2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಹಂಚು ಪತ್ತೆಯಾಗಿದೆ. 2 ರಿಂದ 3 ಎಕೆ-47 ಇದ್ದ ಬೋಟ್‌ ಅನ್ನು ಮಹಾರಾಷ್ಟ್ರದ ರಾಯಗಢದ ಸಮುದ್ರ ತೀರದಲ್ಲಿ ಪತ್ತೆ ಮಾಡಲಾಗಿದ್ದು, ಭದ್ರತಾ ಕಾರಣಗಳಿಗಾಗಿ ಇಡೀ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪೊಲೀಸ್‌ ಬ್ಲಾಕ್‌ ಮಾಡಿದೆ. 

ಮುಂಬೈ (ಆ. 18): ಮುಂಬೈನ ರಾಯಗಢ ಜಿಲ್ಲೆಯ ಶ್ರೀವರ್ಧನ್ ಎಂಬಲ್ಲಿ ಅನುಮಾನಾಸ್ಪದವಾಗಿ ಬೋಟ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ದೋಣಿಯಲ್ಲಿ ಎಕೆ-47 ರೈಫಲ್‌ಗಳು ಪತ್ತೆಯಾಗಿವೆ. ಭದ್ರತೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಪೊಲೀಸರು ದಿಗ್ಬಂಧನ ವಿಧಿಸಿದ್ದಾರೆ. ಇದಲ್ಲದೇ ಹರಿಹರೇಶ್ವರದಲ್ಲಿ ಚಿಕ್ಕ ದೋಣಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಲೈಫ್ ಜಾಕೆಟ್ ಹಾಗೂ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಈ ಘಟನೆ ಸಂಚಲನ ಮೂಡಿಸಿದ್ದು, ಜಿಲ್ಲೆಯಾದ್ಯಂತ ಪೊಲೀಸರು ದಿಗ್ಬಂಧನ ವಿಧಿಸಿದ್ದಾರೆ. ವರದಿಗಳ ಪ್ರಕಾರ, ಶ್ರೀವರ್ಧನ್‌ನ ಹರಿಹರೇಶ್ವರ ಮತ್ತು ಭಾರದ್‌ಖೋಲ್‌ನಲ್ಲಿ ದೋಣಿಗಳು ಪತ್ತೆಯಾಗಿವೆ. ಹರಿಹರೇಶ್ವರದ ದೋಣಿಯಲ್ಲಿ ಎರಡು-ಮೂರು ಎಕೆ-47 ರೈಫಲ್ ಮತ್ತು ಬುಲೆಟ್‌ಗಳು ಪತ್ತೆಯಾಗಿವೆ. ಎರಡೂ ದೋಣಿಗಳ ಬಳಿ ಯಾರೂ ಕೂಡ ಪತ್ತೆಯಾಗಿಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ ಈ ದೋಣಿಗಳು ಇಂಗ್ಲೆಂಡ್‌ನಲ್ಲಿ ನೋಂದಣಿಯಾಗಿದ್ದು, ಓಮನ್‌ ತೀರದಲ್ಲಿ ಇದರ ರಕ್ಷಣೆ ಮಾಡಲಾಗಿತ್ತು. ಇದರ ನಡುವೆ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಮಾತನಾಡಿದ್ದು, ರಾಜ್ಯದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿತ್ತು. ತೀವ್ರ ರೂಪದಲ್ಲಿ ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

Scroll to load tweet…

ಎರಡು ಅನುಮಾನಾಸ್ಪದ ದೋಣಿಗಳು ಪತ್ತೆಯಾಗುತ್ತಿದ್ದಂತೆ ಕಾರ್ಯಪ್ರವೃತ್ತವಾಗಿರುವ ಸ್ಥಳೀಯ ಪೊಲೀಸ್‌, ಸಮೀಪದ ಜನರು ಹಾಗೂ ಮೀನುಗಾರರನ್ನು ವಿಚಾರಣೆ ಮಾಡುತ್ತಿದ್ದು, ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿದೆ.

26/11 ಮುಂಬೈ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿ ನಡೆಸುವ ಯೋಜನೆ ಇದು ಎಂದು ಹೇಳಲಾಗಿದೆ. 2008ರಲ್ಲಿ ಮುಂಬೈ ಮೇಲೆ ದಾಳಿ ನಡೆಸುವ ಮುನ್ನ ಗುಜರಾತ್‌ನ ಪೋರ್‌ ಬಂದರ್‌ನಲ್ಲಿ ಇಂಥದ್ದೇ ರೀತಿಯ ಅನುಮಾನಾಸ್ಪದ ಬೋಟ್‌ ಪತ್ತೆಯಾಗಿತ್ತು. ಈ ದೋಣಿ ಎಲ್ಲಿಂದ ಬಂತು ಮತ್ತು ಅದರಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು ಯಾರು ಕಳುಹಿಸಿದ್ದಾರೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಯಾರಾದರೂ ದೋಣಿಯಲ್ಲಿ ಬಂದಿದ್ದಾರೆಯೇ? ಬಂದಿದ್ದರೆ ಅವರು ಈಗ ಎಲ್ಲಿದ್ದಾರೆ? ಎನ್ನುವ ಮಾಹಿತಿಗಳನ್ನು ಪೊಲೀಸ್‌ ಕಲೆಹಾಕುತ್ತಿದ್ದಾರೆ.

ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್‌ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ

ಕೋಸ್ಟ್‌ ಗಾರ್ಡ್‌ಗೂ ಇಲ್ಲ ಮಾಹಿತಿ: ಹರಿಹರೇಶ್ವರ ಕಡಲತೀರದ ಬಳಿ ದೋಣಿಯಲ್ಲಿ ಎಕೆ 47 ಪತ್ತೆಯಾಗಿರುವ ಬಗ್ಗೆ ರಾಯಗಡ ಎಸ್ಪಿ ಅಶೋಕ್ ಧುಧೆ ಖಚಿತಪಡಿಸಿದ್ದಾರೆ. ಸ್ಪೀಡ್ ಬೋಟ್ ಅಥವಾ ಇನ್ನಾವುದೇ ಬೋಟ್ ಎಂಬುದರ ಕುರಿತು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಕುರಿತಾಗಿ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಇದು ಆಸ್ಟ್ರೇಲಿಯಾ ನಿರ್ಮಿತ ಬೋಟ್ ಎಂದು ಮೂಲಗಳಿಂದ ತಿಳಿದು ಬಂದಿದೆ. ಹರಿಹರೇಶ್ವರ ಕಡಲತೀರದ ಬಳಿ ದೋಣಿಯಲ್ಲಿದ್ದ ಜನರು ತಮ್ಮ ಪ್ರವೇಶದ ಬಗ್ಗೆ ಕೋಸ್ಟ್ ಗಾರ್ಡ್‌ಗಳಿಗೆ ಮಾಹಿತಿ ನೀಡಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಡ್ರೋನ್‌, ಗಾಳಿಪಟ ಬಳಸಿ ದಾಳಿ: ಸ್ವಾತಂತ್ರ್ಯೋತ್ಸವದ ಪ್ರಧಾನಿ ಭಾಷಣದ ಮೇಲೆ ಉಗ್ರರ ಕರಿನೆರಳು

ಮುಂಬೈಗೆ 200 ಕಿ.ಮೀ ದೂರದಲ್ಲಿ ಬೋಟ್‌ ಪತ್ತೆ: ಈ ಬೋಟ್‌ಗಳು ಸಿಕ್ಕಿರುವ ಸ್ಥಳ ಮುಂಬೈನಿಂದ 200 ಕಿಲೋಮೀಟರ್‌ ದೂರದಲ್ಲಿದ್ದರೆ, ಪುಣೆ ನಗರದಿಂದ 170 ಕಿಲೋಮೀಟರ್‌ ದೂರದಲ್ಲಿದೆ. ರಾಯ್‌ಗಢ ಎಂಪಿ ಸುನೀಲ್‌ ತತ್ಕರೆ ಕೂಡ ಮಾತನಾಡಿದ್ದು, ಪ್ರಕರಣವನ್ನು ಎಟಿಎಸ್ ನಿಭಾಯಿಸಲಿದೆ ಎಂದು ಹೇಳಿದ್ದಾರೆ. ಸ್ಥಳೀಯ ಶಾಸತಿ ಆದಿತಿ ತತ್ಕರೆ ಕೂಡ ಇದೇ ಮಾತನ್ನು ಪುನರುಚ್ಛರಿಸಿದ್ದಾರೆ.

ರಾಯಗಡ ತೀರದಲ್ಲಿ ಈ ಹಿಂದೆಯೂ ಅನುಮಾನಾಸ್ಪದ ಚಟುವಟಿಕೆಗಳು ನಡೆದಿದ್ದವು. 1993ರ ಸ್ಫೋಟಕ್ಕೂ ಮುನ್ನ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೂಚನೆ ಮೇರೆಗೆ ಇಲ್ಲಿನ ಶೇಖಾಡಿ ಕರಾವಳಿಯಲ್ಲಿ ಸ್ಫೋಟಕ್ಕೆ ಬಳಸಿದ್ದ ಆರ್ ಡಿಎಕ್ಸ್ ಅನ್ನು ಇಳಿಸಲಾಗಿತ್ತು ಎಂದು ಹೇಳಲಾಗಿದೆ. 26/11 ರಲ್ಲಿ, ಕಸಬ್ ಸೇರಿದಂತೆ 10 ಭಯೋತ್ಪಾದಕರು ರಾಯಗಡ ಸಮುದ್ರವನ್ನು ದಾಟಿ ಮುಂಬೈ ತಲುಪಿದ್ದರು. ಕಸಬ್ ಮತ್ತು ಅವನ ತಂಡವು ಇಲ್ಲಿ ತಮ್ಮ ದೋಣಿಯೊಂದನ್ನು ಬದಲಾಯಿಸಿದೆ ಎಂದೂ ಸಹ ಹೇಳಲಾಗಿದೆ.