ಬಳ್ಳಾರಿ(ಮೇ 09): ಬಾರ್ ಕ್ಲೋಸ್ ಆದಾಗ ಎಷ್ಟು ಅವಾಂತರಗಳಾಗಿದ್ದವೋ ಅದೇ ರೀತಿ ಬಾರ್ ಓಪನ್ ಆದ ಮೇಲೂ ಕುಡುಕುರ ತರಲೆ ಮಾತ್ರ ನಿಂತಿಲ. ಬಾರ್ ಓಪನ್ ಆದ ಖುಷಿಗೆ ಬೇಕಾಬಿಟ್ಟಿ ಕುಡಿದು ಅವರು ಮಾಡಿಕೊಳ್ಳುತ್ತಿರುವ ಅವಾಂತರಗಳು ಒಂದೆರಡಲ್ಲ.

ವ್ಯಕ್ತಿಯೊಬ್ಬ ಕುಡಿತದ ಮತ್ತಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿ ಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿದಾನಂದ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ.

ಕುಡುಕರಿಗೆ ಪ್ರವೇಶ ಇಲ್ಲ ಅಂತ ಮಠಾಧೀಶರು ಹೇಳಿಕೆ ನೀಡಲಿ: ಸಚಿವ ಶೆಟ್ಟರ್

ಈತ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಕುಡಿದ ಮತ್ತಿನಲ್ಲಿ ತನ್ನ ಮನೆಯೊಳಗೆ ಬೆಂಕಿ ಕಡ್ಡಿ ಗೀರಿದ್ದಾನೆ. ಕ್ಷಣಾರ್ಧದಲ್ಲಿ ಮನೆ ಹೊತ್ತಿ ಉರಿದಿದೆ. ಕಡ್ಡಿ ಗೀರಿದಾಗ ಮೊದಲು ಬಟ್ಟೆಗೆ ಬೆಂಕಿ ಬಿದ್ದಿದೆ. ನಂತರ ಮನೆಯೇ ಹೊತ್ತಿ ಉರಿದು ಮನೆಯ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದೆ.

ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದ ಬಾಲಕಿ..!

ಮನೆ ಸುಟ್ಟ ಹಿನ್ನಲೆ ವೃದ್ಧ ಮಹಿಳೆ ಕಣ್ಣಿರು ಹಾಕುತ್ತಾ ತನ್ನ ಗಂಡನ ಕೃತ್ಯವನ್ನು ಹೇಳಿದ್ದಾರೆ. ಬೆಂಕಿ ಹೊತ್ತಿದ ನಂತರ ಚಿದಾನಂದ ಪರಾರಿಯಾಗಿದ್ದಾನೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.