1 ವಾರ ಅಳದೇ ಗಲಾಟೆ ಮಾಡದೇ ಇದ್ದರೆ 100 ರೂ. ಬಹುಮಾನ : ತುಂಟ ಮಗನ ನಿರ್ವಹಿಸಲು ತಂದೆಯ ಹೊಸ ಐಡಿಯಾ

  • ತುಂಟ ಮಗನ ಹದುಬಸ್ತಿನಲ್ಲಿಡಲು ಅಪ್ಪನ ಪ್ಲಾನ್‌
  • ದೈನಂದಿನ ವೇಳಾಪಟ್ಟಿ ಹಾಕಿದ ತಂದೆ
  • ವೇಳಾಪಟ್ಟಿ ಪಾಲಿಸಿದಲ್ಲಿ ಹಣದ ಉಡುಗೊರೆ
Rs 100 for not crying, shouting, fighting for 7 days father and son agreement goes viral in Social Media akb

ಸಣ್ಣ ಮಕ್ಕಳು ತುಟಾಂಟ, ಗಲಾಟೆ, ಅಳು, ಹಠದಿಂದಾಗಿ ಬಹುತೇಕ ಪೋಷಕರಿಗೆ ತಲೆನೋವನ್ನೇ ತಂದಿಡುತ್ತಾರೆ. ಈಗಿನ ಕಾಲದಲಂತೂ ಮನೆಯಲ್ಲೆರಡು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳಲು ಒಬ್ಬರು ಬೇಕು ಎನ್ನುವಷ್ಟು ಮಕ್ಕಳು ಗಲಾಟೆ ಮಾಡಿ ಕಿತಾಪತಿ ಮಾಡುವುದನ್ನು ನೀವು ನೋಡಿರಬಹುದು. ಬಹುಶ: ಮಗನ ಹಠ ಗಲಾಟೆಯಿಂದ ಬೇಸತ್ತ ತಂದೆಯೊಬ್ಬರು, ಆತನನ್ನು ಹದುಬಸ್ತಿನಲ್ಲಿಡಲು ಹೊಸ ಉಪಾಯವೊಂದನ್ನು ಕಂಡು ಹಿಡಿದಿದ್ದಾರೆ. ಏಳು ದಿನಗಳ ಕಾಲ ಯಾವುದೇ ಗಲಾಟೆ, ಜಗಳ, ಅಳುವುದು ಮಾಡದೇ ಇದ್ದಲ್ಲಿ 100 ರೂಪಾಯಿ ಕೊಡುವುದಾಗಿ ತಂದೆ ಮಗನಿಗೆ ಹೇಳಿ ಒಪ್ಪಂದ ಮಾಡಿದ್ದು, ಅಪ್ಪನ ಈ ಒಪ್ಪಂದಕ್ಕೆ ಆರು ವರ್ಷದ ಮಗನೂ ಕೂಡ ಒಪ್ಪಿಕೊಂಡಿದ್ದಾನೆ. 

ಆರು ವರ್ಷದ ಹುಡುಗ  ತನ್ನ ತಂದೆಯೊಂದಿಗೆ ಮಾಡಿಕೊಂಡ ಈ ಒಪ್ಪಂದದಲ್ಲಿ ಆತನ ದೈನಂದಿನ ವೇಳಾಪಟ್ಟಿ ಇದೆ. ಅಲ್ಲದೇ ಉತ್ತಮ ಕಾರ್ಯಕ್ಷಮತೆಗೆ ಆತನಿಗೆ ಬೋನಸ್‌ ಕೂಡ ನೀಡಲಾಗುತ್ತದೆ. ಈ ಒಪ್ಪಂದದಲ್ಲಿ ಆರು ವರ್ಷದ ಬಾಲಕ ಅಬೀರ್‌ನ ( Abir) ದೈನಂದಿನ ವೇಳಾಪಟ್ಟಿ ಇದ್ದು, ಅದನ್ನು ಆತ ಅನುಸರಿಸಬೇಕಾಗುತ್ತದೆ. ಬೆಳಗ್ಗೆ ಅಲಾರಾಂ ಆದ 10 ನಿಮಿಷಗಳ ಒಳಗೆ ಆತ ಹಾಸಿಗೆಯಿಂದ ಏಳಬೇಕು. ಜೊತೆಗೆ ವೇಳಾಪಟ್ಟಿಯಲ್ಲಿರುವಂತೆ ಎಲ್ಲವನ್ನು ಮಾಡಬೇಕು. ಈ ವೇಳಾಪಟ್ಟಿಯನ್ನು ಬಾಲಕನ ತಂದೆ ಟ್ವಿಟ್ಟರ್‌ನಲ್ಲಿ ಹಾಕಿದ್ದು, ಅದೀಗ ವೈರಲ್‌ ಆಗಿದೆ. 

 

ಚೈಲ್ಡ್ ಶೇಮಿಂಗ್ ಎಂದರೇನು ? ನಿಮ್ಮ ಮಕ್ಕಳಿಗೂ ಹೀಗೆ ಮಾಡ್ತಿದ್ದೀರಾ ?
 

ಟ್ವಿಟ್ಟರ್‌ ಬಳಕೆದಾರರಾಗಿದ್ದು,  @Batla_G ಎಂಬ ಟ್ವಿಟ್ಟರ್‌ ಖಾತೆಯಿಂದ ಈ ತಂದೆ ಮಗನ ಒಪ್ಪಂದದ ಫೋಟೋ ಪೋಸ್ಟ್ ಆಗಿದೆ.  ಇದರಲ್ಲಿ ಕೈ ಬರಹಹದ ಒಪ್ಪಂದವಿದ್ದು, ಬಾಲಕ ಅಬೀರ್‌ ಇದಕ್ಕೆ ಸಹಿ ಹಾಕಿದ್ದಾನೆ. ಈ ಒಪ್ಪಂದವೂ ಬಾಲಕನ ದೈನಂದಿನ ವೇಳಾಪಟ್ಟಿಯನ್ನು ತಿಳಿಸುತ್ತಿದ್ದು, ಬೆಳಗ್ಗೆ ಏಳುವಲ್ಲಿಂದ ಆರಂಭವಾಗಿ ರಾತ್ರಿ ಮಲಗುವವವರೆಗಿನ ವೇಳಾಪಟ್ಟಿ ಈ ಒಪ್ಪಂದದಲ್ಲಿದೆ. ಜೊತೆಗೆ ಊಟ ಆಟವೂ ಇದರಲ್ಲಿ ಸೇರಿದೆ. ಒಂದು ವೇಳೆ ಬಾಲಕ ಸಮರ್ಪಕವಾಗಿ ದಿನನಿತ್ಯದ ಚಟುವಟಿಕೆಯನ್ನು ಪೂರ್ಣಗೊಳಿಸಿದರೆ ಅವನಿಗೆ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ.

Parenting Tips : ಕ್ಷಮೆ ಕೇಳಿದ್ರೆ ಸಾಲಲ್ಲ, ಮಕ್ಕಳಿಗೆ ತಿಳಿಸಿ ಅದರ ಅರ್ಥ
 

ಬಾಲಕ ಆ ದಿನ ಅಳುವುದು ಕೂಗುವುದು ಗೊಣಗುವುದು ಮಾಡದೇ ಇದ್ದಲ್ಲಿ 10 ರೂಪಾಯಿ ನೀಡಲು ತಂದೆ ಒಪ್ಪಿದ್ದು, ಒಂದು ವಾರ ಪೂರ್ತಿ  ಇದನ್ನೇ ಅನುಸರಿಸಿದರೆ ಬಾಲಕನಿಗೆ 100 ರೂ. ನೀಡಲಾಗುತ್ತದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗಿನ ಶಾಲಾ ಸಮಯದಲ್ಲಿ ಊಟಕ್ಕೂ ಸಮಯ ಇರಿಸಲಾಗಿದೆ.  . ಹಾಲು ಕುಡಿಯುವ ಸಮಯದಲ್ಲಿ ಟಿವಿ ನೋಡಬಹುದಾಗಿದ್ದು, ಅದಕ್ಕೆ 20 ನಿಮಿಷ ಮೀಸಲಿರಿಸಲಾಗಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಹಾಲು ಕುಡಿಯುವ ಸಮಯ ಮತ್ತು ರಾತ್ರಿಯ ಊಟದ ಸಮಯದಲ್ಲಿ ಮಾತ್ರ ಟಿವಿ ನೋಡಬಹುದು.  ಆದರೆ ಬೆಳಗ್ಗೆ ಏಳಲು ಇನ್ನು 10 ನಿಮಿಷ ಸಮಯ ಬೇಕು ಪಪ್ಪಾ ಎಂದು ಬಾಲಕ ಕೇಳಿದ್ದು, ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ತಂದೆ ಹೇಳಿದ್ದಾರೆ. 

ಈ ತಂದೆ ಇದಕ್ಕೂ ಮೊದಲು ಪಾಯಿಂಟ್ ಸಿಸ್ಟಮ್ ಮತ್ತು ಸ್ಟಾರ್ ಚಾರ್ಟ್  ಅನ್ನು ಬಳಸಿದ್ದರು. ಆದರೆ ಅದು ಕೆಲಸ ಮಾಡಲಿಲ್ಲ ಬಾಲಕ ಒಳ್ಳೆಯ ಹುಡುಗನಾಗದೆಯೂ ನನಗೆ ಸ್ಟಾರ್ ಬೇಕು ಎಂದು ಅಳಲು ಪ್ರಾರಂಭಿಸಿದ ಎಂದು ತಂದೆ ಹೇಳಿದ್ದಾರೆ.  ನೆಟ್ಟಿಗರು  ಈ ಒಪ್ಪಂದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.  ಒಂದು ವಾರವೂ ಈ ವೇಳಾಪಟ್ಟಿಯನ್ನು ಬಾಲಕ ಪಾಲಿಸಲಾರ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇಂತಹ ವೇಳಾಪಟ್ಟಿ ಮಗುವಿಗೆ ಆತಂಕವನ್ನು ನೀಡುತ್ತದೆ ಎಂದು ಹೇಳಿದರು.  6 ವರ್ಷ ವಯಸ್ಸಿನ ಬಾಲಕ, ತನ್ನ ವೇಳಾಪಟ್ಟಿಯಿಂದಲೂ ಹಣ ಗಳಿಸಬಹುದು ಎಂಬುದು ಯಾರಿಗೆ ಗೊತ್ತಿತ್ತು. ಹಾಗೆಯೇ 21 ವರ್ಷ ವಯಸ್ಸಿನ ಮಗುವಿನ ಫೋನ್ ಮತ್ತು ಟ್ವಿಟರ್ ಬಳಕೆಯನ್ನು ನಿರ್ವಹಿಸಲು ಒಪ್ಪಂದ ಮತ್ತು ಸಲಹೆಗಳು ಬೇಕಾಗಿದೆ ಎಂದು ಟ್ವಿಟ್ವರ್‌ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ನಗು ಮೂಡಿಸುತ್ತಿದೆ. 

ಬಹುಶಃ ಈ ಐಡಿಯಾ ಬೇರೆ ಪೋಷಕರಿಗೂ ನೆರವಾಗಬಹುದೇನೋ.

Latest Videos
Follow Us:
Download App:
  • android
  • ios