ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್‌ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ

Kashmiri Pandit shot dead by terrorists: ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಕಾಶ್ಮೀರಿ ಪಂಡಿತ್‌ ಒಬ್ಬರು ಪ್ರಾಣ ತೆತ್ತಿದ್ದಾರೆ. ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. 

kashmiri pandit shot dead in srinagar by terrorists

ಶ್ರೀನಗರ: ಕಾಶ್ಮೀರದ ಆಪಲ್‌ ಆರ್ಚಾರ್ಡ್‌, ಶೋಪಿಯನ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಕಾಶ್ಮೀರಿ ಪಂಡಿತರೊಬ್ಬರು ಬಲಿಯಾಗಿದ್ದಾರೆ. ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. "ಶೋಪಿಯನ್‌ನ ಚೋಟಿಪೊರಾ ಏರಿಯಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಗಾಯಾಳುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಇನ್ನಷ್ಟು ಮಾಹಿತಿಯನ್ನು ನೀಡಲಾಗುವುದು," ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿದೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರೂ ಸಹೋದರರು. ಇಬ್ಬರನ್ನೂ ಟಾರ್ಗೆಟ್‌ ಮಾಡಿಯೇ ಈ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್‌ ಇಬ್ಬರಲ್ಲಿ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮತ್ತೆ ದಾಳಿಗಳು ಹೆಚ್ಚುತ್ತಿವೆ. 

ಸುನೀಲ್‌ ಕುಮಾರ್‌ ಮೃತ ಕಾಶ್ಮೀರಿ ಪಂಡಿತ್‌ ಎಂದು ಗುರುತಿಸಲಾಗಿದೆ. ಮತ್ತು ಗಂಭೀರವಾಗಿ ಗಾಯಗೊಂಡಿರುವಾತನನ್ನು ಪಿಂಟು ಕುಮಾರ್‌ ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್‌ ತಿಂಗಳಿನಿಂದ ಕಾಶ್ಮೀರಿ ಪಂಡಿತರ ಮೇಲೆ ಪೂರ್ವನಿಯೋಜಿತ ದಾಳಿಗಳಾಗುತ್ತಿವೆ. ಅಕ್ಟೋಬರ್‌ ತಿಂಗಳೊಂದರಲ್ಲೇ ಏಳು ಜನರನ್ನು ಹತ್ಯೆ ಮಾಡಲಾಗಿತ್ತು. ಅದರಲ್ಲಿ ಒಬ್ಬ ಕಾಶ್ಮೀರಿ ಪಂಡಿತ್‌, ಇಬ್ಬರು ಹಿಂದೂಗಳು ಮತ್ತೊಬ್ಬ ಸಿಖ್‌ ಸಮುದಾಯಕ್ಕೆ ಸೇರಿದ್ದರು. 

ಇದನ್ನೂ ಓದಿ: 37 ITBP ಸೈನಿಕರು, ಇಬ್ಬರು ಕಾಶ್ಮೀರ ಪೊಲೀಸರು ತೆರಳುತ್ತಿದ್ದ ವಾಹನ ಅಪಘಾತ: 6 ಸೈನಿಕರ ಸಾವು

ಈ ಘಟನೆಯಾದ ನಂತರ ಮತ್ತೆ ಹಲವಾರು ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ವಲಸೆ ಹೋಗಿದ್ದರು. ಮೇ ತಿಂಗಳಲ್ಲಿ, ಬುದ್ಗಾಮ್‌ನ ತಹಶಿಲ್ದಾರ್‌ ಕಚೇರಿಗೆ ನುಗ್ಗಿದ ಭಯೋತ್ಪಾದಕರು ರಾಹುಲ್‌ ಭಟ್‌ ಎಂಬ ಕಾಶ್ಮೀರಿ ಪಂಡಿತರನ್ನು ಕೊಲೆಗೈದಿದ್ದರು. ರಾಹುಲ್‌ ಭಟ್‌ ಅಲ್ಪಸಂಖ್ಯಾತ ಕೋಟಾದಡಿ ತಹಶಿಲ್ದಾರ್‌ ಆಗಿದ್ದರು. 

ಇನ್ನಷ್ಟು ಮಾಹಿತಿ ಶೀಘ್ರದಲ್ಲಿ... 

Latest Videos
Follow Us:
Download App:
  • android
  • ios