ಕಾರು-ಬೈಕ್‌  ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕರ್ಕಾ ಆಲೂರು ಎಂಬಲ್ಲಿ ನಡೆದಿದೆ.

ಕಾರವಾರ, ಉತ್ತರಕನ್ನಡ (ಮೇ.10): ಕಾರು-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕರ್ಕಾ ಆಲೂರು ಎಂಬಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಳಿಯಾಳ ತಾಲೂಕಿನ ದುಸಗಿ ನಿವಾಸಿ ಸುನೀಲ್ ಬೋಕ್ನೆಕರ್ (28) ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ. ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕಾರು ಮತ್ತು ಹಳಿಯಾಳದಿಂದ ದಾಂಡೇಲಿಗೆ ಬರುತ್ತಿದ್ದ ದ್ವಿಚಕ್ರ ವಾಹನ ನಡುವೆ ನಡೆದಿರುವ ಅಪಘಾತ. ಎರಡು ಕಡೆಯಿಂದಲೂ ವೇಗವಾಗಿ ಎದುರುಬದರಾಗಿ ಡಿಕ್ಕಿ. ಕಾರಿಗೆ ಡಿಕ್ಕಿಯಾದ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ವಾಹನ ಸವಾರ ಗಂಭೀರ ಗಾಯ. ಅಪಘಾತದಿಂದಾಗಿ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ನಡುರಸ್ತೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. 

ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ಬೋಕ್ನೇಕರ್ ಎಂಬಾತನನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ; ಹಿಡಿಯಲು ಓಡೋಡಿ ಪೊಲೀಸರೇ ಸುಸ್ತು!

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಬೈಕ್ ಸವಾರ ಸಾವು

ಚಿಕ್ಕೋಡಿ: ಬೈಕ್ ಹಾಗೂ KSRTC ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗ ಪಟ್ಟಣದ ಕೋರ್ಟ್ ಬಳಿ ನಡೆದಿದೆ.

ಲಕ್ಕಪ್ಪ ಮುದಕಪ್ಪ ಪಿಡ್ಡಿ (34) ಮೃತ ಬೈಕ್ ಸವಾರ. ಮೃತ ಲಕ್ಕಪ್ಪ ರಾಯಬಾಗ ತಾಲೂಕಿನ ಬ್ಯಾಕೂಡ್ ಗ್ರಾಮದ ನಿವಾಸಿಯಾಗಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.