ಹಿಂದೂಗಳ ಗುರಿಯಾಗಿಸಿ ಚಾಕು ದಾಳಿಸಿ ನಡೆಸಿದ್ದ ಆರೋಪಿಯ 5 ಅಂತಸ್ತಿನ ಮನೆ ಧ್ವಂಸ!
ಚಾಕು ಮೂಲಕ ಐವರು ಹಿಂದೂಗಳ ಮೇಲೆ ದಾಳಿ ನಡಸಿ ಗಂಭೀರವಾಗಿ ಗಾಯಗೊಳಿಸಿದ್ದ ಆರೋಪಿ ಇಂಕ್ವಿಲಾಬ್ ಖಾನ್ ಅಕ್ರಮ ಮನೆಯನ್ನು ಬಿಎಂಸಿ ಧ್ವಂಸಗೊಳಿಸಲಾಗಿದೆ.
ಮುಂಬೈ(ಮಾ.20) ಹಿಂದೂಗಳನ್ನು ಗುರಿಯಾಗಿಸಿ ಇತ್ತೀಚೆಗೆ ಇಂಕ್ವಿಲಾಬ್ ಖಾನ್ ಚಾಕು ಮೂಲಕ ದಾಳಿ ನಡೆಸಿ ಘಟನೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಈತನ ಚಾಕು ದಾಳಿಗೆ ಐವರು ಗಂಭೀರವಾಗಿ ಗಾಯಗೊಂಡಿದ್ದರು. ದೇವಸ್ಥಾನ ಪಕ್ಕದಲ್ಲೇ ಸರ್ಕಾರಿ ಜಾಗ ಅತಿಕ್ರಮಣ ಮಾಡಿ 5 ಅಂತಸ್ತಿನ ಮನೆ ಕಟ್ಟಿದ್ದ ಇಂಕ್ವಿಲಾಬ್ ಖಾನ್‌ಗೆ ಸಂಕಷ್ಟ ಹೆಚ್ಚಾಗಿದೆ. ಅನಧಿಕೃತ ಮನೆಯನ್ನು ಬೃಹತ್ ಮುಂಬೈ ಪಾಲಿಕೆ ಧ್ವಂಸ ಮಾಡಿದೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಮಹಾರಾಷ್ಟ್ರ ಸಚಿವರ ಆದೇಶದಂತೆ ಅನಧಿಕೃತ ಮನೆಯನ್ನು ಬಿಎಂಸಿ ಧ್ವಂಸ ಮಾಡಿದೆ.
ಸಾಕಿ ನಾಕಿ ವಲಯದಲ್ಲಿ ಇಂಕ್ವಿಲಾಬ್ ಖಾನ್ ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದ. ಕಾರಣ ಈತನ ವಿರುದ್ದ ಹಿಂದೂಗಳು ಪ್ರತಿಭಟನೆ, ಕಾನೂನು ಹೋರಾಟ ಆರಂಭಿಸಿದ್ದರು. ಇದಕ್ಕೆ ಮುಖ್ಯ ಕಾರಣ ಚತ್ರಪತಿ ಶಿವಾಜಿ ಅತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿತ್ತು. ಈ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟಲಾಗಿತ್ತು.
UP, MP ಬಳಿಕ ರಾಜಸ್ಥಾನದಲ್ಲಿ ಬುಲ್ಡೋಜರ್ ಘರ್ಜನೆ, ಕರಣಿ ಸೇನೆ ಅಧ್ಯಕ್ಷನ ಹತ್ಯೆ ಆರೋಪಿ ಮನೆ ಧ್ವಂಸ!
ಕಟ್ಟಡದ ಪಕ್ಕದಲ್ಲೇ ಇದ್ದ ಹಿಂದೂ ದೇವಸ್ಥಾನಕ್ಕೂ ಇದರಿಂದ ಸಮಸ್ಯೆಯಾಗಿತ್ತು. ಹೀಗಾಗಿ ದೇವಸ್ಥಾನದ ಭಕ್ತರು ಇಂಕ್ವಿಲಾಬ್ ವಿರುದ್ದ ಆಕ್ರೋಶ ಹೊರಹಾಕಿದ್ದರು. ಇದರಿಂದ ಸಿಟ್ಟಿಗೆದ್ದ ಇಂಕ್ವಿಲಾಬ್ ಖಾನ್ ಮಾರ್ಚ್ 14 ರಂದು 23 ವರ್ಷದ ಸಿದ್ದೇಶ್ ಪ್ರಕಾಶ್ ಘೋರ್ಪಡೆ, 28 ವರ್ಷದ ರಾಜೇಶ್ ತಂಗರಾಜ್ ಚೆಟ್ಟಿಯಾರ್, 52 ವರ್ದ ಲಕ್ಷ್ಮಿ ಚೆಟ್ಟಿಯಾರ್, 20 ವರ್ಷದ ವಿಕ್ಕಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ.
ಈ ದಾಳಿ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಕೆಲ ಹಿಂದೂಗಳ ಮೇಲೂ ದಾಳಿಗೆ ಮುಂದಾಗಿದ್ದ. ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಇಂಕ್ವಿಲಾಬ್ ಖಾನ್ ತಲೆಮರೆಸಿಕೊಂಡಿದ್ದ. ಈ ವೇಲೆ ಸಾಕಿ ನಾಕಿ ವಲಯದಲ್ಲಿ ಈತನ 5 ಅಂತಸ್ತಿನ ಕಟ್ಟಡ ಅನಧಿಕೃತ ಮನೆಯನ್ನು ಮುಂಬೈ ಪಾಲಿಕೆ ಭಾರಿ ಪೊಲೀಸ್ ಬಂದೋಬಸ್ತ್ ಮೂಲಕ ಧ್ವಂಸ ಮಾಡಿದೆ.ಇಂಕ್ವಿಲಾಬ್ ಖಾನ್ ವಿರುದ್ದ ಈಗಾಗಲೇ ಡ್ರಗ್ಸ್ ಸಾಗಾಟ ಪ್ರಕರಣ ಸೇರಿದಂತೆ ಹಲವು ಇತರ ಪ್ರಕರಣಗಳು ದಾಖಲಾಗಿದೆ.
ಹಿಂದೂ ಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ ಹೊಟೆಲ್ ಕಟ್ಟಡವನ್ನೇ ಧ್ವಂಸಗೊಳಿಸಿದ ಸರ್ಕಾರ!
ಖಾನ್ ಮನೆಯ ಪಕ್ಕದಲ್ಲಿದ್ದ ಹಿಂದೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕಿರುಕಳು ನೀಡುವ ಪ್ರಯತ್ನ ಮಾಡಿದ್ದ. ಸ್ಥಳೀಯ ಆಡಲಿತ ಈತನ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾಗಿತ್ತು. ಆದರೆ ದಾಳಿ ಬಳಿಕ ಈ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು.