಂದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್‌ ಖಾನ್‌ ಬಳಿ ಟೈಗರ್‌ 3 ಸಿನಿಮಾವಿದ್ದು, ಇದರಲ್ಲಿ ಶಾರೂಕ್‌ ಖಾನ್‌, ಅತಿಥಿ ಪಾತ್ರವನ್ನು ಮಾಡಲಿದ್ದಾರೆ. ಇದಲ್ಲದೇ ಕಭಿ ಇದ್‌ ಕಭಿ ದಿವಾಲಿ ಹಾಗೂ ಕಿಕ್‌ 2 ಸಿನಿಮಾ ಸಲ್ಮಾನ್‌ ಕೈಯಲ್ಲಿದೆ.

ಇತ್ತೀಚೆಗೆ ನಟ ಸಲ್ಮಾನ್ ಖಾನ್ ಸ್ಟಾರ್‌ಡಮ್‌ ಬಗ್ಗೆ ಹೇಳಿಕೆ ನೀಡಿದ್ದರು. ಸಿನಿಮಾ ರಂಗದಲ್ಲಿ ಸ್ಟಾರ್‌ಗಿರಿ ಎಂಬುದು ತುಂಬಾ ಮಹತ್ವದ್ದು, ಆದರೆ ಇತ್ತೀಚೆಗೆ ಕೋವಿಡ್‌ನಿಂದಾಗಿ ಸಿನಿಮೋದ್ಯಮ ಸಂಕಷ್ಟದಲ್ಲಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗದೆ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಟಾರ್‌ಗಿರಿ ಎಂಬುದು ಎಷ್ಟು ದಿನದ ಕಿರೀಟ ಎಂಬ ಯೋಚನೆ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ಟಾರ್‌ ನಟ ಸಲ್ಮಾನ್‌ ಖಾನ್‌ . ಸ್ಟಾರ್‌ಗಿರಿ ಎಂಬುದು ಈಗ ನಟರು ಆಯ್ಕೆ ಮಾಡುವ ಸಿನಿಮಾದಲ್ಲಿದೆ. ನಾವು ಹೋಗುತ್ತೇವೆ. ಇನ್ಯಾರೋ ಬರುತ್ತಾರೆ. ಆದರೆ ಸ್ಟಾರ್‌ಗಳ ಯುಗ ಕೊನೆಯಾಗುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು. ಇದು ಯಾವಾಗಲೂ ಇರುವುದು. ಕೇವಲ  ನಟ ನಟಿಯ ಅಭಿನಯ ಪ್ರತಿಭೆಯಿಂದ ಇಂದು ಸ್ಟಾರ್‌ಗಿರಿಯನ್ನು ಪಡೆಯಲಾಗುವುದಿಲ್ಲ. ಹಲವು ವಿಚಾರಗಳನ್ನು ಸ್ಟಾರ್‌ಗಿರಿ ಅವಲಂಬಿತವಾಗಿದೆ. ಸಿನಿಮಾಗಳ ಆಯ್ಕೆ, ಕತೆ, ನಿಜ ಜೀವನದಲ್ಲಿ ನೀವು ಹೇಗಿದ್ದೀರಾ ಎಂಬುದು ಇತ್ಯಾದಿ ಎಲ್ಲವನ್ನೂ ಒಳಗೊಂಡು ಸ್ಟಾರ್‌ಗಿರಿ ಬರುವುದು ಎಂದು ಸಲ್ಮಾನ್‌ ಖಾನ್‌(salman khan) ಅಭಿಪ್ರಾಯ ಪಟ್ಟರು. ಈ ಯುವ ತಲೆಮಾರು ಸೂಪರ್‌ ಆದ ಸ್ಟಾರ್‌ಡಮ್‌ನ್ನು ಹೊಂದಿದ್ದಾರೆ ಎಂದು ಭಾಯಿಜಾನ್‌ ಹೇಳಿದರು.
 

Follow Us:
Download App:
  • android
  • ios