ಇ ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದ BMW ಕಾರು: ಸ್ಟಾಪ್ ನರ್ಸ್ ಸೇರಿ ಇಬ್ಬರು ಸಾವು
ಐವರು ಪ್ರಯಾಣಿಸುತ್ತಿದ್ದ ಇ ರಿಕ್ಷಾಗೆ ಹಿಂಬದಿಯಿಂದ BMW X4 ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನೋಯ್ಡಾದ ಸೆಕ್ಟರ್ 35ರ ಬಳಿಯ ಸುಮಿತ್ರಾ ಆಸ್ಪತ್ರೆ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನವದೆಹಲಿ: ಐವರು ಪ್ರಯಾಣಿಸುತ್ತಿದ್ದ ಇ ರಿಕ್ಷಾಗೆ ಹಿಂಬದಿಯಿಂದ BMW X4 ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವಿಗೀಡಾಗಿ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನೋಯ್ಡಾದ ಸೆಕ್ಟರ್ 35ರ ಬಳಿಯ ಸುಮಿತ್ರಾ ಆಸ್ಪತ್ರೆ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಐವರಿದ್ದ ರಿಕ್ಷಾ ಸೆಕ್ಟರ್ 12ರ ಇಂಟರ್ ಸೆಕ್ಷನ್ 22ರ ಬಳಿಯಿಂದ ನೋಯ್ಡಾದ ಸಿಟಿ ಸೆಂಟರ್ ಮೆಟ್ರೋ ಸ್ಟೇಷನ್‌ನತ್ತ ಸಾಗುತ್ತಿತ್ತು. ಈ ವೇಳೆ ಸುಮಿತ್ರಾ ಆಸ್ಪತ್ರೆ ಬಳಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ರಿಕ್ಷಾಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಅಲ್ಲಿದ್ದ ಜನರು ಎಲ್ಲಾ ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರು ಆಸ್ಪತ್ರೆಗೆ ಕರೆತರುತ್ತಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸಹಾಯಕ ಉಪ ಪೊಲೀಸ್ ಕಮೀಷನರ್ ಮನೀಷ್ ಮಿಶ್ರಾ ಹೇಳಿದ್ದಾರೆ.
ಗಂಟೆಗೆ 160 ಕಿಲೋ ಮೀಟರ್ ವೇಗ, ಜತೆಗೆ ಇನ್ಸ್ಟಾಗ್ರಾಮ್ ಲೈವ್: ಯುವಕರ ಲಾಂಗ್ ಡ್ರೈವ್ ಆಯ್ತು ಲಾಸ್ಟ್ ಡ್ರೈವ್
ಮೃತರನ್ನು 50 ವರ್ಷದ ಮೊಹಮ್ಮದ್ ಮುಸ್ತಫಾ, 25 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ರಶ್ಮಿ, ಸೆಕ್ಟರ್ 11ರ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳನ್ನು ಆಟೋ ಚಾಲಕ ರಾಜೇಂದ್ರ(45), ಪವನ್ (27), ಸೂರಜ್ (20) ಎಂದು ಗುರುತಿಸಲಾಗಿದೆ. ಗಾಯಾಗಳುಗಳಿಗೆ ಸೆಕ್ಟರ್ 110ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಎಂಡಬ್ಲ್ಯು ಕಾರನ್ನು ಚಲಾಯಿಸುತ್ತಿದ್ದವರನ್ನು ಸೆಕ್ಟರ್ 41ರ ನಿವಾಸಿಗಳಾದ ಆದಿ ಹಾಗೂ ತುಷಾರ್ ಎಂದು ಗುರುತಿಸಲಾಗಿದ್ದು, ಇಬ್ಬರು ತಮ್ಮ 20ರ ಹರೆಯದಲ್ಲಿರುವವರಾಗಿದ್ದಾರೆ. ಅವರನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಆದರೆ ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾನೆ.
ಪ್ರತ್ಯೇಕ ರಸ್ತೆ ಅಪಘಾತ ; ಬೈಕ್ ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ ಗಾಯ