Asianet Suvarna News Asianet Suvarna News

OTT Platformಗಳನ್ನು ತೊರೆದ ನವಾಜುದ್ದೀನ್ ಸಿದ್ದಿಕಿ!

*ಓಟಿಟಿ ಪ್ಲಾಟ್‌ಫಾರ್ಮ್‌ಗಳು ದಂಧೆಯಾಗಿ ಮಾರ್ಪಟ್ಟಿವೆ
*ಹಣದ ಅಬ್ಬರದ ಮುಂದೆ ಗುಣಮಟ್ಟ ಕುಸಿದು ಹೋಗಿದೆ
*OTT ತನ್ನ ತಾಜಾತನವನ್ನು (freshness) ಕಳೆದುಕೊಂಡಿದೆ!
*OTT Platformಗಳನ್ನು ತೊರೆದ ನವಾಜುದ್ದೀನ್ ಸಿದ್ದಿಕಿ

Bollywood actor Nawazuddin Siddiqui quits OTT platforms says it has become dhanda
Author
Bengaluru, First Published Oct 31, 2021, 12:15 PM IST

ಮುಂಬೈ (ಅ. 31 ): ಸೇಕ್ರೆಡ್ ಗೇಮ್ಸ್‌ನಂತಹ (Sacred Games) ವೆಬ್‌ ಸಿರಿಸ್ ಗಳಲ್ಲಿ ತನ್ನ ಅತ್ಯದ್ಭುತ ನಟನೆಯಿಂದ ಮನೆಮಾತಾಗಿದ್ದ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತೊರೆಯುದಾಗಿ ತಿಳಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ  ನಟನೆ, ಸಿನಿಮಾಗಳಲ್ಲಿ ಅವರ ಹಾವಭಾವ, ಅಭಿನಯ, ಉದ್ದ ಡೈಲಾಗ್ಸ್‌ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಇತ್ತೀಚೆಗೆ   ಸಂದರ್ಶನವೊಂದರಲ್ಲಿ OTT Platform  ವಿಷಯದ ಬಗ್ಗೆ ಮಾತನಾಡಿರುವ ನವಾಜುದ್ದೀನ್   OTT ಪ್ಲಾಟ್‌ಫಾರ್ಮ್‌ಗಳು ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ 'ಧಂದಾ' (Business) ಆಗಿ ಮಾರ್ಪಟ್ಟಿವೆ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗ ನಿರಾಸೆ ಮೂಡಿಸಿದ್ದಾರೆ.

OTT Platforms ತಾಜಾತನ ಕಳೆದುಕೊಂಡಿವೆ!

ನೆಟ್‌ಫ್ಲಿಕ್ಸ್‌ನ ಸೀರಿಯಸ್ ಮೆನ್‌ನಲ್ಲಿನ (Serious Men) ಪಾತ್ರಕ್ಕಾಗಿ ಇತ್ತೀಚೆಗೆ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳಲ್ಲಿ (Emmy Awards) ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡ ನವಾಜುದ್ದೀನ್ ಸಿದ್ದಿಕಿ ಅವರು OTT ಪ್ಲಾಟ್‌ಫಾರ್ಮ್‌ಗಳನ್ನು ತೊರೆದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ನಟ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. "OTT Platform ಅನಗತ್ಯ ಕಾರ್ಯಕ್ರಮಗಳನ್ನು ಡಂಪ್ (Dump) ಮಾಡುವ  ಮೈದಾನವಾಗಿದೆ. "ಮೊದಲನೆಯದಾಗಿ ನಾವು ನೋಡಲು ಅರ್ಹವಲ್ಲದ ಚಿತ್ರಗಳನ್ನು ಇಲ್ಲಿ  ಪ್ರಸಾರವಾಗುತ್ತವೆ ಅದು ಬಿಟ್ಟರೆ ಹೆಚ್ಚು ಹೇಳಲು ಏನೂ  ಪ್ರಯೋಜನ ಇಲ್ಲದ ಸಿರೀಸ್‌ (Series) ಇರುತ್ತವೆ.

ಅತಿಯಾದ ಜಿಮ್‌ ವರ್ಕೌಟ್ ಅಪ್ಪುಗೆ ಮುಳುವಾಯಿತಾ?

ತಾವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಏಕೆ ಕೆಲಸ ಮಾಡದಿರಲು ನಿರ್ಧರಿಸಿದರು ಮತ್ತು ನೆಟ್‌ಫ್ಲಿಕ್ಸ್‌ನ ಸೇಕ್ರೆಡ್ ಗೇಮ್ಸ್‌ನಲ್ಲಿ ಅವರು ನಟಿಸಿದ ನಂತರ ಆದ ಬೆಳವಣಿಗೆಗಳ ಬಗ್ಗೆ ನವಾಜುದ್ದೀನ್ ಮಾತನಾಡಿದ್ದಾರೆ. “ನಾನು ನೆಟ್‌ಫ್ಲಿಕ್ಸ್‌ಗಾಗಿ ಸೇಕ್ರೆಡ್ ಗೇಮ್ಸ್ ಮಾಡಿದಾಗ, ಡಿಜಿಟಲ್ ಮಾಧ್ಯಮದ ಸುತ್ತ ಒಂದು ಉತ್ಸಾಹ ಮತ್ತು ಸವಾಲು ಇತ್ತು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಅದರ ತಾಜಾತನ (freshness) ಕಳೆದುಹೋಗಿದೆ, ”ಎಂದು ನವಾಜ್ ಹೇಳಿದರು.‌

ಹಣದ ಅಬ್ಬರದ ಮುಂದೆ ಗುಣಮಟ್ಟ ಕುಸಿತ!

“ಇದು ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟಾರ್ ಎಂದು ಕರೆಯಲ್ಪಡುವ ನಟರಿಗೆ ಧಂದಾ (ಉದ್ಯಮ) ಆಗಿದೆ. ಬಾಲಿವುಡ್‌ನ ಪ್ರಮುಖ ಚಲನಚಿತ್ರ ನಿರ್ಮಾಪಕರು OTT ಕ್ಷೇತ್ರದಲ್ಲಿನ ಎಲ್ಲಾ ದೊಡ್ಡ ಕಂಪನಿಗಳೊಂದಿಗೆ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ . ಇಲ್ಲಿ ಕಂಟೆಂಟ್ ರಚಿಸಲು ನಿರ್ಮಾಪಕರು (Producers) ದೊಡ್ಡ‌ ಮಟ್ಟದ ಮೊತ್ತವನ್ನು ಪಡೆಯುತ್ತಾರೆ. ಹಾಗಾಗಿ ಹಣದ ಅಬ್ಬರದ ಮುಂದೆ ಗುಣಮಟ್ಟ ಕುಸಿದು ಹೋಗಿದೆ" ಎಂದು ಸಿದ್ದಿಕಿ ಹೇಳಿದ್ದಾರೆ.

Content is King ಎಂಬುದನ್ನು ಮರೆತಿದ್ದಾರೆ!

“OTT ಪ್ಲಾಟ್‌ಫಾರ್ಮ್‌ ಗಳಲ್ಲಿರುವ ಶೋಗಳನ್ನು ನಾನೇ ನೋಡುವುದಿಲ್ಲ, ಹಾಗಾಗಿ ನಾನು ಇಂಥಹ ಶೋಗಳಲ್ಲಿ ಹೇಗೆ ನಟಿಸಲಿ? "ಯೇ ಸ್ಟಾರ್ ಸಿಸ್ಟಮ್ ಬಡೇ ಪರ್ದೇ ಕೊ ಖಾ ಗಯಾ (ಈ ಸ್ಟಾರ್ ಸಿಸ್ಟಮ್ ದೊಡ್ಡ ಪರದೆಯನ್ನು ಕೊಂದು ಹಾಕಿತು). ಈಗ ನಾವು OTT ಯಲ್ಲಿ ದೊಡ್ಡ ಮೊತ್ತದ ಹಣವನ್ನು ಕ್ಲೈಮ್ ಮಾಡುವ ಮತ್ತು ಬಾಲಿವುಡ್ ಎ-ಲಿಸ್ಟರ್‌ಗಳಂತೆ ( ಹಿರಿಯ/ಸುಪ್ರಸಿದ್ಧ ಕಲಾವಿದರಂತೆ) ತಮ್ಮನ್ನು ತಾವು ಕರೆದುಕೊಳ್ಳುವ ತಾರೆಯರನ್ನು ಮಾತ್ರ ಹೊಂದಿದ್ದೇವೆ. ಕಂಟೆಂಟ್‌ ಇಸ್‌ ಕಿಂಗ್‌ (Content is King) ಎಂಬುದನ್ನು ಅವರು ಮರೆತಿದ್ದಾರೆ ಎಂದು ನವಾಜ್‌ ಹೇಳಿದ್ದಾರೆ.

ಕಾರ್ತಿಕ್ ಆರ್ಯನ್ - ಜಾನ್ವಿ ನಡುವೆ ಏನು ನಡೆಯುತ್ತಿದೆ? ದೋಸ್ತಾನಾ 2 ತಡವಾಗುತ್ತಿದೆಯೇಕೆ?

ವೋ ಜಮಾನ ಚಲಾ ಗಲಾ (ಆ ದಿನಗಳು ಹೊರಟು ಹೋದವು). ಒಂದಾನೊಂದು ಕಾಲದಲ್ಲಿ ಚಿತ್ರನಟರ ನಕ್ಷತ್ರಗಳಂತಿದ್ದರು . ಈ ಲಾಕ್‌ಡೌನ್ ಮತ್ತು ಡಿಜಿಟಲ್‌ನ ಪ್ರಚಾರಕ್ಕಿಂತ ಮೊದಲು, ಬಾಲಿವುಡ್ ಎ-ಲಿಸ್ಟರ್‌ಗಳು‌ ತಮ್ಮ ಚಲನಚಿತ್ರಗಳನ್ನು ದೇಶಾದ್ಯಂತ 3,000 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದರು. ಜನರಿಗೆ ಅವರನ್ನು ನೋಡದೆ ಬೇರೆ ದಾರಿ ಇರಲಿಲ್ಲ. ಆದರೆ ಈಗ ಅವರಿಗೆ ಬೇಕಾದಷ್ಟು ಆಯ್ಕೆಗಳಿವೆ, ”ಎಂದು ನಟ ನವಾಜುದ್ದೀನ ಸಿದ್ದಿಕಿ ಹೇಳಿದ್ದಾರೆ. ಈ ಮೂಲಕ ಇನ್ನು ಮಂದೆ ತಾವು OTT Platformಗಳಲ್ಲಿ ನಟಿಸುವುದಿಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. 

Follow Us:
Download App:
  • android
  • ios